ಜಿಮೇಲ್‌ ಸ್ಟೋರೇಜ್‌ ಫುಲ್‌ ಆಗಿದ್ರೆ ಚಿಂತೆಬೇಡ

By Praveen Chandra B
Oct 10, 2024

Hindustan Times
Kannada

ಗೂಗಲ್‌ ಸ್ಟೋರೇಜ್‌ಗೆ ಹೋಗಿ ಯಾವ ಖಾತೆ ಹೆಚ್ಚು ಸ್ಥಳಾವಕಾಶ ಬಳಸಿಕೊಂಡಿದೆ ಎಂದು ತಿಳಿಯಿರಿ. ಮೊದಲಿಗೆ ಗೂಗಲ್‌ ಫೋಟೋಸ್‌ಗೆ ಹೋಗಿ ಅನಗತ್ಯ ಫೋಟೋಗಳು ಸಿಂಕ್‌ ಆಗಿದ್ದರೆ ಡಿಲೀಟ್‌ ಮಾಡಿ. 

ಈಗ ಸ್ಮಾರ್ಟ್‌ಫೋನ್‌ಗಳು ಗೂಗಲ್‌ ಖಾತೆಗೆ ಲಿಂಕ್‌ ಆಗಿರುವುದರಿಂದ ಸಾಕಷ್ಟು ಫೋಟೋಗಳು ನಿಮ್ಮ ಅರಿವಿಗೆ ಬಾರದೆ ಗೂಗಲ್‌ ಸ್ಟೋರೇಜ್‌ನಲ್ಲಿ ಸಿಂಕ್‌ ಆಗಿರಬಹುದು. ಅವುಗಳನ್ನು ಪರಿಶೀಲಿಸಿ.

ಗೂಗಲ್‌ ಡ್ರೈವ್‌ನಲ್ಲಿರುವ ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಿ. ಗೂಗಲ್‌ನಲ್ಲಿ ಹಲವು ದೊಡ್ಡ ಗಾತ್ರದ ಪಿಡಿಎಫ್‌ ಫೈಲ್‌ಗಳು, ವಿಡಿಯೋ ಕ್ಲಿಪ್‌ಗಳು ತುಂಬಿರಬಹುದು. ಅವುಗಳನ್ನು ಡಿಲೀಟ್‌ ಮಾಡಿ.

ಜಿಮೇಲ್‌ ಮೇಲ್‌ಗಳೇ ಹೆಚ್ಚು ಸ್ಥಳಾವಕಾಶ ಪಡೆದುಕೊಂಡಿದ್ದರೆ ಇಮೇಲ್‌ನಲ್ಲಿರುವ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ. ಅನ್‌ ರೀಡ್‌ (ಓದದೆ ಇರುವ) ಇಮೇಲ್‌ಗಳನ್ನು ಒಂದೇ ಕ್ಲಿಕ್‌ನಲ್ಲಿ ಸೆಲೆಕ್ಟ್‌ ಮಾಡಿ ಡಿಲೀಟ್‌ ಮಾಡಿ. ಇದಕ್ಕಾಗಿ ಅನ್‌ರೀಡ್‌ ಇಮೇಲ್‌ ಆಯ್ಕೆಯನ್ನು ಬಳಸಿಕೊಳ್ಳಿ.

ಇಮೇಲ್‌ನಲ್ಲಿರುವ ರಾಶಿರಾಶಿ ಮೇಲ್‌ಗಳಲ್ಲಿ ದೊಡ್ಡ ಗಾತ್ರದ ಇಮೇಲ್‌ಗಳನ್ನು ಸುಲಭವಾಗಿ ಹುಡುಲು ‘has:attachment larger:10M’ ಎಂದು ಹುಡುಕಿ. ಆಗ ದೊಡ್ಡ ಗಾತ್ರದ ಇಮೇಲ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಅನಗತ್ಯ ಇಮೇಲ್‌ಗಳನ್ನು ಡಿಲೀಟ್‌ ಮಾಡಿ.

ಇದೇ ರೀತಿ, 10M, 5M, 2M ಎಂದು ವಿವಿಧ ಗಾತ್ರದ ಮೇಲ್‌ ಹುಡುಕುತ್ತ ಡಿಲೀಟ್‌ ಮಾಡಿ. ಈ ಮೂಲಕ ನಿಮ್ಮ ಇಮೇಲ್‌ನಲ್ಲಿ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು.

ಹೀಗೆ ಹಲವು ಪ್ರಯತ್ನಗಳನ್ನು ಮಾಡುವ ಮೂಲಕ ಜಿಮೇಲ್‌ ಸ್ಟೋರೇಜ್‌ ಕಡಿಮೆ ಮಾಡಿಕೊಳ್ಳಬಹುದು.

ಈ ಯಾವುದೇ ವಿಧಾನ ವರ್ಕ್‌ ಆಗದೆ ಇದ್ದರೆ ಗೂಗಲ್‌ ಒನ್‌ ಮೂಲಕ ಹೆಚ್ಚುವರಿ ಸ್ಥಳಾವಕಾಶ ಖರೀದಿಸಬೇಕಾಗುತ್ತದೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ