ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ, ಕರ್ನಾಟಕದಲ್ಲೇ ಇರುವ 8 ಪ್ರಸಿದ್ಧ ಗಿರಿಧಾಮಗಳಿವು

By Reshma
Dec 05, 2023

Hindustan Times
Kannada

ಕರ್ನಾಟಕವು ಪ್ರಕೃತಿ ಸೌಂದರ್ಯದ ತವರು. ಇಲ್ಲಿನ ಬೆಟ್ಟ, ಗುಡ್ಡ, ಗಿರಿಧಾಮಗಳು, ಕಾಡು-ಕಾನನಗಳು ಕಣ್ಮನ ತಣಿಸುತ್ತವೆ. ಪ್ರವಾಸಿಗರಿಗಂತೂ ಕರ್ನಾಟಕದಲ್ಲಿ ನೋಡಲು ಸಾಕಷ್ಟು ಉತ್ತಮ ಜಾಗಗಳಿವೆ. 

ಚಳಿಗಾಲದಲ್ಲಿ ಬೆಟ್ಟ ಹತ್ತುವ ಕನಸು ನಿಮಗಿದ್ದರೆ, ಕರ್ನಾಟಕದಲ್ಲಿನ ಈ ಗಿರಿಧಾಮಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ. ಹಿಮ ಹಾಸಿದ ಗಿರಿಧಾಮಗಳನ್ನು ಚಳಿಗಾಲದಲ್ಲಿ ನೋಡುವ ಅಂದವೇ ಬೇರೆ. 

Travel.earth

ಚಿಕ್ಕಮಗಳೂರು: ಚಳಿಗಾಲದ ಪ್ರವಾಸಕ್ಕೆ ಮಾತ್ರವಲ್ಲ, ಗಿರಿಧಾಮಗಳ ಸೊಬಗನ್ನೂ ಸವಿಯಬೇಕು ಅಂದ್ರೆ ನೀವು ಚಿಕ್ಕಮಗಳೂರಿಗೆ ಭೇಟಿ ನೀಡಬೇಕು. ಮುಳ್ಳಯ್ಯನಗಿರಿ, ಝಡ್‌ ಪಾಯಿಂಟ್‌, ಕುದುರೆಮುಖ, ಬಾಬಾ ಬುಡನ್‌ಗಿರಿ ಮುಂತಾದ ಗಿರಿಧಾಮಗಳಲ್ಲಿ ನೀವು ಟ್ರೆಕ್ಕಿಂಗ್‌ ಮಾಡುವ ಮೂಲಕ ಎಂಜಾಯ್‌ ಮಾಡಬಹುದು. 

Karnataka tourism

ಆಗುಂಬೆ: ಕರ್ನಾಟಕದ ಚಿರಾಪುಂಜಿ ಎಂದೇ ಕರೆಸಿಕೊಳ್ಳುವ ಆಗುಂಬೆಯಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಆಗುಂಬೆಯು ಸಮುದ್ರಮಟ್ಟದಿಂದ 2725 ಅಡಿ ಎತ್ತರದಲ್ಲಿದೆ. 

travel triangle

ನಂದಿಹಿಲ್ಸ್‌: ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನದಲ್ಲಿರುವ ನಂದಿ ಬೆಟ್ಟ ಕರ್ನಾಟಕ ಬೆಸ್ಟ್‌ ಗಿರಿಧಾಮಗಳಲ್ಲಿ ಒಂದು. ಚಳಿಗಾಲದಲ್ಲಿ ಇಲ್ಲಿ ಆಕಾಶವೇ ಧರೆಗಳಿದಂತೆ ಕಾಣುತ್ತದೆ. 

ಕೊಡಗು: ಕಾಫಿ ಪರಿಮಳದೊಂದಿಗೆ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕೊಡಗಿನಲ್ಲಿ ಹಲವು ಗಿರಿಧಾಮಗಳಿವೆ. ಅಲ್ಲದೆ ಇಲ್ಲದೆ ಗಿರಿಧಾಮಗಳಿಂದ ಹರಿಯುವ ಜಲಪಾತ, ತೊರೆಗಳು ನಿಮ್ಮ ಮನಸ್ಸಿಗೆ ಖುಷಿ ನೀಡುವುದರಲ್ಲಿ ಎರಡು ಮಾತಿಲ್ಲ. 

Onmanorama

ಕುಂದಾದ್ರಿ: ಜನಜಂಗುಳಿಯಿಲ್ಲದ, ಪ್ರಕೃತಿಯ ಅದ್ಭುತವನ್ನು ನೋಡಬೇಕು ಅಂದ್ರೆ ಚಳಿಗಾಲ ಅಥವಾ ಮಳೆಗಾಲದಲ್ಲಿ ನೀವು ಕುಂದಾದ್ರಿಗೆ ಭೇಟಿ ನೀಡಬೇಕು. ಹಿಮ ತುಂಬಿರುವ ಎತ್ತರದ ಗುಡ್ಡ ಪ್ರದೇಶವು ನಿಮ್ಮ ಮನಸ್ಸಿಗೆ ಖಂಡಿತ ಇಷ್ಟ ಆಗುತ್ತೆ. 

Facebook

ಬಿಳಿಗಿರಿರಂಗನ ಬೆಟ್ಟ: ಬೆಂಗಳೂರಿಗೆ ಸಮೀಪದಲ್ಲಿರುವ ಬಿಳಿಗಿರಿರಂಗನ ಬೆಟ್ಟಕ್ಕೆ ಹಲವರು ಭೇಟಿ ನೀಡುತ್ತಾರೆ. ಪ್ರಕೃತಿ ನಡುವೆ ಸುತ್ತುವರಿದಿರುವ ಈ ಬೆಟ್ಟವು ಕಣ್ಣಿಗೆ ಹಬ್ಬದಂತೆ ಕಾಣಿಸುವುದು ಸುಳ್ಳಲ್ಲ. 

Backpack adventures

ಕೊಡಚಾದ್ರಿ: ನೀವು ಕರಾವಳಿ, ಮಲೆನಾಡು ಭಾಗದಲ್ಲಿದ್ದು ಒಂದು ಉತ್ತಮ ಜಾಗಕ್ಕೆ ಟ್ರೆಕ್ಕಿಂಗ್‌ ಹೋಗಬೇಕು ಅಂತಿದ್ರೆ ಕೊಡಚಾದ್ರಿ ಹೇಳಿ ಮಾಡಿಸಿದ ಜಾಗ.  

JLPExplore

ಸಕಲೇಶಪುರ: ಬೆಟ್ಟ, ಗುಡ್ಡುಗಳು, ಗಿರಿಧಾಮಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಕಲೇಶಪುರ ಕೂಡ ಉತ್ತಮ ಜಾಗ. 

Holidyamonk.com

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ