ಕಷ್ಟಗಳಿಂದ ಪರಿಹಾರ ಬೇಕಾ? ಮನೆಯ ಆಗ್ನೇಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡಬೇಡಿ
By Raghavendra M Y
Nov 17, 2024
Hindustan Times
Kannada
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ಒಂದು ನಿರ್ದಿಷ್ಟ ರೀತಿಯ ಶಕ್ತಿ ಇರುತ್ತೆ. ಅದು ನಮ್ಮ ಜೀವನದ ಮೇಲೆ ಪರಿಹಾರ ಬೀರುತ್ತದೆ
ವಾಸ್ತು ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಏನನ್ನು ಇಡಬಾರದು ಎಂಬುದನ್ನು ತಿಳಿಯೋಣ
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ-ದಕ್ಷಿಣ ನಡುವಿನ ಸ್ಥಳವನ್ನು ಆಗ್ನೇಯ ದಿಕ್ಕು ಎಂದು ಕರೆಯಲಾಗುತ್ತದೆ
ಈ ದಿಕ್ಕು ಬೆಂಕಿಯ ಅಂಶಕ್ಕೆ ಸಂಬಂಧಿಸಿದೆ. ಏಕೆಂದರೆ ಸೂರ್ಯನ ಕಿರಣಗಳು ಈ ದಿಕ್ಕಿನಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿವೆ
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಏನೇ ಇಡಬೇಕಾದರೂ ತುಂಬಾ ಯೋಚಿಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು
ಸಾಮಾನ್ಯವಾಗಿ ಅಡುಗೆ ಮನೆಯನ್ನು ಈ ದಿಕ್ಕಿನಲ್ಲಿ ನಿರ್ಮಿಸಲಾಗಿರುತ್ತದೆ. ಏಕೆಂದರೆ ಬೆಂಕಿಯ ಅಂಶವು ಅಡುಗೆಗೆ ಸಂಬಂಧಿಸಿದೆ
ಆದರೆ ವಿದ್ಯುತ್ ಮತ್ತು ಸುಡುವ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ
ಈ ದಿಕ್ಕಿನಲ್ಲಿ ಮಲಗುವ ಕೋಣೆ ಇರಬಾರದು. ಇದು ವೈಯಕ್ತಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ಜಗಳವನ್ನು ಹೆಚ್ಚಿಸುತ್ತೆ. ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು
ನೀರು ಮತ್ತು ಬೆಂಕಿ ಎರಡೂ ಪ್ರಬಲ ಅಂಶಗಳಾಗಿವೆ. ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ