WWE: ರಸ್ಲಿಂಗ್ ದೈತ್ಯ ಅಂಡರ್‌ಟೇಕರ್ ಬಾಸ್ಕೆಟ್‌ಬಾಲ್ ಆಟಗಾರ

By Jayaraj
Sep 16, 2024

Hindustan Times
Kannada

WWE ರಸ್ಲಿಂಗ್‌ ನೋಡುತ್ತಾ ಬಂದವರಿಗೆ ದಿ ಅಂಡರ್‌ಟೇಕರ್ ಹೊಸಬರೇನಲ್ಲ. ಇವರು ಫೇಮಸ್‌ ಕುಸ್ತಿಪಟು.

ಸದ್ಯ ರಸ್ಲಿಂಗ್‌ನಿಂದ ನಿವೃತ್ತಿಯಾಗಿರುವ ಈ ಕುಸ್ತಿಪಟುವಿನ ನಿಜವಾದ ಹೆಸರು ಮಾರ್ಕ್ ವಿಲಿಯಂ ಕಾಲವೇ.

ಅಂಡರ್‌ಟೇಕರ್ 1990ರ ನವೆಂಬರ್ 22ರಂದು ಸರ್ವೈವರ್ ಸೀರೀಸ್ ಮೂಲಕ ಕುಸ್ತಿಲೋಕ WWEಗೆ ಪದಾರ್ಪಣೆ ಮಾಡಿದರು.

ಅಂಡರ್‌ಟೇಕರ್ ಹುಟ್ಟಿದ್ದು 1965ರ ಮಾರ್ಚ್ 24ರಂದು.

ಬರೋಬ್ಬರಿ 6 ಅಡಿ 9 ಇಂಚು ಎತ್ತರದ ಅಂಡರ್‌ಟೇಕರ್ WWEನಲ್ಲಿ ರಸಲ್‌ಮೇನಿಯಾ ಪಂದ್ಯಾವಳಿಗಳಲ್ಲಿ ದಾಖಲೆಯ ಸತತ 21 ಪಂದ್ಯಗಳನ್ನು ಗೆದ್ದಿದ್ದಾರೆ.

ಇಷ್ಟೇ ಅಲ್ಲದೆ, WWE ಚಾಂಪಿಯನ್‌ಶಿಪ್ ಅನ್ನು 7 ಬಾರಿ ಅಂಡರ್‌ಟೇಕರ್ ವಶಪಡಿಸಿಕೊಂಡಿದ್ದಾರೆ.

ರಸ್ಲಿಂಗ್‌ ರಿಂಗ್‌ನಲ್ಲಿ ಅಂಡರ್‌ಟೇಕರ್‌ ನಿಂತಿದ್ದರೆ ಅವರನ್ನು ನೋಡಲು ಸಣ್ಣ ಪುಟ್ಟ ಕುಸ್ತಿಪಟುಗಳು ಅವರನ್ನು ನೋಡಲು ಭಯಪಡುತ್ತಿದ್ದರು.

ತಮ್ಮ ಶಾಲಾ ದಿನಗಳಲ್ಲಿ ಅಂಡರ್‌ಟೇಕರ್ ಬಾಸ್ಕೆಟ್‌ಬಾಲ್ ಆಡುತ್ತಿದ್ದರು. ಆನಂತರ ಕುಸ್ತಿ ಕಡೆ ಮೋಹ ಬೆಳೆಸಿಕೊಂಡರು.

WWEನಲ್ಲಿ ಅಂಡರ್‌ಟೇಕರ್ ಹಲವು ಬಾರಿ ಭಾರತೀಯ ಕುಸ್ತಿಪಟು 'ದಿ ಗ್ರೇಟ್ ಖಲಿ'ಯನ್ನು ಎದುರಿಸಿದ್ದಾರೆ.

Instagram

ನಿರುದ್ಯೋಗಿ ಆಗಿದ್ರೂ ಪರ್ಸನಲ್‌ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ... 

Pixabay