About Us - https://kannada.hindustantimes.com

ನಮ್ಮ ಬಗ್ಗೆ ತಿಳಿದುಕೊಳ್ಳಿ

1924 ರಲ್ಲಿ ಮಹಾತ್ಮ ಗಾಂಧಿಯವರು ಹಿಂದೂಸ್ತಾನ್ ಟೈಮ್ಸ್ ಅನ್ನು ಪ್ರಾರಂಭಿಸಿದರು. ಹೆಚ್​​ಟಿ ಮೀಡಿಯಾ ಇಂದು ಭಾರತದ ಅತಿದೊಡ್ಡ ಮಾಧ್ಯಮ ಕಂಪನಿಗಳಲ್ಲಿ ಒಂದಾಗಿದೆ.

ಹಿಂದೂಸ್ತಾನ್ ಟೈಮ್ಸ್ (ಇಂಗ್ಲಿಷ್ ಪತ್ರಿಕೆ), ಹಿಂದೂಸ್ತಾನ್ (ಹಿಂದೂಸ್ತಾನ್ ಮೀಡಿಯಾ ವೆಂಚರ್ಸ್ ಲಿಮಿಟೆಡ್ ಎಂಬ ಅಂಗಸಂಸ್ಥೆಯ ಮೂಲಕ ಹಿಂದಿ ದಿನಪತ್ರಿಕೆ) ಸಂಪಾದಕೀಯ ತಂಡವು ಉತ್ತಮ ಗುಣಮಟ್ಟ, ನಾವೀನ್ಯತೆ ಮತ್ತು ಪ್ರಾಮಾಣಿಕತೆಯನ್ನು ಉತ್ತೇಜಿಸುವಲ್ಲಿ ಮುನ್ನಡೆ ಸಾಧಿಸುತ್ತಿದೆ.

ಹಿಂದೂಸ್ತಾನ್ ಟೈಮ್ಸ್ ಜೊತೆಗೆ, ಹೆಚ್​ಟಿ ಮೀಡಿಯಾವು ರಾಷ್ಟ್ರೀಯ ವ್ಯವಹಾರ ಪತ್ರಿಕೆಯಾದ ಮಿಂಟ್ ಅನ್ನು ಪ್ರಕಟಿಸುತ್ತಿದೆ. ಮಿಂಟ್, ಇದು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಚಂಡೀಗಢ, ಪುಣೆ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಿಂದ ಪ್ರಕಟವಾಗುತ್ತಿರುವ ಭಾರತದ ಎರಡನೇ ಅತಿದೊಡ್ಡ ವ್ಯವಹಾರ ಪತ್ರಿಕೆಯಾಗಿದೆ.

ವಿದ್ಯುನ್ಮಾನ ಮಾಧ್ಯಮದಲ್ಲೂ ಹೆಚ್​​ಟಿ ಮೀಡಿಯಾ ತನ್ನ ಅಸ್ತಿತ್ವವನ್ನು ಸಾರಿದೆ. ಹೆಚ್​ಟಿ ಮೀಡಿಯಾದ ಫೀವರ್ ಎಫ್​ಎಂ ಇಂದು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರೇಡಿಯೋ ನೆಟ್‌ವರ್ಕ್ ಆಗಿದೆ. ನಾಲ್ಕು ನಗರಗಳಲ್ಲಿ ಪ್ರಾರಂಭವಾದ ಫೀವರ್ ಎಫ್​ಎಂ ಇಂದು ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್. ಲಖನೌ, ಕಾನ್ಪುರ, ಆಗ್ರಾ, ಗೋರಖ್‌ಪುರ, ಅಲಹಾಬಾದ್, ಅಲಿಗಢ್ ಮತ್ತು ಬರೇಲಿ - ಈ 13 ನಗರಗಳವರೆಗೂ ಪ್ರೇಕ್ಷಕರನ್ನು ತಲುಪಿದೆ.

ಹೆಚ್​​ಟಿ ಮೀಡಿಯಾದ ಇಂಟರ್ನೆಟ್ ವ್ಯವಹಾರಗಳು ಫೈರ್‌ಫ್ಲೈ ಇ-ಎಂಟರ್‌ಪ್ರೈಸ್‌ನ ಭಾಗವಾಗಿದೆ ಮತ್ತು ಅವುಗಳು ಪ್ರಮುಖ ವೆಬ್ ಪೋರ್ಟಲ್‌ಗಳಾದ HindustanTimes.com ಮತ್ತು LiveMint.com ಅನ್ನು ನಿರ್ವಹಿಸುತ್ತವೆ. ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತವಾಗಲು ಪ್ರಾರಂಭಿಸಲಾದ ವೆಬ್‌ಸೈಟ್ ಇವಾಗಿವೆ.

Shine.com ವೆಬ್‌ಸೈಟ್ ತನ್ನ ನವೀನ ವಿನ್ಯಾಸ ಮತ್ತು ಉಪಯುಕ್ತತೆಗಾಗಿ ಗ್ರಾಹಕರು ಮತ್ತು ಇಂಡಸ್ಟ್ರಿಯಿಂದ ಹೆಚ್ಚಿನ ಪ್ರಶಂಸೆಯನ್ನು ಪಡೆದಿದೆ. DesiMartini.com - ಇದು ಮನರಂಜನೆ, ವಿಶೇಷವಾಗಿ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಒದಗಿಸುತ್ತದೆ

ಸಂಸ್ಥೆಯ ಶೈಕ್ಷಣಿಕ ಪೋರ್ಟಲ್ www.HTCampus.com ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಹಿಂದೂಸ್ತಾನ್ ಟೈಮ್ಸ್ ವೆಬ್ ಪೋರ್ಟಲ್‌ಗಳು ಹಿಂದಿ, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಲಭ್ಯವಿದೆ. ಇದೀಗ ಹೆಚ್​​ಟಿ ಮಾಧ್ಯಮವು ಹೆಚ್‌ಟಿ ಕನ್ನಡ ಮೂಲಕ ಕನ್ನಡ ಭಾಷೆಯ ಓದುಗರನ್ನು ತಲುಪುತ್ತಿದೆ.