ಟೆಲಿ ಮನಸ್ ಎಂಬ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ನಿಮಗೆಷ್ಟು ಗೊತ್ತು?
By Praveen Chandra B Nov 20, 2024
Hindustan Times Kannada
ಕೋವಿಡ್ 19 ಸಮಯದಲ್ಲಿ ಕೇಂದ್ರ ಸರಕಾರವು ಟೆಲಿ ಮನಸ್ ಎಂಬ ಯೋಜನೆ ಆರಂಭಿಸಿತ್ತು. 2022ರ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದಂದು ದೇಶಾದ್ಯಂತ ಈ ಯೋಜನೆ ಆರಂಭಿಸಲಾಗಿತ್ತು.
ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಹೆಸರೇ ಹೇಳುವಂತೆ ದೂರವಾಣಿ ಮೂಲಕ ಸಾಂತ್ವಾನ, ಪರಿಹಾರ ಹೇಳುವಂತಹ ಕಾರ್ಯಕ್ರಮ ಇದಾಗಿದೆ.
ರಾಜ್ಯ ಸರಕಾರ, ಖಾಸಗಿ ಸಂಸ್ಥೆಗಳು, ಎನ್‌ಜಿಒಗಳು, ಸರಕಾರದ ಆರೋಗ್ಯ ಸಂಸ್ಥೆಗಳ ನೆರವಿನಿಂದ ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಕಾಳಜಿ ಸೇವೆ ಇದಾಗಿದೆ.
ಭಾರತದ ಯಾವುದೇ ವ್ಯಕ್ತಿ ತಮಗೆ ಇರುವ ಮಾನಸಿಕ ಆರೋಗ್ಯ ಸಮಸ್ಯೆಯ ಕುರಿತು ಈ ಟೂಲ್ ಫ್ರೀ ಸಂಖ್ಯೆಗೆ ಕಾಲ್ ಮಾಡಬಹುದು.
ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಿಂದ ಮಾನಸಿಕ ಚಿಂತೆಗೆ ಒಳಗಾಗಿದ್ದರೆ, ವಿದ್ಯಾರ್ಥಿಗಳಿಗೆ ಖಾಸಗಿ ಸಮಸ್ಯೆಗಳಿಂದ ಮಾನಸಿಕ ಒತ್ತಡ ಬಂದಿದ್ದರೆ, ಹದಿಹರೆಯದ ಮಾನಸಿಕ ಸಮಸ್ಯೆಗಳು ಇದ್ದರೆ ಟೆಲಿ ಮನಸ್ ಅನ್ನು ಸಂಪರ್ಕಿಸಬಹುದು.
ಸಂಬಂಧಗಳ ತೊಂದರೆ, ಕೆಲಸದ ಒತ್ತಡದಿಂದ ಮಾನಸಿಕ ಆರೋಗ್ಯ ಹದಗೆಡುವುದು ಸೇರಿದಂತೆ ಹಲವು ಮಾನಸಿಕ ತೊಂದರೆ ಇರುವವರು ಸಂಪರ್ಕಿಸಬಹುದು.
ಇದೇ ರೀತಿ ಮಾದಕ ದ್ರವ್ಯ ಸೇವನೆ ಸಂಬಂಧಪಟ್ಟ ತೊಂದರೆ ಇರುವವರು ಈ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಪಡೆಯಬಹುದು.
ಖಿನ್ನತೆ, ಒತ್ತಡ ಸೇರಿದಂತೆ ಎಲ್ಲಾ ಬಗೆಯ ಮಾನಸಿಕ ಆರೋಗ್ಯ ತೊಂದರೆಗೆ ಈ ಸಹಾಯವಾಣಿಯ ಮೂಲಕ ಪರಿಹಾರ ಪಡೆಯಬಹುದು.
ಖಿನ್ನತೆ, ಒತ್ತಡ ಸೇರಿದಂತೆ ಎಲ್ಲಾ ಬಗೆಯ ಮಾನಸಿಕ ಆರೋಗ್ಯ ತೊಂದರೆಗೆ ಈ ಸಹಾಯವಾಣಿಯ ಮೂಲಕ ಪರಿಹಾರ ಪಡೆಯಬಹುದು.
ಕರ್ನಾಟಕದಲ್ಲಿ ಟೆಲಿ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ: ಟೋಲ್ ಫ್ರೀ ಸಂಖ್ಯೆ 14416 ಅಥವಾ 1800-89-14416