ಯುಐ ಸಿನಿಮಾದ ಮೊದಲ ಸೀನ್‌ನಲ್ಲೇ ಪ್ರೇಕ್ಷಕರಿಗೆ ಶಾಕ್ ಕಾದಿದೆ ಎಂದ ಉಪೇಂದ್ರ
By Praveen Chandra B
Dec 17, 2024
Hindustan Times
Kannada
ನಟ ನಿರ್ದೇಶಕ ಉಪೇಂದ್ರ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಯುಐ ಸಿನಿಮಾದ ಕುರಿತು ಮಾತನಾಡಿದ್ದಾರೆ.
"ಈ ಸಿನಿಮಾದ ಮೊತ್ತಮೊದಲ ಸೀನ್ ಖಂಡಿತವಾಗಿಯೂ ಅಭಿಮಾನಿಗಳಿಗೆ ಶಾಕಿಂಗ್ ಆಗಿರಲಿದೆ" ಎಂದು ನಟ ಉಪೇಂದ್ರ ಹೇಳಿದ್ದಾರೆ.
ನನ್ನ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ. ಸಿನಿಮಾದ ಕಥೆಯೇನು ಎಂದು ವೀಕ್ಷಕರು ಡಿಕೋಡ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
"ಯುಐ ಸಿನಿಮಾದಲ್ಲಿ ಡಬಲ್ ಕ್ಲೈಮ್ಯಾಕ್ಸ್ ಇದೆ ಎನ್ನುವುದು ಸುಳ್ಳು. ಈ ಸಿನಿಮಾ ಕೇವಲ ಒಂದೇ ಒಂದು ಕ್ಲೈಮ್ಯಾಕ್ಸ್ ಹೊಂದಿರಲಿದೆ" ಎಂದರು.
"ಆದರೆ, ಈ ಸಿನಿಮಾದ ಕಂಟೆಂಟ್ ತುಂಬಾ ಸ್ಟ್ರಾಂಗ್ ಇದೆ. ಹೀಗಾಗಿ, ನಿಮಗೆ ಈ ಸಿನಿಮಾ ಎರಡೆರಡು ಬಾರಿ ನೋಡಬೇಕು ಎಂದು ಎನಿಸಬಹುದು" ಎಂದು ನಟ ಉಪೇಂದ್ರ ಹೇಳಿದ್ದಾರೆ.
ಚಿತ್ರದ ವಿತರಣಾ ಹಕ್ಕುಗಳನ್ನು ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಪಡೆದುಕೊಂಡಿದೆ. ಯುಐ ಸಿನಿಮಾ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಮೊದಲ ಶೋ ಈಗಾಗಲೇ ಹೌಸ್‌ಫುಲ್ ಆಗುವ ಸೂಚನೆಯಿದೆ. ಎಲ್ಲೆಡೆ ಪಾಸ್ಟ್ ಫಿಲ್ಲಿಂಗ್ ಕಾಣಿಸುತ್ತಿದೆ.
ಯುಐ ಸಿನಿಮಾದಲ್ಲಿ 2040ರ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಉಪೇಂದ್ರ. ಜೀ ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ನವೀನ್ ಮನೋಹರನ್ ಈ ಸಿನಿಮಾದ ಸಹ ನಿರ್ಮಾಪಕ. ಎಚ್ ಸಿ ವೇಣು ಛಾಯಾಗ್ರಹಣ ಇರುವ ಈ ಸಿನಿಮಾಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ವಿಜಯ್ ರಾಜ್ ಬಿಜಿ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಚೇತನ್ ಡಿಸೋಜಾ, ರವಿ ವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
2024ರಲ್ಲಿ ಸದ್ದು ಮಾಡಿದ ಸೆಲೆಬ್ರಿಟಿಗಳ ಮದುವೆ; ಅಂಬಾನಿ ಮಗನ ಮದುವೆ ಮಾತ್ರವಲ್ಲ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ