ಕನ್ನಡ ಸುದ್ದಿ  /  ಮನರಂಜನೆ  /  Jio World Plaza: ಪಬ್ಲಿಕ್‌ನಲ್ಲಿ ಇದೇನ್ರಿ, ಮುದ್ದಿನ ಪತ್ನಿ ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ ರಣವೀರ್‌ ಸಿಂಗ್‌

Jio World Plaza: ಪಬ್ಲಿಕ್‌ನಲ್ಲಿ ಇದೇನ್ರಿ, ಮುದ್ದಿನ ಪತ್ನಿ ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ ರಣವೀರ್‌ ಸಿಂಗ್‌

Praveen Chandra B HT Kannada

Nov 01, 2023 11:21 AM IST

ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ ರಣವೀರ್‌ ಸಿಂಗ್‌

    • Ranveer Singh kisses Deepika Padukone: ಜಿಯೋ ವರ್ಲ್ಡ್‌ ಪ್ಲಾಜಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.
ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ ರಣವೀರ್‌ ಸಿಂಗ್‌
ದೀಪಿಕಾ ಪಡುಕೋಣೆಗೆ ಸಿಹಿಚುಂಬನ ನೀಡಿದ ರಣವೀರ್‌ ಸಿಂಗ್‌

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರು ನಿನ್ನೆ ಮುಂಬೈನಲ್ಲಿ ಜಿಯೋ ವರ್ಲ್ಡ್‌ ಪ್ಲಾಜಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಿಲಯೆನ್ಸ್‌ ಫೌಂಡೇಷನ್‌ ಸ್ಥಾಪಕಿ ಮತ್ತು ಮುಖ್ಯಸ್ಥೆ ನೀತಾ ಅಂಬಾನಿಯವರ ಈ ಜಿಯೋ ವರ್ಲ್ಡ್‌ ಪ್ಲಾಜಾದಲ್ಲಿ ಸಾಕಷ್ಟು ಸಿನಿಮಾ ತಾರೆಯರು ಭಾಗವಹಿಸಿದ್ದರು. ಕರೀನಾ ಕಪೂರ್‌, ಆಲಿಯಾ ಭಟ್‌, ಕತ್ರಿನಾ ಕೈಫ್‌, ಸೋನಂ ಕಪೂರ್‌, ಜಾಹ್ನವಿ ಕಪೂರ್‌, ಸಾರಾ ಆಲಿ ಖಾನ್‌ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಅಲ್ಲಿದ್ದರು. ಇದೇ ಕಾರ್ಯಕ್ರಮದಲ್ಲಿ ತನ್ನ ಪಕ್ಕದಲ್ಲಿದ್ದ ಮುದ್ದಿನ ಪತ್ನಿ ದೀಪಿಕಾ ಪಡುಕೋಣೆಗೆ ರಣವೀರ್‌ ಸಿಂಗ್‌ ನೀಡಿದ ಸಿಹಿಚುಂಬನದ ವಿಡಿಯೋ ಇದೀಗ ವೈರಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಸೀತಾರಾಮ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌; ಅಮೃತಧಾರೆ ಜೀವನ್‌ ಸೇರಿದಂತೆ ಹೆಲ್ಮೆಟ್‌ ಧರಿಸದೆ ನಟಿಸಿರೋ ಕಲಾವಿದರನ್ನು ಎಚ್ಚರಿಸಿ

ಜಿಯೋ ವರ್ಲ್ಡ್‌ ಪ್ಲಾಜಾದ ಕಾರ್ಯಕ್ರಮದಲ್ಲಿ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಆಕರ್ಷಣೆಯಾಗಿದ್ದರು. ಈ ಕಾರ್ಯಕ್ರಮದಲ್ಲಿ ರಣವೀರ್‌ ಮತ್ತು ದೀಪಿಕಾ ಪಡುಕೋಣೆ ಖುಷಿಯಿಂದ ಭಾಗವಹಿಸಿದ್ದಾರೆ. ಇವರಿಬ್ಬರು ನೀತಾ ಅಂಬಾನಿ ಜತೆ ಮಾತನಾಡುತ್ತಿದ್ದರು. ಜಿಯೋ ವರ್ಲ್ಡ್‌ ಪ್ಲಾಜಾದ ಹೊರಗಡೆ ತಮ್ಮ ಕಾರಿಗಾಗಿ ಕಾಯುತ್ತ ಇದ್ದರು. ಆ ಸಂದರ್ಭದಲ್ಲಿ ಇವರು ಇಶಾ ಅಂಬಾನಿ ಜತೆಯೂ ಮಾತನಾಡುತ್ತಿದ್ದರು. ಆ ಗ್ಯಾಪ್‌ನಲ್ಲಿ ಮೆಲ್ಲಗೆ ದೀಪಿಕಾ ಪಡುಕೋಣೆಗೆ ರಣವೀರ್‌ ಸಿಂಗ್‌ಗೆ ರಣಬೀರ್‌ ಕಪೂರ್‌ ಕಿಸ್‌ ನೀಡಿದ್ದಾರೆ. ಈ ಸಿಹಿಮುತ್ತಿಗೆ ಪಬ್ಲಿಕ್‌ನಲ್ಲಿ ಇದೇನ್ರಿ ಎಂದು ದೀಪಿಕಾ ಬೈಕೊಂಡ್ರ ಎಂದು ತಿಳಿದುಬಂದಿಲ್ಲ.

ಕಾಫಿ ವಿದ್‌ ಕರಣ್‌ನಲ್ಲಿ ದೀಪಿಕಾ ಮತ್ತು ರಣವೀರ್‌ ಸಿಂಗ್‌

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರು ಇಟಲಿಯಲ್ಲಿ 2018ರಲ್ಲಿ ವಿವಾಹವಾಗಿದ್ದರು. ಇದಾದ ಬಳಿಕ ಇತ್ತೀಚೆಗೆ ಇವರಿಬ್ಬರು ಕರಣ್‌ ಜೋಹರ್‌ ಅವರ ಕಾಫಿ ವಿತ್‌ ಕರಣ್‌ ಸೀಸನ್‌ 8ರಲ್ಲಿ ಸಾರ್ವಜನಿಕವಾಗಿ ಜತೆಯಾಗಿ ಕಾಣಿಸಿಕೊಂಡಿದ್ದರು.

ಕಾಫಿ ವಿತ್‌ ಕರಣ್‌ ಸೀಸನ್‌ 8ರ ಮೊದಲ ಸಂಚಿಕೆಯಲ್ಲಿ ಸೆಲೆಬ್ರಿಟಿ ಚಾಟ್‌ ಶೋನಲ್ಲಿ ಇವರಿಬ್ಬರು ತಮ್ಮ ಪ್ರೀತಿ, ಪ್ರಪೋಸ್‌ ಇತ್ಯಾದಿ ವಿಷಯಗಳ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ನನ್ನನ್ನು ರಣವೀರ್‌ ಸಿಂಗ್‌ ಎಕ್ಸೈಟ್‌ಮೆಂಟ್‌ ಮಾಡಿದ್ದಷ್ಟು ಬೇರೆ ಯಾರೂ ಮಾಡಿಲ್ಲ, ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

"ನಾನು ಸಿಂಗಲ್‌ ಆಗಿರಬೇಕೆಂದು ಬಯಸಿದ್ದೆ. ಏಕೆಂದರೆ, ನಾನು ಕಠಿಣ ಸಂಬಂಧದಿಂದ ಬಂದವಳು. ಯಾರೊಂದಿಗೂ ನಿಕಟ ಸಂಬಂಧ ಹೊಂದಲು ಬಯಸಿರಲಿಲ್ಲ. ಯಾರ ಜತೆಯೂ ಕಮಿಟ್‌ ಆಗಲು ಇಚ್ಚಿಸಿರಲಿಲ್ಲ. ಇಂತಹ ಸಂದರ್ಭದಲ್ಲಿ ಇವರು ಜತೆಯಾದರು" ಎಂದು ದೀಪಿಕಾ ಪಡುಕೋಣೆ ಹೇಳಿದ್ದರು.

ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌

ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ರೊಮ್ಯಾಂಟಿಕ್‌ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ದೀಪಿಕಾ ಪಡುಕೋಣೆ ಬ್ಯೂಟಿ ಸಿಕ್ರೇಟ್‌

ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ನಟನೆ ಮಾತ್ರವಲ್ಲ, ಸೌಂದರ್ಯದ ಕಾರಣದಿಂದಲೂ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ನೀಳಕಾಯದ ಈ ಬೆಡಗಿ ತಮ್ಮ ಚರ್ಮದ ಕಾಳಜಿಯ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಇವರು ತಮ್ಮ ಸೌಂದರ್ಯದ ಗುಟ್ಟಿನ ಬಗ್ಗೆ ಹೇಳುವುದು ಹೀಗೆ ʼಮಿತ ಬಳಸಿದ್ದಷ್ಟೂ ಸೌಂದರ್ಯವು ವೃದ್ಧಿಸುತ್ತದೆʼ ಎಂದು ಅವರು ತಮ್ಮ ಬ್ಯೂಟಿ ಸೀಕ್ರೆಟ್‌ ಬಿಟ್ಟು ಕೊಟ್ಟಿದ್ದಾರೆ. ದೀಪಿಕಾ ಚರ್ಮದ ಕಾಳಜಿಯ ವಿಚಾರದಲ್ಲಿ ಸಾಕಷ್ಟು ಶಿಸ್ತನ್ನು ಹೊಂದಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ