ಐಫೋನ್ 16 ಬದಲು 79,900 ರೂನಲ್ಲಿ ಈ 7 ವಸ್ತು ಖರೀದಿಸಬಹುದು!
freepik
By Praveen Chandra B Sep 20, 2024
Hindustan Times Kannada
ಆಪಲ್ ಕಂಪನಿಯ ಐಫೋನ್ 16 ಖರೀದಿಗೆ ಎಲ್ಲರೂ ಮುಂದಾಗುತ್ತಿದ್ದಾರೆ. ಇದಕ್ಕೆ ನೀಡುವ 79,900 ರೂಪಾಯಿ ಬದಲು ಈ ಹಣದಲ್ಲಿ ಬೇರೆ ಏನೆಲ್ಲ ಖರೀದಿಸಬಹುದು/ಬೇರೆ ಏನು ಮಾಡಬಹುದು ಎಂಬ ವಿವರ ಇಲ್ಲಿದೆ.
ಥೈಲಾಂಡ್‌ಗೆ ಪ್ರವಾಸ: 25 ಸಾವಿರ ರೂಪಾಯಿ ರೌಂಡ್ ಟ್ರಿಪ್ ಫ್ಲೈಟ್ ಟಿಕೆಟ್ ದರ ಮತ್ತು ಉಳಿದ ಹಣವನ್ನು ಹೋಟೇಲ್, ಸೈಟ್ ಸೀಯಿಂಗ್ ಖರ್ಚಿಗೆ ಬಳಸಬಹುದು.
ದಿಲ್‌ಜಿತ್ ಕನ್ಸರ್ಟ್ 8 ಟಿಕೆಟ್ ಖರೀದಿಸಿ: ಪ್ರತಿ ಟಿಕೆಟ್‌ಗೆ 10 ಸಾವಿರ ರೂನಂತೆ 7-8 ಟಿಕೆಟ್ ಖರೀದಿಸಿ ಸ್ನೇಹಿತರ ಗುಂಪಿನೊಂದಿಗೆ ಹೋಗಬಹುದು.
ಇ ಸ್ಕೂಟರ್: ಹೌದು, ಐಫೋನ್ 16 ದರದಲ್ಲಿ ಇ ಸ್ಕೂಟರ್ ಓಲಾ ಎಸ್1 ಸ್ಕೂಟರ್ ಖರೀದಿಸಬಹುದು.
ಎರಡು ಲ್ಯಾಪ್‌ಟಾಪ್‌ಗಳು: ಐಫೋನ್ ದರದಲ್ಲಿ ಎರಡು ಲೆನೊವೊ ಐಡಿಯಾಪ್ಯಾಡ್ ಲ್ಯಾಪ್‌ಟಾಪ್ ಖರೀದಿಸಬಹುದು.
ಲಗ್ಷುರಿ ಹ್ಯಾಂಡ್‌ಬ್ಯಾಗ್: ಮೈಕೆಲ್ ಕೋರ್ಸ್ ಅಥವಾ ಕೋಚ್ ಮುಂತಾದ ಲಗ್ಷುರಿ ಬ್ರಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳನ್ನು ಖರೀದಿಸಬಹುದು. ಇದರ ದರ 20-80 ಸಾವಿರ ರೂ. ಆಸುಪಾಸಿನಲ್ಲಿ ಇರುತ್ತದೆ.
10 ಗ್ರಾಂ ಚಿನ್ನದ ನಾಣ್ಯ: 80 ಸಾವಿರ ರೂಪಾಯಿಗೆ ಎಷ್ಟು ಗ್ರಾಂ ದೊರಕುತ್ತದೆಯೋ ಅಷ್ಟು ಚಿನ್ನ ಖರೀದಿಸಬಹುದು.
13 ವರ್ಷ ನೆಟ್‌ಫ್ಲಿಕ್ಸ್ ಚಂದಾದಾರಿಕೆ: ಪ್ರತಿತಿಂಗಳಿಗೆ 450 ರೂನಂತೆ ಹಾಕಿದ್ರೆ 13 ವರ್ಷಗಳ ಕಾಲ ಈ ಹಣದಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪಡೆಯಬಹುದು.
ಐಫೋನ್ ಖರೀದಿಸಲೇಬೇಕೆನ್ನುವುದು ನಿಮ್ಮ ಗುರಿಯಾಗಿದ್ರೆ ಅದನ್ನೇ ಖರೀದಿಸಿ, ಆದ್ರೆ ಪ್ರತಿವರ್ಷ ಒಂದೊಂದು ಐಫೋನ್ ಖರೀದಿಸುವವರಾದರೆ ಈ ರೀತಿ ಪರ್ಯಾಯ ಆಯ್ಕೆಗಳತ್ತ ನೋಡಬಹುದು.
ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು