ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನಾವು ಇಡುವ ಪ್ರತಿಯೊಂದು ವಸ್ತುವೂ ನಮ್ಮ ಮೇಲೆ ಪ್ರಭಾವ ಬೀರುತ್ತದೆ
ಆದರೆ ಕೆಲವೊಂದು ಅನುಪಯುಕ್ತ ವಸ್ತುಗಳು ನಕಾರಾತ್ಮಕ ಪರಿಣಾಮ ಬೀರುತ್ತದೆ
ನಿಂತುಹೋಗಿರುವ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬಾರದು
ವಾಸ್ತು ಪ್ರಕಾರ ನಿಂತಿರುವ ಗಡಿಯಾರುವ ಮನೆಗೆ ನಕಾರಾತ್ಮಕ ಶಕ್ತಿಯನ್ನು ಸೆಳೆಯತ್ತದೆ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ.
ಹಳೆಯ ತುಕ್ಕು ವಸ್ತುಗಳನ್ನು ಕೂಡಾ ನಿಮ್ಮ ಮನೆಯಲ್ಲಿ ಇಡಬಾರದು. ಇದೂ ಕೂಡಾ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ
ಬಹುತೇಕ ಮನೆಗಳಲ್ಲಿ ಹಿತ್ತಾಳೆ ಪಾತ್ರೆಗಳಿರುತ್ತವೆ. ಇವುಗಳನ್ನು ಕತ್ತಲೆಯಲ್ಲಿ ಇಡುವುದರಿಂದ ಶನಿಗ್ರಹವು ಅದರಲ್ಲಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಹಿತ್ತಾಳೆ ಪಾತ್ರೆಗಳನ್ನು ಆದಷ್ಟು ಬಳಸದಿರಲು ಪ್ರಯತ್ನಿಸಿ
ಹಳೆಯ ಪುಸ್ತಕಗಳು , ಪೇಪರ್ ರಾಶಿಗಳನ್ನು ಕೂಡಾ ಮನೆಯಲ್ಲಿ ಇಡಬಾರದು
ಹಳೆಯ ಪಾದರಕ್ಷೆಗಳನ್ನು ಎಸೆಯದೆ ಮನೆಯಲ್ಲಿ ಇಟ್ಟುಕೊಳ್ಳುವುದು ಕೂಡಾ ತಪ್ಪು, ಇದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ
ಕನ್ನಡಿಯು ಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಆದರೆ ಕೆಲವು ಮನೆಯಲ್ಲಿ ಒಡೆದ, ಬಿರುಕುಬಿಟ್ಟ ಕನ್ನಡಿ ಇರುತ್ತದೆ. ಇದರಿಂದ ಲಕ್ಷ್ಮಿಯು ನಿಮ್ಮ ಮನೆಯನ್ನು ತೊರೆಯುವ ಸಾಧ್ಯತೆ ಇದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.