2024ರಲ್ಲಿ ಅಂತ್ಯವಾಯ್ತು ಕನ್ನಡದ 10 ಧಾರಾವಾಹಿಗಳು
By Praveen Chandra B
Dec 18, 2024
Hindustan Times
Kannada
ಪಾರು: ಆರು ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಪಾರು ಸೀರಿಯಲ್ ಈ ವರ್ಷ ಕೊನೆಗೊಂಡಿದೆ.
ಗಟ್ಟಿಮೇಳ: ಈ ವರ್ಷದ ಆರಂಭದಲ್ಲಿಯೇ ಗಟ್ಟಿಮೇಳ ಎಂಬ ಜೀಕನ್ನಡ ವಾಹಿನಿಯ ಸೀರಿಯಲ್ ಕೊನೆಗೊಂಡಿದೆ.
ಗೀತಾ: ಕಲರ್ಸ್ ಕನ್ನಡದ ಈ ಸೀರಿಯಲ್ ಕೂಡ ಈ ವರ್ಷ ಅಂತ್ಯವಾಗಿದೆ. ಒಟ್ಟು 107 ಸಂಚಿಕೆಗಳನ್ನು ಈ ಸೀರಿಯಲ್ ಪೂರೈಸಿತು.
ಬೃಂದಾವನ: ಈ ವರ್ಷ ಅಮೂಲ್ಯ ಭಾರದ್ವಾಜ್ ಮತ್ತು ವರುಣ್ ಆರಾಧ್ಯ ನಟಿಸಿರುವ ಬೃಂದಾವನ ಸೀರಿಯಲ್ ಕೂಡ ಕೊನೆಗೊಂಡಿದೆ.
ಹಿಟ್ಲರ್ ಕಲ್ಯಾಣ: ದಿಲೀಪ್ ರಾಜ್, ಮಲೈಕಾ ವಸುಪಾಲ್ ನಟನೆಯ ಈ ಸೀರಿಯಲ್ ಕೂಡ ಈ ವರ್ಷ ಮುಕ್ತಾಯಗೊಂಡಿತ್ತು.
ಚುಕ್ಕಿತಾರೆ: ತಂದೆ ಮಗಳ ಬಾಂಧವ್ಯದ ಕಥೆಯ ಚುಕ್ಕಿತಾರೆ ಸರಿಯಲ್ ಕೂಡ ಈ ವರ್ಷ ಕೊನೆಗೊಂಡಿದೆ. ಗಾಯಕ ನವೀನ್ ಸಜ್ಜು ಮತ್ತು ಮಹಿತಾ ನಟಿಸಿರುವ ಸೀರಿಯಲ್ ಇದಾಗಿದೆ.
ಅಂತರಪಟ: ಬಿಗ್‌ಬಾಸ್ ಆರಂಭವಾಗುವ ಸಮಯದಲ್ಲಿ ಈ ವರ್ಷ ಅಂತರಪಟ ಸೀರಿಯಲ್ ಕೊನೆಗೊಡಿದೆ.
ಗೌತಮಿ ಜಾದವ್ ನಟಿಸಿರುವ ಸತ್ಯ ಸೀರಿಯಲ್, ಭೂಮಿಗೆ ಬಂದ ಭಗವಂತ, ಕೆಂಡಸಂಪಿಗೆ ಸೀರಿಯಲ್‌ಗಳು ಈ ವರ್ಷ ಮುಕ್ತಾಯಗೊಂಡಿವೆ.
2024ರಲ್ಲಿ ನಿವೃತ್ತರಾದ ಭಾರತೀಯ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ