ಡೊನಾಲ್ಡ್‌ ಟ್ರಂಪ್‌ ವಯಸ್ಸೆಷ್ಟು? ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರೆಂಬ ಹಿರಿಮೆ

By Praveen Chandra B
Nov 06, 2024

Hindustan Times
Kannada

ಅಮೆರಿಕದ ಅಧ್ಯಕ್ಷ ಪಟ್ಟಕ್ಕೇರಿದ ಅತ್ಯಂತ ಹಿರಿ ಅತ್ಯಂತ ಹಿರಿಯ ಅಧ್ಯಕ್ಷನೆಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ. 

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ನಗೆಬೀರುತ್ತಿರುವ ಡೊನಾಲ್ಡ್‌ ಟ್ರಂಪ್‌ಗೆ ಈಗ 78 ವರ್ಷ ವಯಸ್ಸು.

ಅಮೆರಿಕದ 47ನೇ ಅಧ್ಯಕ್ಷರಾಗಲಿರುವ ಟ್ರಂಪ್‌ ಜೂನ್‌ 4 , 1946ರಲ್ಲಿ ಜನಿಸಿದರು.

ಜನವರಿ 20, 2025ರಂದು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಾಗ ಇವರ ವಯಸ್ಸು 78 ವರ್ಷ, 7 ತಿಂಗಳಾಗಲಿದೆ.

ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ಅತ್ಯಧಿಕ ಹಿರಿಯ ವ್ಯಕ್ತಿ ಇವರಾಗಲಿದ್ದಾರೆ.  ಈ ಹಿಂದೆ ಜೋ ಬಿಡೆನ್‌ ಅಧ್ಯಕ್ಷಗಾದಿಗೆ ಏರಿದಾಗ ಅವರಿಗೆ 78 ವರ್ಷ 2 ತಿಂಗಳಾಗಿತ್ತು.

ಚುನಾವಣಾ ಪ್ರಚಾರ ಸಮಯದಲ್ಲಿ ಎಲ್ಲರೂ ಟ್ರಂಪ್‌ ವಯಸ್ಸನ್ನು ಟೀಕಿಸುತ್ತಿದ್ದರು. ಆದರೆ, "ನಾನು ಸದೃಢನಾಗಿದ್ದೇನೆ, ನನಗೆ ಶಕ್ತಿಯಿದೆ" ಎಂದು ಟ್ರಂಪ್‌ ಬಲವಾಗಿ ಪ್ರತಿಪಾದಿಸುತ್ತಿದ್ದರು. 

"ನನಗೆ ಇತರರಿಗಿಂತ ಹೆಚ್ಚು ಶಕ್ತಿಯಿದೆ. ನಾನು ಮೊದಲಿಗಿಂತಲೂ ಬಲಿಷ್ಠ ಮತ್ತು ಅತ್ಯುತ್ತಮ" ಎಂದು  ಅವರು ಹೇಳುತ್ತಿದ್ದರು. 

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ