ದಕ್ಷಿಣ ಭಾರತವು ಸಾಂಪ್ರದಾಯಿಕ ಸೀರೆಗಳ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ದಕ್ಷಿಣ ಭಾರತದ ಸೀರೆಗಳೆಂದರೆ ಕೇವಲ ಕಾಜೀವರಂ ಸೀರೆಗಳಷ್ಟೇ ಅಲ್ಲ ಇನ್ನೂ ಅನೇಕ ಆಕರ್ಷಕ ಸೀರೆಗಳಿವೆ. ಸೀರೆ ಪ್ರಿಯರು ಆರಿಸಿಕೊಳ್ಳಬಹುದಾದ ವೈವಿಧ್ಯಮಯ ಸೀರೆಗಳನ್ನು ನೋಡೋಣ.
Pinterest
ಕಾಂಜೀವರಂ ಸೀರೆ: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸೀರೆ. ಸುಂದರ ಡಿಸೈನ್‌ನೊಂದಿಗೆ ಹಲವಾರು ಆಯ್ಕೆಗಳು ಇದರಲ್ಲಿವೆ. ಚಿನ್ನ ಅಥವಾ ಬೆಳ್ಳಿಯ ದಾರದ ನೇಯ್ಗೆಯಿರುವ ಸೀರೆಗಳನ್ನೂ ಕಾಣಬಹುದು.
Pinterest
ಗದ್ವಾಲ್ ಸಿಲ್ಕ್ ಸೀರೆ: ಗಾಢ ಬಣ್ಣಗಳ ಸಂಯೋಜನೆಯಿರುವ ಅಗಲವಾದ ಬಾರ್ಡರ್ ಹೊಂದಿರುವ ಸೀರೆಗಳು ಪಾರಂಪರಿಕವಾಗಿ ಬಂದಿರುವ ವಿನ್ಯಾಸಗಳಿಂದ ಆಕರ್ಷಿಸುತ್ತವೆ.
Pinterest
Enter text Here
Pinterest
ಚಟ್ಟಿನಾಡು ಸಿಲ್ಕ್ ಸೀರೆ: ಕಾಟನ್ ಮಿಕ್ಸ್ ಸಿಲ್ಕ್ ಸೀರೆಯಾಗಿರುವ ಇದು ಕಾಂಟ್ರಾಸ್ಟ್ ಬಾರ್ಡರ್ ಮತ್ತು ವೇವಿ ಡಿಸೈನ್‌ನಲ್ಲಿ ಕಂಡುಬರುತ್ತದೆ. ಈ ಸೀರೆಗಳನ್ನು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಬಹುದು.
Pinterest
ಕೊನ್ರಾಡ್ ಸೀರೆ: ಸಾಂಪ್ರದಾಯಿಕ ಸೀರೆಗಳ ಆಯ್ಕೆಗೆ ಬೆಸ್ಟ್. ಲೈನ್ಸ್, ಚೆಕ್ಸ್, ಝಿಗ್‌ಝಾಗ್ ವಿನ್ಯಾಸದಿಂದ ಇದನ್ನು ಸುಲಭವಾಗಿ ಗುರುತಿಸಬಹುದು.
Pinterest
ಮೈಸೂರು ಸಿಲ್ಕ್: ಲೈಟ್ ವೇಟ್ ಸೀರೆ ಎಂದೇ ಫೇಮಸ್ ಆಗಿರುವ ಸೀರೆಯಿದು. ಮೈಸೂರಿನಲ್ಲಿ ತಯಾರಿಸವು ಚಿಕ್ಕ ಜರಿ ಅಂಚಿನ ಸೀರೆ ಆ ಊರಿನ ಹೆಸರಿನೊಂದಿಗೆ ಜನಪ್ರಿಯವಾಗಿದೆ.
Pinterest
ಪೋಚಂಪಲ್ಲಿ ಇಕ್ಕತ್ ಸೀರೆ: ರೇಷ್ಮೆ ಮತ್ತು ಹತ್ತಿ ಬಟ್ಟೆಯ ಕಾಂಬಿನೇಷನ್‌ನಲ್ಲಿ ಕಂಡುಬರುವ ನವಿಲು, ಹೂವು ಮತ್ತು ಝಿಗ್‌ಝಾಗ್ ವಿನ್ಯಾಸಗಳನ್ನೊಳಗೊಂಡ ಸಾಂಪ್ರದಾಯಿಕ ಸೀರೆ.
ಕಸವು ಸಿಲ್ಕ್ ಸೀರೆ: ದಕ್ಷಿಣ ಭಾರತದ ಕೇರಳದ ಸಂಸ್ಕೃತಿಯೊಂದಿಗೆ ಬರೆತಿರುವ ಸೀರೆಯಿದು. ಬಿಳಿ ಬಣ್ಣ ಮತ್ತು ಗೋಲ್ಡನ್ ಅಂಚುಗಳಿರುವ ಸಾಂಪ್ರದಾಯಿಕ ಸೀರೆ ಎಲ್ಲಾ ವಯಸ್ಸಿನವರಿಗೂ ಪರ್ಫೆಕ್ಟ್ ಆಗಿದೆ.
Pinterest
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ