ರೇವಂತ್ ರೆಡ್ಡಿ ಕುರಿತು  8 ಪ್ರಮುಖ ಅಂಶಗಳು

By Meghana B
Dec 03, 2023

Hindustan Times
Kannada

54 ವರ್ಷದ ರೇವಂತ್ ರೆಡ್ಡಿ ಈ ಮೊದಲು ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಶಾಸಕರಾಗಿದ್ದವರು (2 ಬಾರಿ)

2017 ರಲ್ಲಿ ಕಾಂಗ್ರೆಸ್​ ಸೇರಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಲ್ಕಾಜ್ಗಿರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 

2021 ರ ಜುಲೈನಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕರಾದ ಬಳಿಕ ಆಡಳಿತಾರೂಢ ಬಿಆರ್​ಎಸ್​ ಸರ್ಕಾರದ ದೋಷಗಳನ್ನು ಎತ್ತಿ ಹಿಡಿದರು. ಬೀದಿ ಬೀದಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು

ರೇವಂತ್ ರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್​​ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್​​ನತ್ತ ರಾಜ್ಯದ ಜನತೆ ಆಕರ್ಷಿತರಾದರು

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದ ಬಳಿಕ ಅಲ್ಲಿನ ಕೆಲವು ಅಂಶಗಳನ್ನು ತೆಲಂಗಾಣದಲ್ಲಿ ಅಳವಡಿಸಿದರು

ತೆಲಂಗಾಣದ ವಿಧಾನಸಭೆ ಚುನಾವಣೆಯ ಬೃಹತ್ ರ್ಯಾಲಿಗಳಲ್ಲಿ ಕೈ ಮುಖಂಡರ ಜೊತೆ ರೇವಂತ್ ರೆಡ್ಡಿ ಮಿಂಚಿದರು. ಸಿಎಂ ಕೆಸಿಆರ್ ವಿರುದ್ಧ ಕಾಮರೆಡ್ಡಿಯಲ್ಲಿ ಸ್ಫರ್ಧಿಸಲು ಕಾಂಗ್ರೆಸ್​ ಹೈಕಮಾಂಡ್ ರೇವಂತ್ ರೆಡ್ಡಿಯನ್ನು ಆಯ್ಕೆ ಮಾಡಿತು

ಇದೀಗ ಕೊಡಂಗಲ್‌ನಲ್ಲಿ ರೇವಂತ್ ರೆಡ್ಡಿ ಗೆಲುವು ಸಾಧಿಸಿದ್ದು, ಕಾಮರೆಡ್ಡಿಯಲ್ಲೂ ಮುನ್ನಡೆ ಸಾಧಿಸಿದ್ದಾರೆ. 

ಬಿಆಎರ್​ಎಸ್​ ಹಿಮ್ಮೆಟ್ಟಿ ಕಾಂಗ್ರೆಸ್​ ಮುನ್ನಡೆ ಸಾಧಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವುದು, ರೇವಂತ್​ ರೆಡ್ಡಿ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ