ವೇಗವಾಗಿ ತೂಕ ಇಳಿಸೋ ಆಸೆ ಇರೋರಿಗೆ ಬೆಸ್ಟ್ ಎನ್ನಿಸುವ 5 ಜ್ಯೂಸ್‌ಗಳು 

By Reshma
Sep 07, 2024

Hindustan Times
Kannada

ತೂಕ ಇಳಿಸಿಕೊಳ್ಳಲು ಬಯಸುವವರು ದೇಹ ದಂಡಿಸಿದ್ರೆ ಸಾಲುವುದಿಲ್ಲ. ಡಯೆಟ್ ಕ್ರಮದ ಮೇಲೂ ಗಮನ ಹರಿಸಬೇಕು. ವೇಗವಾಗಿ ತೂಕ ಇಳಿಯಲು ಸಹಾಯ ಮಾಡುವ ಮನೆಯ‌ಲ್ಲೇ ತಯಾರಿಸಬಹುದಾದ 5 ಜ್ಯೂಸ್‌ಗಳಿವು 

ಆಮ್ಲಾ ಜ್ಯೂಸ್‌: ನೆಲ್ಲಿಕಾಯಿಗಳನ್ನು ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿ, ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತೂಕ ಕಡಿಮೆಯಾಗಲು ಇದು ಬೆಸ್ಟ್‌ 

ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ಒಂದು ಚಮಚ ಜೇನುತುಪ್ಪ ಸೇರಿಸಿ. ನಿಂಬೆ ರಸದಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೇರಳವಾಗಿದೆ. ಜೇನುತುಪ್ಪ ಕೊಬ್ಬು ಕರಗಿಸುತ್ತದೆ. ಇದು ತೂಕ ಇಳಿಕೆಗೆ ಹೇಳಿ ಮಾಡಿಸಿದ್ದು 

ಕ್ಯಾರೆಟ್ ಕತ್ತರಿಸಿ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಯಲ್ಲಿ ಜ್ಯೂಸ್ ತಯಾರಿಸಿ. ಕ್ಯಾರೆಟ್ ಜ್ಯೂಸ್‌ನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಹಾಗೂ ತೂಕ ಇಳಿಕೆಗೂ ಸಹಕಾರಿ 

ಬೀಟ್ರೂಟ್ ತುಂಡುಗಳಿಗೆ ನೀರು ಸೇರಿಸಿ, ನುಣ್ಣಗೆ ರುಬ್ಬಿ ಜ್ಯೂಸ್ ತಯಾರಿಸಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ರಸವು ಹಸಿವನ್ನು ಕಡಿಮೆ ಮಾಡಿ, ಚಯಾಪಚಯವನ್ನು ಸುಧಾರಿಸುತ್ತದೆ ಹಾಗೂ ತೂಕ ನಷ್ಟಕ್ಕೂ ಸಹಕಾರಿ 

ಸೆಲರಿ ಜ್ಯೂಸ್ ಕೂಡ ತೂಕ ಇಳಿಕೆಗೆ ಸಹಕಾರಿ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಆಹಾರ ಕಡುಬಯಕೆಯನ್ನೂ ನಿಯಂತ್ರಿಸುತ್ತದೆ 

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp