ವಾಸ್ತುಶಾಸ್ತ್ರ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುಗಳಿಗೂ ವಾಸ್ತು ನಿಯಮಗಳಿವೆ
ಕೆಲವೇ ದಿನಗಳಲ್ಲಿ 2024 ಮುಗಿದು ಹೊಸ ವರ್ಷ ಬರುತ್ತದೆ, ಜನರು ಈಗಾಗಲೇ ಹೊಸ ವರ್ಷ ಕ್ಯಾಲೆಂಡರ್ ಮನೆಗೆ ತಂದಿದ್ದಾರೆ
ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅದರ ಬಗ್ಗೆ ತಿಳಿಯೋಣ
ವಾಸ್ತು ಪ್ರಕಾರ ಕ್ಯಾಲೆಂಡರನ್ನು ದಕ್ಷಿಣ ದಿಕ್ಕಿಗೆ ಇಡಬಾರದು, ಇದರಿಂದ ಪ್ರಗತಿಗೆ ಅಡ್ಡಿಯುಂಟಾಗಬಹುದು
ಪೂರ್ವ, ಪಶ್ಚಿಮ ಅಥವಾ ಉತ್ತರ ಮೂರೂ ದಿಕ್ಕುಗಳಿಗೆ ಮುಖ ಮಾಡಿ ನೇತು ಹಾಕಬಹುದು
ಕೆಂಪು, ಗುಲಾಬಿ, ಹಸಿರು ಬಣ್ಣದ ಕ್ಯಾಲೆಂಡರ್‌ಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಶುಭ
ಸಂತೋಷ, ಸಮೃದ್ಧಿಗಾಗಿ ನದಿಗಳು, ಜಲಪಾತಗಳು, ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು
ಕೆಲಸದಲ್ಲಿ ಯಶಸ್ಸು ಪಡೆಯಲು ಪಶ್ಚಿಮ ದಿಕ್ಕಿಗೆ ಬಿಳಿ ಅಥವಾ ಚಿನ್ನದ ಬಣ್ಣದ ಕ್ಯಾಲೆಂಡರ್ ಇಡಬಹುದು
ಕ್ಯಾಲೆಂಡರ್‌ನಲ್ಲಿ ಒಣ ಮರಗಳು, ಸಸ್ಯಗಳು, ಅವಶೇಷಗಳು, ಪ್ರೇತಗಳು ಮತ್ತು ದುಃಖದ ಚಿತ್ರಗಳನ್ನು ಹೊಂದಿರಬಾರದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಉದ್ಯೋಗ ಸಂದರ್ಶನದಲ್ಲಿ ಆ್ಯಪಲ್ ಕಂಪನಿ ನಿಮ್ಮಿಂದ ನಿರೀಕ್ಷಿಸುವ 5 ವಿಷಯಗಳು