ವಾರಾಂತ್ಯದ ಪ್ರವಾಸಕ್ಕೆ ಉಡುಪಿ ಸಮೀಪದಲ್ಲೇ ಇರುವ 15 ಪ್ರವಾಸಿ ತಾಣಗಳಿವು

By Raghavendra M Y
Apr 25, 2024

Hindustan Times
Kannada

ಸುಂದರವಾದ ಕಡಲತೀರಗಳು, ರುಚಿಕರವಾದ ಕರಾವಳಿ ಊಟಕ್ಕೆ ಮಂಗಳೂರು ಹೆಸರುವಾಸಿ. ಉಡುಪಿಯಿಂದ ಮಂಗಳೂರಿಗೆ 55 ಕಿಲೋ ಮೀಟರ್ ಆಗುತ್ತೆ

ಉಡುಪಿಯಿಂದ 61 ಕಿ.ಮೀ ದೂರದಲ್ಲಿರುವ ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ಗಿರಿಧಾಮ ಕಣ್ತುಂಬಿಕೊಳ್ಳಬಹುದು

ಭವ್ಯವಾದ ಶಿವನ ಪ್ರತಿಮೆ ಇರುವ ಮುರುಡೇಶ್ವರದಲ್ಲಿ ರಮಣೀಯವಾದ ಕಡಲ ತೀರದ ತಾಣವಾಗಿದೆ. ಉಡುಪಿಯಿಂದ 102 ಕಿಮೀ ದೂರದಲ್ಲಿದೆ

ವಾರಾಂತ್ಯದ ಪ್ರವಾಸಕ್ಕೆ ಗೋಕರ್ಣ ಹೇಳಿಮಾಡಿಸಿದಂತಿದೆ. ಇಲ್ಲಿ ಬೀಚ್, ದೇವಾಲಯಗಳನ್ನು ನೋಡಬಹುದು. ಉಡುಪಿಯಿಂದ 178 ದೂರದಲ್ಲಿದೆ

ಉಡುಪಿಯಿಂದ 162 ಕಿಮೀ ದೂರದಲ್ಲಿರುವ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಜೋಗ್ ಜಲಪಾತ ಒಂದು. ಇಲ್ಲಿನ ಪರ್ವತಗಳನ್ನ ಕಣ್ತುಂಬಿಕೊಳ್ಳಬಹುದು

ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿ ತಾಣವಾದ ಶೃಂಗೇರಿಗೆ ಭೇಟಿ ನೀಡಿ. ಉಡುಪಿಯಿಂದ 90 ಕಿಮೀ ಅಂತರದಲ್ಲಿದೆ

ಟ್ರೆಕ್ಕಿಂಗ್ ಪ್ರಿಯರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಉತ್ತಮ ತಾಣ. ಇದು ಕೂಡ ಉಡುಪಿಯಿಂದ 103 ಕಿಮೀ ದೂರದಲ್ಲಿದೆ

ಕಾಫಿ ತೋಟಗಳು, ಮಂಜಿನಿಂದ ಕೂಡಿದ ಬೆಟ್ಟಗಳನ್ನು ನೋಡಲು ಚಳಿಗಾಲದಲ್ಲಿ ಸಕಲೇಶಪುರ ಬೆಸ್ಟ್. ಉಡುಪಿಯಿಂದ 181 ಕಿಮೀ ಆಗುತ್ತೆ

ಕಾಫಿ ಎಸ್ಟೇಟ್‌ಗಳು, ಜಲಪಾತಗಳು, ಮುಳ್ಳಯ್ಯನಗಿರಿಯಂತ ಗಿರಿಧಾಮಗಳನ್ನು ವೀಕ್ಷಿಸಲು ಚಿಕ್ಕಮಗಳೂರಿಗೆ ಭೇಟಿ ನೀಡಿ. ಇದು ಉಡುಪಿಯಿಂದ 173 ಕಿಮೀ ದೂರದಲ್ಲಿದೆ

ಉಡುಪಿಯಿಂದ 309 ಕಿಮೀ ದೂರದಲ್ಲಿರುವ ವಯನಾಡಿಗೂ ಭೇಟಿ ನೀಡಿ. ಹಸಿರಿನಿಂದ ಕೂಡಿದ ಭೂಮಿ, ಕಾಫಿ ತೋಟಗಳು, ಪ್ರಾಚೀನ ಗುಹೆಗಳನ್ನ ಕಣ್ತುಂಬಿಕೊಳ್ಳಬಹುದು

ಕ್ವೀನ್ ಆಫ್ ಹಿಲ್ ಸ್ಟೇಷನ್ ಖ್ಯಾತಿ ದಕ್ಷಿಣ ಭಾರತದ ಅತ್ಯಂತ ಕೂಲ್ ಪ್ರದೇಶ ಊಟಿಯನ್ನು ಮಿಸ್ ಮಾಡಿಕೊಳ್ಳಬೇಡಿ. ಉಡುಪಿಯಿಂದ 411 ಕಿಮೀ ಆಗುತ್ತೆ

ಯುನೆಸ್ಕೋ ವಿಶ್ವಪರಂಪರೆಯ ತಾಣ ಹಂಪಿಗೆ ಭೇಟಿ ನೀಡಿ ಪ್ರಾಚೀನ ವಾಸ್ತುಶಿಲ್ಪವನ್ನ ಕಣ್ತುಂಬಿಕೊಳ್ಳಿ. ಇದು ಉಡುಪಿಯಿಂದ 404 ಕಿಮೀ ದೂರದಲ್ಲಿದೆ

ಅದ್ಬುತ ಕಡಲ ತೀರಗಳಿಗೆ ಹೆಸರುವಾಸಿಯಾಗಿರುವ ಗೋವಾಗೆ ಭೇಟಿ ನೀಡಿ. ಉಡುಪಿಯಿಂದ 289 ಕಿಮೀ ಆಗುತ್ತೆ

ಉಡುಪಿಯಿಂದ 189 ಕಿಮೀ ದೂರದಲ್ಲಿರುವ ಕೊಡಗು ಅಥವಾ ಕೂರ್ಗ್ ಪ್ರದೇಶದ ಮಂಜಿನ ಬೆಟ್ಟಗಳು, ಕಾಫಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ

ಹೊಯ್ಸಳ ದೇವಾಲಯಗಳ ನೆಲೆಯಾದ ಬೇಲೂರು, ಹಳೇಬೀಡು ವಾಸ್ತುಶಿಲ್ಪದ ಅದ್ಭುತ ತಾಣ. ಉಡುಪಿಯಿಂದ 184 ಕಿಮೀ ದೂರದಲ್ಲಿದೆ

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ