ಬಜೆಟ್ ಅರ್ಥ ಮಾಡಿಕೊಳ್ಳಬೇಕೆ? ಇವಿಷ್ಟೂ ವಿವರ ಗೊತ್ತಿರಲಿ
pixabay
By Jayaraj
Jul 23, 2024
Hindustan Times
Kannada
ಕೇಂದ್ರ ಬಜೆಟ್ ಭಾರತ ಸರ್ಕಾರದ ವಾರ್ಷಿಕ ಹಣಕಾಸು ಯೋಜನೆಯಾಗಿದ್ದು, ಮುಂಬರುವ ಆರ್ಥಿಕ ವರ್ಷಕ್ಕೆ ಆದಾಯ ಮತ್ತು ವೆಚ್ಚಗಳನ್ನು ವಿವರಿಸುತ್ತದೆ.
ಭಾರತದ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ ಮೊದಲ ದಿನದಂದು ಮಂಡನೆ ಮಾಡಲಾಗುತ್ತದೆ.
ಲೋಕಸಭಾ ಚುನಾವಣೆ ಇರುವ ವರ್ಷಗಳಲ್ಲಿ, ಎರಡು ಬಜೆಟ್ ವಿಧಾನ ಅಳವಡಿಸಿಕೊಳ್ಳಲಾಗುತ್ತದೆ. ಅವುಗಳೇ ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್.
ರಕ್ಷಣಾ ಕ್ಷೇತ್ರ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವೆಚ್ಚಗಳನ್ನು ಬಜೆಟ್ ವಿವರಿಸುತ್ತದೆ.
ವಿತ್ತೀಯ ಕೊರತೆ ಎಂಬುದು ಸರ್ಕಾರದ ಒಟ್ಟು ವೆಚ್ಚ ಮತ್ತು ಅದರ ಒಟ್ಟು ಆದಾಯದ ನಡುವಿನ ವ್ಯತ್ಯಾಸವಾಗಿದೆ.
ಬಜೆಟ್ ಹಂಚಿಕೆ ಎಂದರೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಆಯಾ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹಣವನ್ನು ವಿತರಿಸುವುದಾಗಿದೆ.
ಎರಡು ಬಜೆಟ್ ವಿಧಗಳಿವೆ. ಆದಾಯ ಬಜೆಟ್ (ದಿನನಿತ್ಯದ ವೆಚ್ಚಗಳು) ಮತ್ತು ಬಂಡವಾಳ ಬಜೆಟ್ (ದೀರ್ಘಾವಧಿಯ ಹೂಡಿಕೆಗಳು)
ಕೇಂದ್ರ ಬಜೆಟ್ ಎಂಬುದು ತೆರಿಗೆಗಳಲ್ಲಿನ ಬದಲಾವಣೆ, ಅಗತ್ಯ ವಸ್ತುಗಳ ಬೆಲೆ ಮತ್ತು ಸಾರ್ವಜನಿಕ ಸೇವೆಗಳು ಸೇರಿದಂತೆ ನಾಗರಿಕರ ಮೇಲೆ ಪರಿಣಾಮ ಬೀರಬಹುದು.
ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ತಜ್ಞರೊಂದಿಗೆ ಚರ್ಚೆಗಳು, ಸಭೆ ಮತ್ತು ಸಮಾಲೋಚನೆಗಳ ಮೂಲಕ ಬಜೆಟ್ ತಯಾರಿಸಲಾಗುತ್ತದೆ.
ದೇಶದ ಆರ್ಥಿಕ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣದಲ್ಲಿ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ.
All photos: Pixabay
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ