ಲೆಬನಾನ್ ಸ್ಪೋಟದ ಬಳಿಕ ಸುದ್ದಿಯಲ್ಲಿರುವ ಪೇಜರ್ ಅಂದ್ರೆ ಏನು? ಇಲ್ಲಿದೆ 10 ಪಾಯಿಂಟ್ಸ್
By Umesh Kumar S
Sep 18, 2024
Hindustan Times
Kannada
ಮೊಬೈಲ್‌ಗಿಂತ ಮೊದಲು ಸಂವಹನಕ್ಕೆ ಬಳಕೆಯಲ್ಲಿದ್ದ ಪುಟ್ಟ ಡಿವೈಸ್ ಪೇಜರ್. ಇದಕ್ಕೆ ಬೀಪರ್ ಅನ್ನೋ ಹೆಸರೂ ಇದೆ.
ಇದು ಸಣ್ಣ ಸಂದೇಶಗಳನ್ನು ಸ್ವೀಕರಿಸುವ ಡಿವೈಸ್. ವಿಶೇಷವಾಗಿ ಸಂಖ್ಯೆ ಮತ್ತು ಅಕ್ಷರ ಸಂಖ್ಯಾ ಚಿಹ್ನೆಗಳ ಸಂದೇಶಗಳು
ರೇಡಿಯೋ ತರಂಗಗಳ ಮುಖಾಂತರ ಪೇಜರ್ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಫೋನ್ ಬರುವುದಕ್ಕೆ ಮೊದಲು ಬಳಕೆಯಲ್ಲಿತ್ತು
ಪತ್ರಕರ್ತರು, ಡಾಕ್ಟರ್‌ಗಳು, ಟೆಕ್ನಿಷಿಯನ್ಸ್, ಮ್ಯಾನೇಜರ್‌ಗಳು ಪೇಜರ್ ಅನ್ನು ಹೆಚ್ಚಾಗಿ ಬಳಸಿದ್ದರು.
ಬೀಪ್ ಸೌಂಡ್ ಮೂಲಕ ಇದು ಸಂದೇಶ ಬಂದಿರುವ ಬಗ್ಗೆ ಎಚ್ಚರಿಸುತ್ತಿತ್ತು. ತುರ್ತು ಸಂದೇಶ ರವಾನೆಗೆ ಇದು ಬಳಕೆಯಲ್ಲಿತ್ತು.
ಪೇಜರ್ ಅನ್ನು ಆಲ್ಫ್ರೆಡ್ ಗ್ರಾಸ್ ಅಭಿವೃದ್ದಿ ಪಡಿಸಿದ್ದು, 1949ರಲ್ಲಿ ಪೇಟೆಂಟ್ ತಗೊಂಡ್ರು.
ಪೇಜರ್ ಎಂಬ ಪದವನ್ನು ಈ ಉಪಕರಣಕ್ಕೆ ಮೊದಲು ಬಳಸಿದ್ದು ಮೊಟೊರೊಲಾ. 1959ರಲ್ಲಿ ಇದನ್ನು ಅಧಿಕೃತವಾಗಿ ದಾಖಲಿಸಿತು.
ಮೊಟೊರೊಲಾ ತನ್ನ ಮೊದಲ ಪೇಜರ್ "ಪೇಜ್‌ಬಾಯ್ 1" ಅನ್ನು 1964ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.
1994ರ ಹೊತ್ತಿಗೆ ಜಗತ್ತಿನಾದ್ಯಂತ 6.1 ಕೋಟಿ ಪೇಜರ್‌ಗಳು ಬಳಕೆಯಲ್ಲಿದ್ದವು. ಮೊಬೈಲ್ ಫೋನ್ ಬಳಕೆ ಹೆಚ್ಚಾದ ಬಳಿಕ ಇದು ಮರೆಯಾಯಿತು
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ