ತೂಕ ಇಳಿಕೆ ಜತೆಗೆ ಹೊಟ್ಟೆ ಕೊಬ್ಬು ಕರಗಿಸಲು ಅನೇಕರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಬೆಳಗ್ಗೆ ಈ ಪಾನೀಯಗಳನ್ನು ಸೇವಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
freepik
ನಿಂಬೆ ನೀರು: ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಹಿಂಡಿ ಬೆಳಗ್ಗೆ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಹಾಗೆಯೇ ಟಾಕ್ಸಿನ್ ಹೊರಹಾಕುವಲ್ಲಿ ಸಹಕಾರಿ.
freepik
ಗ್ರೀನ್ ಟೀ: ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಟೆಚಿನ್‌ಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀಯು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಸಹಕಾರಿ.
freepik
ಶುಂಠಿ ಚಹಾ: ಶುಂಠಿಯು ನೈಸರ್ಗಿಕ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
freepik
ಸೌತೆಕಾಯಿ-ಪುದೀನ ಪಾನೀಯ: ಸೌತೆಕಾಯಿ ಮತ್ತು ಪುದೀನ ಪಾನೀಯವನ್ನು ತಯಾರಿಸಿ ಸೇವಿಸುವುದರಿಂದ ದೇಹ ಹೈಡ್ರೇಟೆಡ್ ಆಗುವುದರ ಜತೆಗೆ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
freepik
ಅರಿಶಿನ ಹಾಲು: ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಅರಶಿನವು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಟೀ ಚಮಚ ಅರಿಶಿನ ಪುಡಿಯನ್ನು ಬೆಚ್ಚಗಿನ ಹಾಲಿಗೆ ಬೆರೆಸಿ ಸೇವಿಸಿ.
freepik
ಕಾಮಕಸ್ತೂರಿ ಬೀಜದ ಪಾನೀಯ: ನೀರಿನಲ್ಲಿ ನೆನೆಸಿದ ಕಾಮಕಸ್ತೂರಿ ಅಥವಾ ಚಿಯಾ ಬೀಜದ ಪಾನೀಯ ಕುಡಿಯುವುದರಿಂದ ಹಸಿವನ್ನು ನಿಯಂತ್ರಿಸಲು ಮತ್ತು ಕೊಬ್ಬು ಕರಗಿಸಲು ಸಹಕಾರಿ.
freepik
ಪುದೀನಾ ಟೀ: ಪುದೀನಾ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.