ಅಮೆರಿಕ ಹೋದ್ರೆ ನೋಡಲೇಬೇಕಾದ 5 ಸುಂದರ ಸ್ಥಳಗಳಿವು

Canva

By Priyanka Gowda
Nov 06, 2024

Hindustan Times
Kannada

ಅಮೆರಿಕದಲ್ಲಿ ಬಹಳಷ್ಟು ಐತಿಹಾಸಿಕ ಸ್ಥಳಗಳಿವೆ. ‘ದೊಡ್ಡಣ್ಣ’ನ ದೇಶಕ್ಕೆ ಭೇಟಿ ನೀಡಿದಾಗ ಮಿಸ್ ಮಾಡಲೇಬಾರದಾದ ಐದು ಪ್ರದೇಶಗಳಿವು.

Canva

ಸ್ಟ್ಯಾಚ್ಯೂ ಆಫ್ ಲಿಬರ್ಟಿ, ನ್ಯೂಯಾರ್ಕ್: ಇದು ಸ್ವಾತಂತ್ರ್ಯದ ಸಂಕೇತವಾಗಿದ್ದು, ಈ ಪ್ರತಿಮೆಯನ್ನು ಫ್ರಾನ್ಸ್ ಉಡುಗೊರೆಯಾಗಿ ನೀಡಲಾಗಿದೆ. ನ್ಯೂಯಾರ್ಕ್ ಬಂದರಿನಲ್ಲಿ ಲಿಬರ್ಟಿ ದ್ವೀಪ ನಿಂತಿದೆ.

Canva

ಲಿಬರ್ಟಿಯನ್ನು ಹತ್ತಿರದಿಂದ ನೋಡಲು ಮತ್ತು ನ್ಯೂಯಾರ್ಕ್ ನಗರದ ಅದ್ಭುತ ದೃಶ್ಯಗಳನ್ನು ಆನಂದಿಸಲು ದೋಣಿ ಪ್ರಯಾಣ ಮಾಡಬಹುದು.

Canva

ಗ್ರ್ಯಾಂಡ್ ಕ್ಯಾನ್ಯನ್, ಅರಿಜೋನಾ: ಪ್ರಪಂಚದ ನೈಸರ್ಗಿಕ ಅದ್ಭುತಗಳಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಕೂಡ ಒಂದು. ವಿಶಾಲವಾದ, ವಿಸ್ಮಯಕಾರಿ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.

Canva

ಗೋಲ್ಡನ್ ಗೇಟ್ ಸೇತುವೆ, ಸ್ಯಾನ್ ಫ್ರಾನ್ಸಿಸ್ಕೋ: ಇದೊಂದು ಬಹಳ ಪ್ರಖ್ಯಾತವಾದ ಕೆಂಪು ಸೇತುವೆಯಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋವನ್ನು ಮರಿನ್ ಕೌಂಟಿಗೆ ಸಂಪರ್ಕಿಸುತ್ತದೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಭೇಟಿ ನೀಡಲು ಸುಂದರ ಸ್ಥಳ.

Canva

ಟೈಮ್ಸ್ ಸ್ಕ್ವೇರ್, ನ್ಯೂಯಾರ್ಕ್ ಸಿಟಿ: ‘ದಿ ಕ್ರಾಸ್‌ರೋಡ್ಸ್ ಆಫ್ ದಿ ವರ್ಲ್ಡ್’ ಎಂದು ಕರೆಯಲ್ಪಡುವ ಟೈಮ್ಸ್ ಸ್ಕ್ವೇರ್ ದೀಪಗಳು, ಡಿಜಿಟಲ್ ಬಿಲ್ ಬೋರ್ಡ್‌ಗಳಿಂದ ತುಂಬಿವೆ.

Canva

ವೈಟ್ ಹೌಸ್, ವಾಷಿಂಗ್ಟನ್ ಡಿಸಿ: ಇದು ಅಮೆರಿಕ ಅಧ್ಯಕ್ಷರ ನಿವಾಸ, ವಾಷಿಂಗ್ಟನ್ ಡಿಸಿಯಲ್ಲಿರುವ ಈ ಐತಿಹಾಸಿಕ ಕಟ್ಟಡವು ಅಮೆರಿಕದ ನಾಯಕತ್ವದ ಸಂಕೇತವಾಗಿದೆ.

Canva

ಈ ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಅದ್ಭುತಗಳನ್ನು ನೋಡಬಹುದು.

Canva

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP