ಭಾರತ ನದಿಗಳಲ್ಲಿ ಅಡಗಿರುವ ಅತ್ಯಂತ ಅಪಾಯಕಾರಿ ಜೀವಿಗಳು

By Prasanna Kumar P N
Sep 27, 2024

Hindustan Times
Kannada

ಕ್ಯಾಟ್ ಫಿಶ್: ಕ್ಯಾಟ್ ಫಿಶ್ ಅಪಾಯಕಾರಿ ಜೀವಿ. ಆಳವಾದ ನೀರಿನಲ್ಲಿ ಸದಾ ಗಸ್ತು ತಿರುಗುವ ಈ ಮೀನು, ತಳ ಭಾಗದಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುತ್ತದೆ.

ಮೊಸಳೆ: ಇದು ಕೂಡ ಕ್ರೂರ ಮೃಗ. ಕಾದುನೋಡಿ ಬೇಟೆಯಾಡುವ ಮೊಸಳೆ, ಎಂಥಹದ್ದೇ ದೊಡ್ಡ ಪ್ರಾಣಿಯನ್ನು ಬೇಕಾದರೂ ನೀರಿನೊಳಗೆ ಎಳೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

ಈಲ್: ಎಲೆಕ್ಟ್ರಿಕ್ಸ್ ಈಲ್ಸ್ ಇರುವುದು ಅಪರೂಪ. ಆದರೆ ಅತ್ಯಂತ ಅಪಾಯಕಾರಿ. ಈ ಮೀನನ್ನು ಸ್ಪರ್ಶಿಸಿದರೆ ವಿದ್ಯುತ್ ಪ್ರವಹಿಸುತ್ತದೆ. ವಿದ್ಯುತ್ ಪವರ್​​ನೊಂದಿಗೆ ದೊಡ್ಡ ಪ್ರಾಣಿಗಳನ್ನು ಬೇಕಾದರೂ ಕೊಲ್ಲುವ ಸಾಮರ್ಥ್ಯ ಹೊಂದಿದೆ.

ಘರಿಯಾಲ್: ಉದ್ದನೆಯ ಮೂತಿ ಹೊಂದಿರುವ ಘರಿಯಾಲ್, ಭಾರತದ ನದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮೀನುಗಳನ್ನೇ ತಿಂದು ಬದುಕುವ ಘರಿಯಾಲ್, ಗಾತ್ರದಲ್ಲೂ ದೊಡ್ಡದು.

ಫಿರಾನಾ: ಫಿರಾನಾಗಳು ಭಾರತ ದೇಶದ್ದಲ್ಲ. ಆದರೆ, ಅದರ ಕೆಲವೊಂದು ಜಾತಿಯ ಮೀನುಗಳು ಇಲ್ಲೂ ಕಾಣಿಸಿಕೊಂಡಿವೆ. ಚೂಪಾದ ಹಲ್ಲು ಮತ್ತು ಬಲವಾದ ದವಡೆ ಹೊಂದಿರುತ್ತದೆ. ಇದು ಕೂಡ ಅಪಾಯಕಾರಿ ಜಲಚರ.

ರಿವರ್​-ಡಾಲ್ಫಿನ್: ಗಂಗಾ ನದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ರಿವರ್​ ಡಾಲ್ಫಿನ್ ಈಗ ಅಳಿವಿನಂಚಿನಲ್ಲಿದೆ. ಆದರೆ, ಆಕ್ರಮಣಕಾರಿ ಜಲಚರಗಳಲ್ಲಿ ಇದು ಒಂದು. 

ಸ್ನೇಕ್ ಹೆಡ್: ಇದು ಹೊಟ್ಟೆ ಬಾಕತನಕ್ಕೆ ಅಂದರೆ ಹಸಿವಿಗೆ ಹೆಚ್ಚು ಹೆಸರುವಾಸಿ. ಚೂಪಾದ ಹಲ್ಲುಗಳನ್ನು ಹೊಂದಿರುವ ಸ್ನೇಕ್ ಹೆಡ್, ತನ್ನ ಎದುರಾಳಿಯನ್ನು ಕ್ಷಣಾರ್ಧದಲ್ಲಿ ಕೊಲ್ಲುವ ಸಾಮರ್ಥ್ಯ ಹೊಂದಿದೆ.

ಸ್ಟಿಂಗ್ರೇ: ಇದು ವಿಷಪೂರಿತ ಬಾಲ ಸ್ಪೈಕ್ ಅನ್ನು ಹೊಂದಿದೆ. ಆ ಬಾಲದಿಂದ ಮನುಷ್ಯನಿಗೆ ಬಡಿದರೆ ತುಂಬಾ ನೋವುಂಟು ಮಾಡುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ, ಮಾರಣಾಂತಿಕ ಪರಿಣಾಮ ಎದುರಿಸಬೇಕಾಗುತ್ತದೆ.

ಟೈಗರ್​ ಫಿಶ್: ಚೂಪಾದ ಹಲ್ಲುಗಳನ್ನು ಹೊಂದಿರುವ ಭಾರತದ ಟೈಗರ್ ಮೀನು, ಪಕ್ಷಿಗಳನ್ನು ಬೇಟೆಯಾಡುತ್ತದೆ. ತುಂಬಾ ವೇಗವಾಗಿ ಚಲಿಸುತ್ತದೆ. ಮತ್ತೆ ಶಕ್ತಿಶಾಲಿಯೂ ಹೌದು.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ