ಹಳೆ ಸೀರೆ ಅಂತ ಮೂಲೆಗೆ ಹಾಕ್ಬೇಡಿ, ಇದ್ರಿಂದ ಸಖತ್ ಟ್ರೆಂಡಿ ಆಗಿರೋ ಬ್ಲೌಸ್ ಹೊಲಿಸಬಹುದು ನೋಡಿ
By Reshma Sep 26, 2024
Hindustan Times Kannada
ಸೀರೆಯ ಅಂದ ಹೆಚ್ಚಬೇಕು ಅಂದ್ರೆ ಬ್ಲೌಸ್ ಕೂಡ ಬಹಳ ಮುಖ್ಯವಾಗುತ್ತದೆ. ಬ್ಲೌಸ್ ಡಿಸೈನ್ ಸೀರೆಗೆ ಪರಿಪೂರ್ಣ ಲುಕ್ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಡಿ ಆಗಿರೋ ಬ್ಲೌಸ್ ಡಿಸೈನ್‌ಗಳು ಕಾಣ ಸಿಗುತ್ತಿವೆ
ನಿಮ್ಮ ಬಳಿ ಹಳೆಯ ಸೀರೆ ಇದ್ರೆ ಯಾರಿಗೋ ಕೊಡುವುದು, ಎಸೆಯುವುದು ಮಾಡ್ಬೇಡಿ. ಯಾಕಂದ್ರೆ ಇದರಿಂದ ಕೂಡ ಸಖತ್ ಟ್ರೆಂಡಿ ಆಗಿರೋ ಬ್ಲೌಸ್ ಡಿಸೈನ್ ಮಾಡಬಹುದು
ಹಳೆಯ ಸೀರೆಯಿಂದ ಹೇಗೆಲ್ಲಾ ಬ್ಲೌಸ್ ಡಿಸೈನ್ ಮಾಡಿಸಬಹುದು ಅಂತ ತಿಳಿದ್ರೆ ನೀವು ಅಚ್ಚರಿಪಡ್ತೀರಿ. ಅಂತಹ ಒಂದಿಷ್ಟು ಡಿಸೈನ್‌ಗಳು ಇಲ್ಲಿವೆ ನೋಡಿ
ಇತ್ತೀಚಿನ ದಿನಗಳಲ್ಲಿ ಡೀಪ್‌ನೆಕ್ ಬ್ಲೌಸ್ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ನೀವು ಫ್ರಂಟ್ ಅಥವಾ ಬ್ಯಾಕ್ ಡೀಪ್‌ನೆಕ್ ಬ್ಲೌಸ್ ಹೊಲಿಸಬಹುದು. ಜೊತೆಗೆ ಹಿಂಭಾಗದಲ್ಲಿ ಡೋರಿ ಕೂಡ ಇರಿಸಬಹುದು
ಮುಂಭಾಗದಲ್ಲಿ ಬ್ರಾಡ್ ನೆಕ್ ಇರುವ ಬ್ಲೌಸ್ ಹೊಲಿಸಿದ್ರೆ ಇದು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಈ ಬ್ಲೌಸ್‌ನ ಬಣ್ಣಕ್ಕೆ ಅನುಗುಣವಾಗಿ ವಿವಿಧ ಸೀರೆ ಜೊತೆ ಮ್ಯಾಚ್ ಮಾಡಿಕೊಳ್ಳಬಹುದು
ಹಳೆಯ ಸೀರೆಯಿಂದ ಸ್ಲೀವ್‌ಲೆಸ್ ಸ್ಟ್ರಿಂಗ್ ಡಿಸೈನ್‌ನ ಬ್ಲೌಸ್ ಹೊಲಿಸಬಹುದು. ಇದು ನಿಮಗೆ ಬೋಲ್ಡ್ ಲುಕ್ ನೀಡುವುದು ಸುಳ್ಳಲ್ಲ
ರೇಷ್ಮೆಯಂತಹ ದುಬಾರಿ ಸೀರೆಗಳಾದರೆ ನೆರಿಗೆ ವಿನ್ಯಾಸ ಇರಿಸಿ, ಫಪ್ ಡಿಸೈನ್ ಮಾಡಿಸಬಹುದು. ಇದಂತೂ ಪಕ್ಕಾ ಹೊಸ ಡಿಸೈನ್
ವಿ ಶೇಪ್‌ನ ಡೀಪ್ ನೆಕ್ ಬ್ಲೌಸ್ ಕೂಡ ಇತ್ತೀಚಿನ ಟ್ರೆಂಡ್. ಇದನ್ನು ಸೀರೆ ಜೊತೆ ಮಾತ್ರವಲ್ಲ ಈ ಡಿಸೈನ್ ಬ್ಲೌಸ್ ಅನ್ನು ಲೆಹಂಗಾ, ಘಾಘ್ರ ಜೊತೆ ಕೂಡ ಧರಿಸಬಹುದು
ಹಳೆಯ ಸೀರೆಯಿಂದ ಸ್ಲೀವ್‌ಲೆಸ್ ಬ್ಯಾಕ್‌ಲೆಸ್ ಬ್ಲೋನ್ ಡಿಸೈನ್ ಬ್ಲೌಸ್ ಅನ್ನ ಹೊಲಿಸಬಹುದು. ಇದು ನಿಮಗೆ ಚೆನ್ನಾಗಿ ಕಾಣುತ್ತದೆ
ನೀವು ಸಿಂಪಲ್ ಡಿಸೈನ್ ನೋಡುತ್ತಿದ್ದರೆ ರೌಂಡ್ ನೆಕ್ ಬ್ಲೌಸ್ ಹೊಲಿಸಬಹುದು. ಇದು ಹಿಂದೆ ಟೈ ಕೂಡ ಇರಿಸಿದರೆ ಟ್ರೆಂಡಿ ಎನ್ನಿಸುತ್ತದೆ