ಕೇದಾರನಾಥ ಯಾತ್ರೆ ಹೋಗುವವರಿಗೆ ಒಂದಿಷ್ಟು ಸಲಹೆಗಳು

By Rakshitha Sowmya
Apr 19, 2024

Hindustan Times
Kannada

ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಕೇದಾರನಾಥ ಕೂಡಾ ಒಂದು. ಶಿವನ ದರ್ಶನ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ದೇವಾಲಯವು ಸಮುದ್ರಮಟ್ಟದಿಂದ ಬಹಳ ಎತ್ತರದಲ್ಲಿದೆ. ಆದ್ದರಿಂದ ಹವಾಮಾನವನ್ನು ಪರಿಗಣಿಸಿ ಈ ದೇವಾಲಯದಲ್ಲಿ ಭಕ್ತರ ಭೇಟಿಗೆ ಅವಕಾಶ ನೀಡಲಾಗುತ್ತದೆ

ನೀವೂ ಕೂಡಾ ಕೇದಾರನಾಥ ಯಾತ್ರೆಗೆ ಪ್ಲ್ಯಾನ್‌ ಮಾಡುತ್ತಿದ್ದಲ್ಲಿ ಈ ವಿಚಾರಗಳನ್ನು ನೆನಪಿಡಿ

Enter text Hereಅಚಳಿಗಾಲ ಹಾಗೂ ಮಾನ್ಸೂನ್‌ ಸಮಯದಲ್ಲಿ ಕೇದಾರನಾಥ ಯಾತ್ರೆ ಪ್ಲ್ಯಾನ್‌ ಕೈ ಬಿಡಿ

ಬೆಟ್ಟ, ಗುಡ್ಡಗಳಂಥ ಪ್ರದೇಶದಲ್ಲಿ ಮಳೆಗಾಲದಲ್ಲಿ ಪ್ರವಾಹ, ಭೂಕುಸಿತದಂಥ ಅಪಾಯ ಹೆಚ್ಚಾಗಿರುತ್ತದೆ

ನೀವು ಕೇದಾರನಾಥಕ್ಕೆ ಬೇಸಿಗೆ ಸಮಯದಲ್ಲಿ ಹೋಗುತ್ತಿದ್ದರೂ ಅಲ್ಲಿ ಬಹಳ ಚಳಿ ಇರುವುದರಿಂದ ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯಬೇಕು

ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ಹೋಗಲು ಸುಮಾರು 6 ಗಂಟೆ ಸಮಯ ಬೇಕು ಎಂಬುದು ನಿಮಗೆ ತಿಳಿದಿರಲಿ

ಮುಂಜಾನೆ ನಿಮ್ಮ ಪ್ರಯಾಣವನ್ನು ಆರಂಭಿಸಿದರೆ ಹಗಲಿನಲ್ಲೇ ಆರಾಮವಾಗಿ ಕೇದಾರನಾಥದಾಮವನ್ನು ತಲುಪಬಹುದು

ದರ್ಶನದ ನಂತರ ಒಂದು ರಾತ್ರಿ ಕೇದಾರ್‌ನಾಥ್‌ನಲ್ಲಿ ವಿಶ್ರಾಂತಿ ಪಡೆದು ಮತ್ತೆ ಮರುದಿನ ಮುಂಜಾನೆ ಪ್ರಯಾಣ ಆರಂಭಿಸಿ ಗೌರಿಕುಂಡ್‌ ತಲುಪಬಹುದು

12 ವರ್ಷದೊಳಗಿನ ಮಕ್ಕಳನ್ನು ನಿಮ್ಮೊಂದಿಗೆ ಕರೆದೊಯ್ಯಬೇಡಿ. ಆಧಾರ್‌ಕಾರ್ಡ್‌, ಯಾತ್ರಾಕಾರ್ಡ್‌ ಜೊತೆಗೆ ಪ್ರಮುಖ ಡಾಕ್ಯೂಮೆಂಟ್‌ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು