23 ಸಾವಿರ ಕೋಟಿ ಒಡೆಯನ ಪುತ್ರಿ SRH ಒಡತಿ ಕಾವ್ಯಾ ಮಾರನ್?

By Prasanna Kumar P N
Mar 29, 2024

Hindustan Times
Kannada

ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಹೈಸ್ಕೋರಿಂಗ್​ ಗೇಮ್​ನಲ್ಲಿ ಗೆದ್ದು ಬೀಗಿತು.

ಈ ಪಂದ್ಯದಲ್ಲಿ ಮುಂಬೈನ ಒಂದೊಂದು ವಿಕೆಟ್ ವೇಳೆ ಎಸ್​ಆರ್​ಹೆಚ್ ಒಡತಿ ಕಾವ್ಯಾ ಮಾರನ್ ಕುಣಿದು ಕುಪ್ಪಳಿಸುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕಾವ್ಯಾ ಫೋಟೋಸ್ ಮತ್ತು ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಸದ್ಯ ಟ್ರೆಂಡಿಂಗ್​ನಲ್ಲಿರುವ ಈಕೆ ಯಾರ ಮಗಳು ಎಂದು ಗೂಗಲ್​ನಲ್ಲಿ ಹೆಚ್ಚು ಸರ್ಚ್ ಮಾಡಲಾಗುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ

ಉದ್ಯಮಿ ಮತ್ತು ಎಸ್​​ಆರ್​ಹೆಚ್​​ ತಂಡದ ಒಡತಿ ಕಾವ್ಯಾ ಮಾರನ್ ಅವರು ಸನ್ ನೆಟ್‌ವರ್ಕ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ. ಇವರ ಆಸ್ತಿ ಮೌಲ್ಯ 23 ಸಾವಿರಕ್ಕೂ ಹೆಚ್ಚು

ಕಾವ್ಯಾ ಎಸ್​​ಆರ್​ಹೆಚ್ ಐಪಿಎಲ್ ತಂಡದ ಮಾಲೀಕರಲ್ಲದೆ, ಎಸ್‌ಎ ಟಿ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್​ ತಂಡದ ಮಾಲೀಕರೂ ಹೌದು.

ಉದ್ಯಮಿಗಳು ಮತ್ತು ರಾಜಕಾರಣಿಗಳ ಉನ್ನತ ಕುಟುಂಬಕ್ಕೆ ಸೇರಿದ ಕಾವ್ಯಾ ಅವರ ತಂದೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಮುತ್ತುವೇಲ್ ಕರುಣಾನಿಧಿ ಅವರ ಮೊಮ್ಮಗ.

ಕ್ರಿಕೆಟ್‌ನ ಹೊರತಾಗಿ ಕಾವ್ಯ ಅವರು ಸನ್ ಮ್ಯೂಸಿಕ್ ಮತ್ತು ನೆಟ್‌ವರ್ಕ್‌ನ ಎಫ್‌ಎಂ ಚಾನೆಲ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಟೀಕಿಸಲು ಬಳಸುವ 10 ವಿಚಾರಗಳಿವು