ಕೇಂದ್ರ ಬಜೆಟ್ 2024ರ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಈ ಬಾರಿ ಅವರು 7ನೇ ಬಜೆಟ್ ಮಂಡಿಸುತ್ತಿದ್ದಾರೆ.
ಈ ಮೂಲಕ ಮೊರಾರ್ಜಿ ದೇಸಾಯಿ ಅವರನ್ನು ಹಿಂದಿಕ್ಕಿ 7 ನೇರ ಬಜೆಟ್ ಮಂಡಿಸಿರುವ ಭಾರತದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ನಿರ್ಮಲಾ ಸೀತಾರಾಮನ್.
ಈ ವರ್ಷ ಭಾರತದಲ್ಲಿ ಎರಡು ಬಾರಿ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದೇ ವರ್ಷ ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಈ ಬಜೆಟ್ ಮಂಡನೆಯಾಗಿತ್ತು.
ಮಧ್ಯಂತರ ಬಜೆಟ್ ಎನ್ನುವುದು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಹಾಲಿ ಸರ್ಕಾರದ ಹಣವನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ಕ್ರಮವಾಗಿದೆ.
ಎರಡನೇ ಬಾರಿ ಅಂದರೆ ಇಂದು ಮಂಡನೆಯಾಗಲಿರುವ ಪೂರ್ಣ ಪ್ರಮಾಣದ ಬಜೆಟ್ ಆದಾಯ, ಖರ್ಚು ಮತ್ತು ಹಣಕಾಸಿನ ವರ್ಷದ ವಿವರವಾದ ಹಣಕಾಸು ಯೋಜನೆಯನ್ನು ವಿವರಿಸುತ್ತದೆ.
ಮಧ್ಯಂತರ ಬಜೆಟ್ ಎನ್ನುವುದು ಸೀಮಿತ ಆವೃತ್ತಿಯಾಗಿದ್ದು, ಇದು ಆಗ ಅಸ್ತಿತ್ವದಲ್ಲಿರುವ ಸರ್ಕಾರದ ವೆಚ್ಚಗಳಿಗೆ ಮಾತ್ರ ಸೀಮಿತವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ ಪೂರ್ಣ ಬಜೆಟ್ ಎನ್ನುವುದು ವಿವರವಾದ ಹಣಕಾಸು ಯೋಜನೆಯಾಗಿದ್ದು, ಒಟ್ಟಾರೆ ಸರ್ಕಾರದ ದೃಷ್ಟಿಕೋನವನ್ನು ವಿವರಿಸುತ್ತದೆ.
ಈ ಬಜೆಟ್ ವಿವಿಧ ವಲಯಗಳಿಗೆ ಹಂಚಿಕೆಗಳು, ತೆರಿಗೆ ಪ್ರಸ್ತಾವನೆ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಹೆಚ್ಚಿಸಲು ಉಪಕ್ರಮಗಳನ್ನು ಒಳಗೊಂಡಿರುತ್ತದೆ.
ಈ ಬಾರಿ ಜುಲೈ 23ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು ಯಾರಿಗೆ ಏನು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.