ಎಲ್ಲಾ ಓಕೆ.. ಈ ಚಂದಿರ ಕಿತ್ತಳೆ, ಹಳದಿ ಅಂತ ಬಣ್ಣ ಬದಲಾಯಿಸೋದು ಯಾಕೆ
LH
By Umesh Kumar S
Sep 28, 2024
Hindustan Times
Kannada
ಬಾಹ್ಯಾಕಾಶ ಪ್ರಪಂಚ ರಹಸ್ಯಗಳಿಂದ ತುಂಬಿದೆ. ಸೌರವ್ಯೂಹದಲ್ಲಿ ಅನೇಕ ಗ್ರಹಗಳಿದ್ದರೂ, ಕಣ್ಣಿಗೆ ಕಾಣೋದು ಸೂರ್ಯ, ಚಂದ್ರ ಮಾತ್ರ,
LH
ಹಗಲು ಹೊತ್ತು ಕಾಣುವ ಸೂರ್ಯ ಜಗವನ್ನು ಬೆಳಗುತ್ತಾನೆ. ಆದರೆ ರಾತ್ರಿ ಕಾಣುವ ಚಂದ್ರ ಬೆಳದಿಂಗಳಷ್ಟೆ ಬೀರುತ್ತಾನೆ.
LH
ಬೆಳದಿಂಗಳು ಭಾವುಕರಿಗೆ ಕವಿಗಳ ಬದುಕಿಗೊಂದು ಪ್ರೇರಣೆ. ಅನೇಕ ಕವಿತೆಗಳೂ ಸೃಷ್ಟಿಯಾಗಿವೆ.
LH
ಅಂದ ಹಾಗೆ ಚಂದ್ರನ ಬಣ್ಣ ಗಮನಿಸಿದ್ದೀರಾ, ಕೆಲವೊಮ್ಮೆ ಬಿಳಿ, ಹಳದಿ, ಕೆನೆ ಬಣ್ಣ, ಕಿತ್ತಳೆ ಹೀಗೆ ಬದಲಾಗುತ್ತಿರುತ್ತದೆ ಅಲ್ವ
LH
ಚಂದ್ರನ ಬಣ್ಣ ಬದಲಾವಣೆಗೆ ಕಾರಣ ತಿಳಿಯುವ ಕುತೂಹಲ ಎಲ್ಲರಿಗೂ. ಚಂದ್ರನ ಬಣ್ಣದ ರಹಸ್ಯ ಇದುವೇ ನೋಡಿ
LH
ಚಂದ್ರ ಸ್ವಯಂ ಪ್ರಕಾಶಿತನಲ್ಲ. ಅಂದರೆ, ಸೂರ್ಯನಂತೆ ತನ್ನಿಂತಾನೇ ಬೆಳಕು ಚೆಲ್ಲಲ್ಲ. ಸೂರ್ಯನ ಬೆಳಕಿದ್ದರಷ್ಟೆ ಚಂದ್ರನಿಗೆ ಹೊಳಪು.
LH
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯ ಸ್ಥಾನದಿಂದಾಗಿ ಚಂದ್ರನ ಬಣ್ಣ ಬದಲಾಗುತ್ತದೆ.
LH
ಚಂದ್ರನು ಬೆಳ್ಳಿ ಬಣ್ಣದಲ್ಲಿ ಅತ್ಯಂತ ಪ್ರಕಾಶಮಾನವಾಗಿರುತ್ತಾನೆ. ಸೂರ್ಯನ ಬೆಳಕು ಪೂರ್ಣ ಚಂದ್ರನಿಗೆ ಬಿದ್ದಾಗ ಬೆಳ್ಳಗೆ ಕಾಣುತ್ತಾನೆ.
LH
ಚಂದ್ರನ ಬೆಳಕು ಭೂಮಿಯ ನೆರಳಿನ ಮೂಲಕ ಹಾದುಹೋದಾಗ, ಸೂರ್ಯನ ಬೆಳಕು ಕಡಿಮೆಯಾಗಿ ಕೆಂಬಣ್ಣಕ್ಕೆ ತಿರುಗುತ್ತಾನೆ.
LH
ಕೆಲವೊಮ್ಮೆ ಮಾಲಿನ್ಯದ ಕಾರಣ ಚಂದ್ರನ ಬಣ್ಣ ಹಳದಿ ಅಥವಾ ಕಿತ್ತಳೆ ಆಗುತ್ತದೆ. ಹಳದಿ ಅಥವಾ ಕಿತ್ತಳೆ ಬಣ್ಣದ ಚಂದ್ರನನ್ನು ನೋಡಿರುತ್ತೀರಿ.
LH
ಕಲುಷಿತ ಸ್ಥಳಗಳಲ್ಲಿ ಬೆಳಕು ಹೆಚ್ಚು ಹರಡಿದಾಗ, ಚಂದ್ರನ ಬಿಳಿ ಬೆಳಕಿನಿಂದ ನೀಲಿ ಬೆಳಕು ಚದುರಿ ಆತ ಕಿತ್ತಳೆ ಅಥವಾ ಹಳದಿಯಾಗಿ ಕಾಣುತ್ತಾನೆ.
LH
ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ