ಅನರ್ಹಗೊಂಡ ಬೆನ್ನಲ್ಲೇ ಆಸ್ಪತ್ರೆ ಸೇರಿದ ವಿನೇಶ್‌ ಫೋಗಟ್!

By Jayaraj
Aug 07, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್‌ ಬಾಕ್ಸಿಂಗ್‌ ಫೈನಲ್‌ ಪಂದ್ಯದಿಂದ ಭಾರತದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಯ್ತು.

ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್‌ ಪಂದ್ಯ ಇಂದು ರಾತ್ರಿ ನಡೆಯಬೇಕಿತ್ತು. 

ಅದಕ್ಕೂ ಮುನ್ನ, ನಿಗದಿತ ತೂಕಕ್ಕಿಂತ ಹೆಚ್ಚಿರುವ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಯ್ತು.

ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿನೇಶ್ ನಿರ್ಜಲೀಕರಣದಿಂದ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. 

ಮಾಧ್ಯಮ ವರದಿಗಳ ಪ್ರಕಾರ, ಅವರನ್ನು ಒಲಿಂಪಿಕ್ ಕ್ರೀಡಾಗ್ರಾಮದ ಪಾಲಿಕ್ಲಿನಿಕ್‌ಗೆ ಕರೆದೊಯ್ಯಲಾಗಿದೆ.

ಅಲ್ಲಿ ಅವರ ಆರೋಗ್ಯ ಸ್ಥಿರವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೈಸೂರು ಚಾಮುಂಡೇಶ್ವರಿ ದಸರಾ ಉತ್ಸವಕ್ಕೆ ಮಹಿಳಾ ಅಧಿಕಾರಿಗಳ ಕಾಯಕ