ಅಮೃತಧಾರೆ ಛಾಯಾಸಿಂಗ್‌ ಸೀರೆಯಲ್ಲಿ ಮಿಂಚಿಂಗ್‌

By Praveen Chandra B
Nov 07, 2024

Hindustan Times
Kannada

ಅಮೃತಧಾರೆಯಲ್ಲಿ ಭೂಮಿಕಾ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ ಛಾಯಾ ಸಿಂಗ್‌ 

ಇವರು ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತೆಲುಗು, ಬಂಗಾಲಿ, ಭೋಜ್‌ಪುರಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ತಮಿಳಿನ ತಿರುಡಾ ತಿರುಡಿ ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಈ ಸಿನಿಮಾದ ಮನ್ಮದ ರಸ ಹಾಡು ಸಖತ್‌ ಹಿಟ್‌ ಆಗಿತ್ತು.

ರಜಪೂತ ಕುಟುಂಬದ ಛಾಯಾಸಿಂಗ್‌ ಬೆಂಗಳೂರಿನಲ್ಲಿ ಬೆಳೆದವರು. 

ಕನ್ನಡದಲ್ಲಿ ಮುನ್ನುಡಿ, ಹಸೀನಾ, ತುಂಟಾಟ, ಚಿಟ್ಟೆ, ರೌಡಿ ಅಳಿಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ತಮಿಳಿನಲ್ಲಿ ತಿರುಡಾ ತಿರುಡಿ, ಜೈಸೂರ್ಯ, ಕವಿತೈ, ವೆಲ್ಲಮೈ ತಾರಾಯೊ, ಆನಂದಪುರತು ವೀಡುವಿನಲ್ಲಿ ನಟಿಸಿದ್ದಾರೆ.

ಆಕಾಶ ಗಂಗೆ, ಸಿಂಪ್ಲಿ ಕೈಲಾಸಂ (ಕಿರುಚಿತ್ರ)ನಲ್ಲಿ ನಟಿಸಿದ್ದಾರೆ, ಮಲಯಾಳಂನಲ್ಲಿ ಮುಲ್ಲವಲ್ಲಯುಮ್‌ ತೇನ್ಮಾವುಮ್‌, ಪೊಲೀಸ್‌ ಚಿತ್ರದಲ್ಲಿ ನಟಿಸಿದ್ದಾರೆ.

ಭೋಜ್‌ಪುರಿಯಲ್ಲಿ ಮಹಾತಾಯಿ ಚಿತ್ರದಲ್ಲಿ ನಟಿಸಿದ್ದಾರೆ. 

ತಮಿಳು ಸೀರಿಯಲ್‌ ನಾಗಮ್ಮ, ತೆಲುಗು ಸೀರಿಯಲ್‌ ಕಾಂಚನ ಗಂಗಾದಲ್ಲಿ ನಟಿಸಿದ್ದಾರೆ. 

ಅಮೃತಧಾರೆಯಲ್ಲಿ ಗೌತಮ್‌ ದಿವಾನ್‌ ಪತ್ನಿಯಾಗಿ, ಶಕುಂತಲಾ ದೇವಿ ಗ್ಯಾಂಗ್‌ಗೆ ಬುದ್ದಿ ಕಲಿಸುವ ನಾಯಕಿಯಾಗಿ ಮಿಂಚುತ್ತಿದ್ದಾರೆ. 

ಇವರು 2012ರಲ್ಲಿ ತಮಿಳು ನಟ ದೇವಮಗಲ್ ಖ್ಯಾತಿಯ ಕೃಷ್ಣರನ್ನು ವಿವಾಹವಾಗಿದ್ದರು. 

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ