ಎಷ್ಟೇ ತಿಂದ್ರು ತೂಕ ಹೆಚ್ಚಾಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ. ತೂಕ ಹೆಚ್ಚಾಗಲು ಈ ಸ್ಮೂಥಿಗಳನ್ನು ಸೇವಿಸಿ ಪ್ರಯೋಜನ ಪಡೆಯಬಹುದು.
freepik
ಚಾಕೋಲೇಟ್-ಬಾಳೆಹಣ್ಣು ಸ್ಮೂಥಿ: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳಿದ್ದರೆ, ಕೋಕೋ ಪೌಡರ್ ಉತ್ಕರ್ಷಣಾ ನಿರೋಧಕಗಳನ್ನು ಹೊಂದಿದೆ. ತೂಕ ಹೆಚ್ಚಿಸಲು ಬಯಸುವವರಿಗೆ ಉತ್ತಮ.
freepik
ಬಾಳೆಹಣ್ಣು-ಬಟರ್ ಫ್ರೂಟ್ ಸ್ಮೂಥಿ: ಈ ಸ್ಮೂಥಿಯಲ್ಲಿ ಅಧಿಕ ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳನ್ನು ಹೊಂದಿವೆ. ತೂಕ ಹೆಚ್ಚಿಸಲು ಬಯಸುವವರಿಗೆ ಇದು ಬೆಸ್ಟ್ ಸ್ಮೂಥಿ.
freepik
ಅನಾನಸ್-ಎಳನೀರು ಗಂಜಿ ಸ್ಮೂಥಿ: ಇವುಗಳಲ್ಲಿ ಕ್ಯಾಲೋರಿಗಳು ಹಾಗೂ ಪ್ರೋಟೀನ್‌ಗಳು ಅಧಿಕವಾಗಿದೆ. ತೂಕ ಹೆಚ್ಚಿಸಲು ಬಯಸುವವರು ಈ ಸ್ಮೂಥಿ ತಯಾರಿಸಿ ಸೇವಿಸಬಹುದು.
freepik
ಪೀನಟ್ ಬಟರ್ (ಕಡಲೆಕಾಯಿ ಬೆಣ್ಣೆ)-ಬಾಳೆಹಣ್ಣು ಸ್ಮೂಥಿ: ಇದು ಕೂಡ ಕ್ಯಾಲೋರಿ ಹಾಗೂ ಪ್ರೋಟೀನ್‍ಗಳಲ್ಲಿ ಅಧಿಕವಾಗಿದೆ. ಪೀನಟ್ ಬಟರ್‌ನಲ್ಲಿ ಆರೋಗ್ಯಕರ ಕೊಬ್ಬು ಇದ್ದರೆ, ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‍ಗಳಿವೆ.
freepik
ಮಾವು ಸ್ಮೂಥಿ: ಈಗ ಮಾವಿನಹಣ್ಣಿನ ಋತು ಅಲ್ಲ. ಮಾವು ಸೀಝನ್ ಬಂದಾಗ ಈ ಸ್ಮೂಥಿ ತಯಾರಿಸಿ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
freepik
ಸ್ಮೂಥಿ ತಯಾರಿಸುವಾಗ ಅದಕ್ಕೆ ಸಕ್ಕರೆ ಅಥವಾ ಕೃತಕ ಪದಾರ್ಥಗಳನ್ನು ಸೇರಿಸುವುದು ಒಳ್ಳೆಯದಲ್ಲ. ಜತೆಗೆ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ತಜ್ಞ ವೈದ್ಯರೊಂದಿಗೆ ಸಮಾಲೋಚಿಸುವುದು ಮುಖ್ಯ.