ವಾಟ್ಸಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದ್ದಾರ? ಹೀಗೆ ಪರಿಶೀಲಿಸಿ

By Praveen Chandra B
Nov 27, 2024

Hindustan Times
Kannada

ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿರಬಹುದು.

ನಿಮ್ಮನ್ನು ಯಾರಾದರೂ ವಾಟ್ಸಪ್‌ನಲ್ಲಿ ಬ್ಲಾಕ್‌ ಮಾಡಿದ್ದಾರೆಯೇ ಎಂದು ತಿಳಿಯಲು ಹಲವು ಉಪಾಯಗಳು ಇವೆ.

ವಾಟ್ಸಪ್‌ನಲ್ಲಿ ಯಾರಾದರೂ ನಿಮ್ಮ ಕಾಂಟ್ಯಾಕ್ಟ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಿದರೆ ನಿಮಗೆ ಅವರ ಲಾಸ್ಟ್‌ ಸೀನ್‌, ಆನ್‌ಲೈನ್‌ ಸ್ಟೇಟಸ್‌ ಇತ್ಯಾದಿಗಳನ್ನು ನೋಡಲಾಗುವುದಿಲ್ಲ. 

ನಿಮ್ಮನ್ನು ಯಾರಾದರೂ ಬ್ಲಾಕ್‌ ಮಾಡಿದರೆ ಅವರ ಪ್ರೊಫೈಲ್‌ ಫಿಕ್ಚರ್‌ ನಿಮಗೆ ಕಾಣಿಸದು. 

ಸಾಮಾನ್ಯವಾಗಿ ಪ್ರೊಫೈಲ್‌ ಫಿಕ್ಚರ್‌ ಹಾಕುವ ವ್ಯಕ್ತಿಯ ಪ್ರೊಫೈಲ್‌ ಫಿಕ್ಚರ್‌ ಕಾಣಿಸದೆ ಇದ್ದರೆ ಅವರು ನಿಮ್ಮನ್ನು ಬ್ಲಾಕ್‌ ಮಾಡಿರಬಹುದು. (ಪ್ರೊಫೈಲ್‌ ಫಿಕ್ಚರ್‌ ಹಾಕದೆ ಇರುವವರೂ ಇರುತ್ತಾರೆ).

ನೀವು ಯಾರಿಗಾದರೂ ವಾಟ್ಸಪ್‌ನಲ್ಲಿ ಕಾಲ್‌ ಮಾಡಲು ಪ್ರಯತ್ನಿಸಿದರೆ ಅವರಿಗೆ ಕಾಲ್‌ ಹೋಗದೆ ಇದ್ದರೂ ಅವರು ಬ್ಲಾಕ್‌ ಮಾಡಿರುವ ಸಾಧ್ಯತೆಯನ್ನು ಸೂಚಿಸುತ್ತದೆ.

ಗಮನಿಸಿ, ನಿಮ್ಮನ್ನು ಒಬ್ಬರು ಬ್ಲಾಕ್‌ ಮಾಡಿರಬೇಕೆಂದರೆ ಅವರಿಗೆ ನಿಮ್ಮ ಜತೆ ಸಂವಹನ ನಡೆಸಲು, ಸಂಬಂಧ ಅಥವಾ ಮಾತು ಮುಂದುವರೆಸಲು ಇಷ್ಟವಿಲ್ಲ ಎಂದರ್ಥ. 

ನಿಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ಕೊರಗಬೇಡಿ. ಅವರಿಗೆ ಬೇಡ ಎಂದರೆ ನಿಮಗ್ಯಾಕೆ ಬೇಕು. ಮನಸ್ಸು ಕೆಡಿಸಿಕೊಂಡರೆ ನಿಮ್ಮ ನೆಮ್ಮದಿ ಹಾಳಾಗುತ್ತದೆ.

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?