ಸಿರಾಜ್ ತಂದೆ-ತಾಯಿ ಯಾರು; ಮನೆ ಎಲ್ಲಿದೆ, ಆಸ್ತಿ ಮೌಲ್ಯ, ಪಡೆಯುವ ವೇತನವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

By Prasanna Kumar P N
Sep 18, 2023

Hindustan Times
Kannada

ಏಷ್ಯಾಕಪ್​ ಫೈನಲ್​​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ 8ನೇ ಟ್ರೋಫಿಗೆ ಮುತ್ತಿಕ್ಕಿದೆ. ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ 15.2 ಓವರ್​ಗಳಲ್ಲಿ 50 ರನ್​ಗಳಿಗೆ ಸರ್ವಪತನ ಕಂಡಿತು. ಭಾರತ 6.1 ಓವರ್​​​ನಲ್ಲೇ ಜಯದ ನಗೆ ಬೀರಿತು. 

ವೇಗಿ ಮೊಹಮ್ಮದ್ ಸಿರಾಜ್​ ಬೆಂಕಿ ಬೌಲಿಂಗ್ ನಡೆಸಿ ಲಂಕಾ ದಹನಕ್ಕೆ ಕಾರಣಕರ್ತರಾದರು. 7 ಓವರ್​ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿ ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಪಂದ್ಯ ಗೆಲ್ಲಿಸಿಕೊಟ್ಟ ಸಿರಾಜ್, ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಕೊಲೊಂಬೊ ಮೈದಾನದ ಸಿಬ್ಬಂದಿಗೆ ದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದರು. ಸಿರಾಜ್​ರ ಈ ನಡೆ ಸಾಕಷ್ಟು ಮೆಚ್ಚುಗೆಗೆ ಕಾರಣವಾಯಿತು.

ಸಿರಾಜ್ ಅಮೋಘ ಸಾಧನೆ ಮಾಡಿದ ಬೆನ್ನಲ್ಲೇ ನೆಟ್ಟಿಗರು ಅವರ ತಂದೆ-ತಾಯಿ ಯಾರು ಎಂದು ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ. ಗೂಗಲ್​​ನಲ್ಲಿ ಅತಿ ಹೆಚ್ಚಾಗಿ ಹುಡುಕಿದ ವಿಷಯವೇ ಇದಾಗಿದೆ. ಅದಕ್ಕೆ ಉತ್ತರ ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ.

ಸಿರಾಜ್​ ತೀರಾ ಬಡತನ ಕುಟುಂಬದಲ್ಲಿ ಬೆಳೆದ ಹುಡುಗ. ತಂದೆ ಹೆಸರು ಮೊಹಮ್ಮದ್ ಗೌಸ್, ತಾಯಿ ಶಬಾನಾ ಬೇಗಂ. ಸಹೋದರ ಮೊಹಮ್ಮದ್ ಇಸ್ಮಾಯಿಲ್. ತಾಯಿ ಗೃಹಿಣಿ. ಅವರ ತಂದೆ ಆಟೋ ಚಾಲಕ. ದುಡಿಮೆಗೆ ಇದ್ದಿದ್ದೇ ಅದೊಂದೇ ಆಧಾರ. ಆದರೆ, ಎಷ್ಟೋ ದಿನ ಬಾಡಿಗೆ ಇಲ್ಲದೆ ಬರಿಗೈಲಿ ವಾಪಸ್ ಆಗಿದ್ದು ಇದೆ.

1994ರ ಮಾರ್ಚ್​ 13ರಂದು ಜನಿಸಿದ ಸಿರಾಜ್, ಸಾಕಷ್ಟು ಕಷ್ಟದಲ್ಲಿ ಬೆಳೆದ ಹುಡುಗ. ಮೊದಲು ತೆಲಂಗಾಣದ ಹೈದರಾಬಾದ್​ನ ಸ್ಲಂವೊಂದರಲ್ಲಿ ವಾಸಿಸುತ್ತಿದ್ದರು. ಮೊದಲು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಸಿರಾಜ್, 2015ರಲ್ಲಿ ದೇಶೀಯ ಕ್ರಿಕೆಟ್​​ಗೆ ಕಾಲಿಟ್ಟರು.

ಬಳಿಕ 2017ರಲ್ಲಿ ಐಪಿಎಲ್​ಗೂ ಪ್ರವೇಶಿಸಿದರು. ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೂ ಕಾಲಿಟ್ಟರು. ಇದರಿಂದ ಸಿರಾಜ್​ ಬದುಕೇ ಬದಲಾಗಿ ಹೋಯಿತು. ನಂತರ ಹೈದರಾಬಾದ್​ನ ಜೂಬ್ಲಿಹೀಲ್ಸ್​​ನಲ್ಲಿ ಫಿಲ್ಮ್ ನಗರ ಪ್ರದೇಶದಲ್ಲಿ ಐಷಾರಾಮಿ ಮನೆ ಇದೆ. ಆದರೆ ಅವರ 2020ರಲ್ಲಿ ಅನಾರೋಗ್ಯದಿಂದ ನಿಧನರಾದರು. ಆಗ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು.

ಸ್ಲಂನಲ್ಲಿದ್ದ ಸಿರಾಜ್ ಈಗ ಐಷರಾಮಿ ಜೀವನ ನಡೆಸುತ್ತಿದ್ದಾರೆ. ಕೋಟಿಗಳಷ್ಟು ಬೆಲೆಬಾಳುವ ಮನೆಯಲ್ಲಿ ಜೀವನ ನಡೆಸುತ್ತಿರುವ ಸಿರಾಜ್, ಆಸ್ತಿ ಮೌಲ್ಯವು 47 ಕೋಟಿ. ಐಪಿಎಲ್​​ನಲ್ಲಿ ಪ್ರತಿ ಸೀಸನ್​ಗೆ 7 ಕೋಟಿ ವೇತನ, ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ 3 ಕೋಟಿ ವೇತನ ಪಡೆಯುತ್ತಾರೆ. ಅಲ್ಲದೆ,ಜಾಹೀರಾತಿನಿಂದಲೂ ಆದಾಯ ಬರುತ್ತದೆ.

ಪಂದ್ಯದ ಶುಲ್ಕ ಅಂದರೆ ಒಂದು ಟೆಸ್ಟ್​​ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ ಸಿರಾಜ್. ಅಂದು ಏನೂ ಇಲ್ಲದವ, ಕಠಿಣ ಪರಿಶ್ರಮದೊಂದಿಗೆ ಈ ಮಟ್ಟಕ್ಕೆ ಬೆಳೆದು ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದಾರೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ