ಕೇಂದ್ರ ಬಜೆಟ್ 2024; ಜಿಡಿಪಿ, ಹಣದುಬ್ಬರ, ವಿತ್ತೀಯ ಕೊರತೆ ಮತ್ತಿತರ ಅಂಕಿನೋಟ

By Umesh Kumar S
Jul 22, 2024

Hindustan Times
Kannada

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಕೇಂದ್ರ ಬಜೆಟ್ 2024-25 ಮಂಡಿಸಲಿದ್ದು, ಅರ್ಥ ವ್ಯವಸ್ಥೆಯ ಅಂಕಿನೋಟ ಹೀಗಿದೆ.

ಜಿಡಿಪಿ - ಒಟ್ಟು ದೇಶೀಯ ಉತ್ಪನ್ನ

ಈ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7 ರಷ್ಟು ಬೆಳವಣಿಗೆಯಾಗುವ ಸಾಧ್ಯತೆಯಿದೆ. ಆರ್‌ಬಿಐ ಜಿಡಿಪಿ ಬೆಳವಣಿಗೆ ದರ ಶೇ.7.2 ಎಂದು ಅಂದಾಜಿಸಿದೆ. 

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುನ್ಸೂಚನೆಯಲ್ಲಿ ಭಾರತದ ಆರ್ಥಿಕತೆಯನ್ನು  ಶೇಕಡ 6.8 ರಿಂದ 7 ಕ್ಕೆ ಏರಿಸಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಶೇಕಡ 7 ಎಂದು ಹೇಳಿದೆ. 

ತೆರಿಗೆ ಸಂಗ್ರಹ: ಜುಲೈ 11ರ ತನಕ ಒಟ್ಟು ತೆರಿಗೆ ಸಂಗ್ರಹ ಶೇ.23.24ರಷ್ಟು ಏರಿಕೆಯಾಗಿ <span class='webrupee'>₹</span>6.45 ಲಕ್ಷ ಕೋಟಿ ಆಗಿದೆ.

ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಚೆನ್ನಾಗಿದ್ದು, ಜುಲೈ 11ರ ತನಕದ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ 19.54 ಏರಿ <span class='webrupee'>₹</span> 5.74 ಲಕ್ಷ ಕೋಟಿಗೆ ತಲುಪಿದೆ. 

ವಿತ್ತೀಯ ಕೊರತೆ

ಮಧ್ಯಂತರ ಬಜೆಟ್‌  ಘೋ‍ಣೆ ಪ್ರಕಾರ  ಕೇಂದ್ರವು ತನ್ನ ವಿತ್ತೀಯ ಕೊರತೆಯನ್ನು  ಈ ಸಲದ ಹಣಕಾಸು ವರ್ಷಕ್ಕೆ ಶೇಕಡ 5.1 ನಿಗದಿಪಡಿಸಿದೆ.

ಹಣದುಬ್ಬರ ಪ್ರಮಾಣ

ಚಿಲ್ಲರೆ ಹಣದುಬ್ಬರವು ಜೂನ್ 2024 ರಲ್ಲಿ 5.1 ಶೇಕಡಾಕ್ಕೆ ಏರಿತು ಮತ್ತು ಅದೇ ತಿಂಗಳಲ್ಲಿ ಆಹಾರ ಹಣದುಬ್ಬರವು ಶೇಕಡಾ 9.4 ರಷ್ಟಿದೆ. 

ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಜೂನ್‌ನಲ್ಲಿ 3.4 ಶೇಕಡಾಕ್ಕೆ ಏರಿತು, ಇದು 22 ತಿಂಗಳ ಗರಿಷ್ಠವಾಗಿದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ