ವಿದೇಶ ಪ್ರವಾಸ ಮಾಡುವವರಿಗಾಗಿ ಇಲ್ಲಿದೆ 8 ಉಪಯುಕ್ತ ಸಲಹೆ 

By Reshma
Dec 18, 2024

Hindustan Times
Kannada

ಫಾರಿನ್ ಟ್ರಿಪ್ ಹೋಗಬೇಕು ಅನ್ನೋದು ಹಲವರ ಕನಸು. ಆದರೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಾಗ ಬಹುತೇಕರು ಈ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಪ್ರವಾಸದ ಖುಷಿ ಹಾಳಾಗುತ್ತದೆ 

ನೀವು ಫಾರಿನ್ ಟ್ರಿಪ್ ಪ್ಲಾನ್ ಮಾಡುತ್ತಿದ್ದರೆ ಈ ಸಲಹೆಗಳು ಖಂಡಿತ ನಿಮಗೆ ಸಹಾಯವಾಗುತ್ತೆ. ಇದು ನಿಮ್ಮ ಫಾರಿನ್ ಟ್ರಿಪ್ ಅನ್ನು ಅವಿಸ್ಮರಣೀಯವನ್ನಾಗಿಸುತ್ತೆ 

ಮೊದಲು ನೀವು ಯಾವ ಯಾವ ಜಾಗಕ್ಕೆ ಭೇಟಿ ನೀಡಬೇಕು ಎಂಬುದನ್ನು ನಿರ್ಧಾರ ಮಾಡಿ. ಸ್ಥಳ ಆಯ್ಕೆ ಮಾಡಿದರೆ ನಿಮ್ಮ ಅರ್ಧದಷ್ಟು ಕೆಲಸ ಮುಗಿದ ಹಾಗೆ 

ನೀವು ಹೋಗುವ ಸ್ಥಳಗಳಿಗೆ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ 

ನೀವು ಹೋಗಬೇಕಾಗಿರುವ ಸ್ಥಳಗಳ ಬಗ್ಗೆ ತಿಳಿದುಕೊಂಡು ಬಜೆಟ್ ನಿರ್ಧಾರ ಮಾಡಿ. ಇದರಿಂದ ಅಲ್ಲಿ ಹೋದ ಮೇಲೆ ಪಜೀತಿ ಪಡುವುದು ತಪ್ಪುತ್ತದೆ 

ನಂತರ ಪ್ಯಾಕಿಂಗ್ ಆರಂಭಿಸಿ. ನೀವು ಹೋಗುವ ಸ್ಥಳದ ಹವಾಮಾನಕ್ಕೆ ಅನುಗುಣವಾಗಿ ಬಟ್ಟೆ, ಪಾದರಕ್ಷೆಗಳನ್ನು ಆಯ್ಕೆ ಮಾಡಿ 

ವಿದೇಶ ಪ್ರವಾಸಕ್ಕೆ ಗೈಡ್ ಇದ್ದರೆ ಅವರ ಸಹಾಯ ಪಡೆದು ಹೋಟೆಲ್ ಬುಕ್ ಮಾಡಿ. ಇಲ್ಲದಿದ್ದರೆ ನೀವೇ ಆನ್‌ಲೈನ್‌ನಲ್ಲಿ ಹುಡುಕಿ ಹೋಟೆಲ್‌ ಬುಕ್ ಮಾಡಿ 

ಕ್ರೆಡಿಟ್‌–ಡೆಬಿಟ್ ಕಾರ್ಡ್, ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ಔಷಧಿಗಳು, ನಗದು ಮುಂತಾದ ಎ‌ಲ್ಲ ಪ್ರಮುಖ ವಸ್ತುಗಳನ್ನು ತೆಗೆದು ಇರಿಸಿಕೊಳ್ಳಿ

ವಿದೇಶ ಪ್ರವಾಸಕ್ಕೆ ಹೋಗುವಾಗ ಎಂದಿಗೂ ಮೂಲ ದಾಖಲೆ ಹಾಗೂ ಚಿನ್ನಾಭರಣ ತೆಗೆದುಕೊಂಡು ಹೋಗದಿರಿ 

ವಿದೇಶ ಪ್ರವಾಸಕ್ಕೂ ಮುನ್ನ ಒಂದು ಡೈರಿಯಲ್ಲಿ ನಿಮ್ಮ ವಿಳಾಸ ಹಾಗೂ ಒಂದಿಷ್ಟು ಏಮರ್ಜೆನ್ಸಿ ಕಾಂಟ್ಯಾಕ್ಟ್ ನಂಬರ್‌ಗಳನ್ನು ಬರೆಯಿರಿ 

TRAI DND App: ಸ್ಪ್ಯಾಮ್‌ ಕರೆ ಕಿರಿಕಿರಿಗೆ ಕಡಿವಾಣ; ಟ್ರಾಯ್‌ನಿಂದ ಸುಧಾರಿತ ಡಿಎನ್‌ಡಿ ಆ್ಯಪ್‌