ಕನ್ನಡ ಸುದ್ದಿ  /  ಮನರಂಜನೆ  /  ಪಾಕಿಸ್ತಾನದ ಮೇಲೆ ಭಾರತದ ಏರ್‌ಸ್ಟ್ರೈಕ್‌, ಇದು 1965ರ ಕಥೆ; ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌

ಪಾಕಿಸ್ತಾನದ ಮೇಲೆ ಭಾರತದ ಏರ್‌ಸ್ಟ್ರೈಕ್‌, ಇದು 1965ರ ಕಥೆ; ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌

Oct 02, 2023 05:39 PM IST

ಪಾಕಿಸ್ತಾನದ ಮೇಲೆ ಭಾರತದ ಏರ್‌ಸ್ಟ್ರೈಕ್‌, ಇದು 1965ರ ಕಥೆ; ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌

    • ಅಕ್ಷಯ್‌ ಕುಮಾರ್‌ ಮತ್ತೊಂದು ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ. ಗಾಂಧಿ- ಶಾಸ್ತ್ರಿ ಜಯಂತಿ ದಿನವೇ ಸ್ಕೈ ಫೋರ್ಸ್‌ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. 1965ರಲ್ಲಿ ನಡೆದ ವೈಮಾನಿಕ ದಾಳಿಯ ಕಥೆ ಈ ಚಿತ್ರದ್ದು. 
ಪಾಕಿಸ್ತಾನದ ಮೇಲೆ ಭಾರತದ ಏರ್‌ಸ್ಟ್ರೈಕ್‌, ಇದು 1965ರ ಕಥೆ; ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌
ಪಾಕಿಸ್ತಾನದ ಮೇಲೆ ಭಾರತದ ಏರ್‌ಸ್ಟ್ರೈಕ್‌, ಇದು 1965ರ ಕಥೆ; ಸ್ಕೈ ಫೋರ್ಸ್‌ ಸಿನಿಮಾ ಘೋಷಿಸಿದ ಅಕ್ಷಯ್‌ ಕುಮಾರ್‌

Sky Force: ಇತ್ತೀಚೆಗಷ್ಟೇ ಬಿಡುಗಡೆಯಾದ ಅಕ್ಷಯ್ ಕುಮಾರ್ ನಟನೆಯ OMG 2 ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆದರೂ, ಗಳಿಕೆ ವಿಚಾರದಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಅದಾದ ಬಳಿಕ ಮಿಷನ್‌ ರಾಣಿಗಂಜ್; ದಿ ಗ್ರೇಟ್‌ ಭಾರತ್‌ ರೆಸ್ಕ್ಯೂ ಸಿನಿಮಾ ಪ್ರಮೋಷನ್‌ ಕೆಲಸಗಳಲ್ಲೂ ಅವರು ಬಿಜಿಯಾಗಿದ್ದಾರೆ. ಈ ಮೂಲಕ ಜಸ್ವಂತ್‌ ಗಿಲ್‌ ಅವರ ಪಾತ್ರದಲ್ಲಿ ಅಕ್ಷಯ್‌ ಕಾಣಿಸಿಕೊಂಡಿದ್ದಾರೆ. ಈ ನಡುವೆ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜಯಂತಿ ನಿಮಿತ್ತ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

AR Rahman: ಅಮ್ಮನ ಚಿನ್ನಾಭರಣ ಗಿರವಿಗಿಟ್ಟು ಮ್ಯೂಸಿಕ್‌ ಸ್ಟುಡಿಯೋಗೆ ಮೊದಲ ಸಂಗೀತ ಸಲಕರಣೆ ಖರೀದಿಸಿದ್ರಂತೆ ಎಆರ್‌ ರೆಹಮಾನ್‌

ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ

ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ರಶ್ಮಿಕಾ ಮಂದಣ್ಣ; ಭಾರತದ 10 ವರ್ಷದ ಅಭಿವೃದ್ಧಿಗೆ ವಾಹ್‌ ಅಂದ್ರು ಪುಷ್ಪ ನಟಿ

Bhagyalakshmi Serial: ಭಾಗ್ಯಾ ರೂಮ್‌ಗೆ ಬ್ಯಾಗ್‌ ಕದಿಯಲು ಹೋಗಿ ವಾರ್ಡ್‌ರೂಬ್‌ನಲ್ಲಿ ಲಾಕ್‌ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಇತ್ತೀಚಿನ ಕೆಲ ವರ್ಷಗಳಿಂದ ನಟ ಅಕ್ಷಯ್‌ ಕುಮಾರ್‌ ದೇಶಪ್ರೇಮ ಸಾರುವ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಕಮರ್ಷಿಯಲ್‌ ಆಂಗಲ್‌ ಜತೆಗೆ ಅದರಲ್ಲೊಂದಿಷ್ಟು ದೇಶ ಪ್ರೇಮವನ್ನು ಉಕ್ಕಿಸುವ ಕೆಲಸವನ್ನೂ ಅವರು ಮಾಡುತ್ತಲೇ ಬಂದಿದ್ದಾರೆ. ಇದೀಗ ಇತಿಹಾಸ ಪುಟ ಸೇರಿದ ಮತ್ತೊಂದು ಕಥಾನಕವನ್ನು ಹಿಡಿದು ಬಂದಿದ್ದಾರೆ. ಲಾಲ್‌ ಬಹದ್ದೂರ್‌ ಶಾಸ್ತ್ರಿ ಮತ್ತು ಗಾಂಧೀಜಿ ಅವರ ಜನ್ಮ ದಿನದಂದೇ ಸ್ಕೈ ಫೋರ್ಸ್‌ ಹೆಸರಿನ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಹಾಗಾದರೆ ಏನಿದು ಸ್ಕೈ ಫೋರ್ಸ್‌? ಮುಂದೆ ಓದಿ.

1965ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವೈಮಾನಿಕ ದಾಳಿಯ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ. ವೈಮಾನಿಕ ದಾಳಿಯ ಹಿನ್ನೆಲೆಯ ಸಿನಿಮಾ ಆದ್ದರಿಂದ ಸ್ಕೈ ಫೋರ್ಸ್‌ ಎಂಬ ಶೀರ್ಷಿಕೆಯನ್ನಿಡಲಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿನೇಶ್ ವಿಜನ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅಕ್ಷಯ್ ಕುಮಾರ್ ಜತೆಗೆ ನಿಮ್ರತ್ ಕೌರ್, ಸಾರಾ ಅಲಿ ಖಾನ್ ಸೇರಿ ಹಲವರು ನಟಿಸಲಿದ್ದಾರೆ. ಕಿರು ಟೀಸರ್‌ ಜತೆಗೆ 2024ರ ಅಕ್ಟೋಬರ್ 2 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದನ್ನೂ ಅಕ್ಷಯ್‌ ಕುಮಾರ್‌ ಅನೌನ್ಸ್‌ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿರುವ ಅಕ್ಷಯ್‌ ಕುಮಾರ್‌, ಇಂದು ಗಾಂಧಿ- ಶಾಸ್ತ್ರಿ ಜಯಂತಿ. ಇಡೀ ದೇಶವೇ ಹೇಳುತ್ತಿದೆ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ ಎಂದು. ನಂಬಲಾಗದ ಕಥೆಯನ್ನು ಘೋಷಿಸಲು ಇವತ್ತಿಗಿಂತ ಉತ್ತಮ ದಿನವಿಲ್ಲ. ಭಾರತದ ಮೊದಲ ವೈಮಾನಿಕ ದಾಳಿಯ ಕಥೆಯಿದು" ಎಂದು ಬರೆದುಕೊಂಡು, ವಿಡಿಯೋ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಜಿಯೋ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ