TRAI DND App: ಸ್ಪ್ಯಾಮ್‌ ಕರೆ ಕಿರಿಕಿರಿಗೆ ಕಡಿವಾಣ; ಟ್ರಾಯ್‌ನಿಂದ ಸುಧಾರಿತ ಡಿಎನ್‌ಡಿ ಆ್ಯಪ್‌

By Praveen Chandra B
Dec 18, 2024

Hindustan Times
Kannada

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)‌ ಇನ್ನೆರಡು ತಿಂಗಳಲ್ಲಿತನ್ನ ಡು ನಾಟ್‌ ಡಿಸ್ಟರ್ಬ್‌ (ಡಿಎನ್‌ಡಿ) ಆ್ಯಪ್‌ನ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಲಿದೆ.

ಮೊಬೈಲ್‌ ಬಳಕೆದಾರರಿಗೆ ಸ್ಪ್ಯಾಮ್‌ ಕಾಲ್‌ಗಳ ಉಪಟಳ ಹೆಚ್ಚುತ್ತಿರುವುದರಿಂದ ಟ್ರಾಯ್‌ ಹೊಸ ಡಿಎನ್‌ಡಿ ಆ್ಯಪ್ ಪರಿಚಯಿಸಲಿದೆ. 

ಹೊಸ ಡಿಎನ್‌ಡಿ ಅಪ್ಲಿಕೇಷನ್‌ ಕುರಿತು ಟ್ರಾಯ್‌ ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ತಿಳಿಸಿದ್ದಾರೆ. ಈ ಅಪ್ಲಿಕೇಷನ್‌ನ ಹೊಸ ಫೀಚರ್‌ಗಳ ಕಾರ್ಯಸಾಧ್ಯತೆಯನ್ನು ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈಗಿನ ಡಿಎನ್‌ಡಿ ಆ್ಯಪ್‌ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬ ಟೀಕೆ ಇದೆ.  ಎಸ್‌ಎಂಎಸ್‌ಗಾಗಿ ಇರುವ ಸ್ಪ್ಯಾಮ್‌ ಡಿಟೆಕ್ಷನ್‌ ಎಂಜಿನ್‌ ಸೇರಿದಂತೆ ಹಲವು ಫೀಚರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. 

ಡಿಎನ್‌ಡಿ ಆ್ಯಪ್‌ನಲ್ಲಿ ಸಾಕಷ್ಟು ಬಗ್‌ಗಳಿದ್ದು, ಆಂಡ್ರಾಯ್ಡ್‌ ಬಳಕೆದಾರರಿಂದ ಸಾಕಷ್ಟು ದೂರುಗಳನ್ನು ಪಡೆದಿದೆ. ಮಾರ್ಚ್‌ 2025ರ ವೇಳೆಗೆ ಈ ತೊಂದರೆಗಳನ್ನು ಸರಿಪಡಿಸುವುದಾಗಿ ಟ್ರಾಯ್‌ ಭರವಸೆ ನೀಡಿತ್ತು.

270 ದಶಲಕ್ಷ ಮೊಬೈಲ್‌ ಬಳಕೆದಾರರಿಗೆ ಪ್ರತಿದಿನ 5 ದಶಲಕ್ಷ ಸ್ಪ್ಯಾಮ್‌ ಕಾಲ್‌ಗಳು ಬರುತ್ತಿವೆ. ಪರಿಷ್ಕೃತ ಡಿಎನ್‌ಡಿ ಅಪ್ಲಿಕೇಷನ್‌ ಈ ಸ್ಪ್ಯಾಮ್‌ ಕರೆಗಳನ್ನು ತಗ್ಗಿಸುವ ನಿರೀಕ್ಷೆಯಿದೆ.

2024ರ ಮೊದಲ ತ್ರೈಮಾಸಿಕದಲ್ಲಿಯೇ ಟ್ರಾಯ್‌ಗೆ ಸ್ಪ್ಯಾಮ್‌ ಕಾಲ್‌ಗಳ ಕುರಿತು 7,90,000 ದೂರುಗಳು ಬಂದಿದ್ದವು. 

ಇದೀಗ ಟ್ರಾಯ್‌ ಡು ನಾಟ್‌ ಡಿಸ್ಟರ್ಬ್‌ (ಡಿಎನ್‌ಡಿ) ಆ್ಯಪ್‌ನ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸುವ ಕುರಿತು ಸೂಚನೆ ನೀಡಿದೆ. 

ಇದರಿಂದ ಮೊಬೈಲ್‌, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸ್ಪ್ಯಾಮ್‌ ಕರೆಗಳ ಕಿರಿಕಿರಿ ಕಡಿಮೆಯಾಗುವ ಸೂಚನೆಯಿದೆ.

ಶೋಭಿತಾ ಬಗ್ಗೆ ಮಾತನಾಡಿದ ನಾಗಾರ್ಜುನ್; ಸೊಸೆ ಬಗ್ಗೆ ಹೀಗೆಲ್ಲ ಹೇಳ್ತಾರಾ ಎಂದು ಪ್ರಶ್ನಿಸಿದ ಫ್ಯಾನ್ಸ್‌