ಕನ್ನಡ ಸುದ್ದಿ  /  ಮನರಂಜನೆ  /  ರಿಷಿ ಸುನಕ್‌ ಪಕ್ಕ ನಿಂತ್ರೂ ಸುಧಾಮೂರ್ತಿ ನನ್ನ ಹೀರೋ ಅಂದ್ರು ಟ್ವಿಂಕಲ್‌ ಖನ್ನಾ; ಲಂಡನ್‌ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದ ಅಕ್ಷಯ್‌ ಮನದನ್ನೆ

ರಿಷಿ ಸುನಕ್‌ ಪಕ್ಕ ನಿಂತ್ರೂ ಸುಧಾಮೂರ್ತಿ ನನ್ನ ಹೀರೋ ಅಂದ್ರು ಟ್ವಿಂಕಲ್‌ ಖನ್ನಾ; ಲಂಡನ್‌ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದ ಅಕ್ಷಯ್‌ ಮನದನ್ನೆ

Praveen Chandra B HT Kannada

Sep 27, 2023 03:52 PM IST

ಬ್ರಿಟನ್‌ ಪ್ರಧಾನಿ ಜತೆ ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ

    • ಬ್ರಿಟನ್‌ ಪ್ರಧಾನ ಮಂತ್ರಿ ರಿಷಿ ಸುನಕ್‌ ಅವರನ್ನು ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ-ಲೇಖಕಿ ಟ್ವಿಂಕಲ್‌ ಖನ್ನಾ ಭೇಟಿಯಾಗಿದ್ದಾರೆ. ನಿಜ ಹೇಳಬೇಕೆಂದರೆ ಇವರ ಅತ್ತೆ ಸುಧಾಮೂರ್ತಿ ನನ್ನ ಹೀರೋ" ಎಂದು ಅಕ್ಷಯ್‌ ಕುಮಾರ್‌ ಪತ್ನಿ ಟ್ವಿಂಕಲ್‌ ಖನ್ನಾ ಹೇಳಿದ್ದಾರೆ.
ಬ್ರಿಟನ್‌ ಪ್ರಧಾನಿ ಜತೆ ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ
ಬ್ರಿಟನ್‌ ಪ್ರಧಾನಿ ಜತೆ ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ

ಬ್ರಿಟನ್‌ ಪ್ರಧಾನ ಮಂತ್ರಿ ರಿಷಿ ಸುನಕ್‌ ಅವರನ್ನು ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ-ಲೇಖಕಿ ಟ್ವಿಂಕಲ್‌ ಖನ್ನಾ ಭೇಟಿಯಾಗಿದ್ದಾರೆ. ಖನ್ನಾ ಪತಿ ಅಕ್ಷಯ್‌ ಕುಮಾರ್‌ ಕೂಡ ರಿಷಿ ಸುನಕ್‌ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟ್ವಿಂಕಲ್‌ ಖನ್ನಾ ಅವರು ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಪತ್ನಿ, ಬರಹಗಾರರಾದ ಸುಧಾಮೂರ್ತಿಯವರನ್ನೂ ನೆನಪಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಾಂತಾರ, ಅನಿಮಲ್‌, ಆರ್‌ಆರ್‌ಆರ್‌ ಸಿನಿಮಾಗಳ ಗೆಲುವಿಗೆ ಕಾರಣವೇನು? ಮನೋಜ್‌ ಬಾಜಪೇಯಿ ಅಭಿಪ್ರಾಯ ಹೀಗಿದೆ ಕೇಳಿ

ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ರಶ್ಮಿಕಾ ಮಂದಣ್ಣ; ಭಾರತದ 10 ವರ್ಷದ ಅಭಿವೃದ್ಧಿಗೆ ವಾಹ್‌ ಅಂದ್ರು ಪುಷ್ಪ ನಟಿ

Bhagyalakshmi Serial: ಭಾಗ್ಯಾ ರೂಮ್‌ಗೆ ಬ್ಯಾಗ್‌ ಕದಿಯಲು ಹೋಗಿ ವಾರ್ಡ್‌ರೂಬ್‌ನಲ್ಲಿ ಲಾಕ್‌ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ಜೀವನ್‌ ಸ್ಟಾರ್ಟಪ್‌ ಕುರಿತು ಕೊಂಕು ನುಡಿದ ಶಕುಂತಲಾ; ಚಿಕ್ಕಮಗಳೂರಿಗೆ ಮಧುಚಂದ್ರಕ್ಕೆ ಹೋಗೋ ಖುಷಿಯಲ್ಲಿ ಗೌತಮ್‌ ದಂಪತಿ

ರಿಷಿ ಸುನಕ್‌ ಜತೆ ಪೋಷ್‌ ನೀಡಿದ ಟ್ವಿಂಕಲ್‌, ಅಕ್ಷಯ್‌

ಲಂಡನ್‌ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೋಲ್ಡ್‌ಸ್ಮಿತ್‌ನಲ್ಲಿ ಟ್ವಿಂಕಲ್‌ ಖನ್ನಾ ಅವರು ಫಿಕ್ಷನ್‌ ರೈಟಿಂಗ್‌ನಲ್ಲಿ ಇತ್ತೀಚೆಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಿಷಿ ಸುನಕ್‌ ಕೂಡ ಪಾಲ್ಗೊಂಡಿದ್ದರು. ರಿಷಿ ಸುನಕ್‌ ಜತೆ ಅಕ್ಷಯ್‌ ಕುಮಾರ್‌ ಮತ್ತು ಟ್ವಿಂಕಲ್‌ ಖನ್ನಾ ಅವರು ಫೋಟೋ ತೆಗೆಸಿಕೊಂಡರು. ಈ ಕುರಿತು ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹೈಹೀಲ್ಡ್‌ ಚಪ್ಪಲಿ ಧರಿಸಿರುವ ತಮ್ಮ ಬಗ್ಗೆ ಟ್ವಿಂಕಲ್‌ ಜೋಕ್‌ ಆಡಿದ್ದಾರೆ. "ನನಗೆ ಹೈಹೀಲ್ಡ್‌ ಧರಿಸಿ ಇಂತಹ ಉಡುಗೆಗಳಲ್ಲಿ ಹೋಗುವುದು ಕಷ್ಟ" ಎಂದು ಅವರು ಹೇಳಿದ್ದಾರೆ. ಇದೇ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಟ್ವಿಂಕಲ್‌ ಖನ್ನಾ ಅವರು ಸುಧಾಮೂರ್ತಿಯವರ ಬಗ್ಗೆಯೂ ಬರೆದಿದ್ದಾರೆ. "ರಿಷಿ ಸುನಕ್‌ ಅವರ ಜತೆ ಫೋಟೋ ತೆಗೆಸಿಕೊಂಡಿರುವುದು ಖುಷಿತಂದಿದೆ. ನಿಜ ಹೇಳಬೇಕೆಂದರೆ ಇವರ ಅತ್ತೆ ಸುಧಾಮೂರ್ತಿ ನನ್ನ ಹೀರೋ" ಎಂದು ಟ್ವಿಂಕಲ್‌ ಖನ್ನಾ ಬರೆದಿದ್ದಾರೆ.

ಟ್ವಿಂಕಲ್‌ ಖನ್ನಾರಿಗೆ ಸುಧಾ ಮೂರ್ತಿ ಸಂಪರ್ಕ

2021ರಲ್ಲಿ ಟ್ವಿಂಕಲ್‌ ಖನ್ನಾ ಅವರು ತಮ್ಮ ಡಿಜಿಟಲ್‌ ವೇದಿಕೆ ಟ್ವೀಕ್‌ ಇಂಡಿಯಾದ ಎರಡನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಟ್ವಿಂಕಲ್‌ ಖನ್ನಾ ಮತ್ತು ಸುಧಾ ಮೂರ್ತಿ ಭೇಟಿಯಾಗಿದ್ದರು. ಸುಧಾ ಮೂರ್ತಿಯವರನ್ನು ಟ್ವಿಂಕಲ್‌ ಖನ್ನಾ ಸಂದರ್ಶನ ಮಾಡಿದ್ದರು. "ಮನೆಯಿಂದ ಹೊರಬರುವ ಮಕ್ಕಳಲ್ಲಿ ನಿರ್ದಿಷ್ಟ ಅಪರಾಧ ಭಾವ ಇರುತ್ತದೆ. ಮಕ್ಕಳು ಮನೆಯಿಂದ ಹೊರಕ್ಕೆ ಹೋಗುವುದರ ಕುರಿತು ನಿಮ್ಮ ಅಭಿಪ್ರಾಯವೇನು?ʼ ಎಂದು ಅವರು ಕೇಳಿದ್ದರು. ಅದಕ್ಕೆ ಸುಧಾಮೂರ್ತಿ "ನೀವು ನಿಮಗೆ ಉತ್ತಮ ಸ್ನೇಹಿತರು, ಇದೇ ರೀತಿ ನೀವು ನಿಮಗೆ ಕೆಟ್ಟ ಶತ್ರು ಕೂಡ" ಎಂದು ಹೇಳಿದ್ದರು. ಅಂದರೆ, ನಮಗೆ ನಾವೇ ಶತ್ರುಗಳು, ನಮಗೆ ನಾವೇ ಮಿತ್ರರು ಎಂದು ಮಾರ್ಮಿಕವಾಗಿ ಹೇಳಿದ್ದರು. ಈ ಮೂಲಕ ನಾನು ನನ್ನನ್ನು ಬಿಟ್ಟು ಬೇರೆ ಯಾರನ್ನು ಅವಲಂಬಿಸಲಾರೆ ಎಂದಿದ್ದರು.

ಟ್ವಿಂಕಲ್‌ ಖನ್ನಾ ಬಗ್ಗೆ

ಟ್ವಿಂಕಲ್‌ ಖನ್ನಾ ಅವರು 1995ರಲ್ಲಿ ಬರ್ಸಾತ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 2001 ರ ಲವ್ ಕೆ ಲಿಯಾ ಕುಚ್ ಭಿ ಕರೇಗಾ ಚಿತ್ರದ ನಂತರ ತಮ್ಮ ನಟನಾ ವೃತ್ತಿಯನ್ನು ತೊರೆದರು. ಇವರು 2015ರಲ್ಲಿ ಮಿಸ್‌ ಫನ್ನಿಬೋನ್ಸ್‌ ಮೂಲಕ ಬರಹಗಾರ್ತಿಯಾಗಿ ವೃತ್ತಿಜೀವನ ಮುಂದುವರೆಸಿದರು. 2017ರಲ್ಲಿ ಅವರು ದಿ ಲೆಜೆಂಡ್ ಆಫ್ ಲಕ್ಷ್ಮಿ ಪ್ರಸಾದ್ ಎಂಬ ಕಥಾ ಸಂಕಲನ ಪ್ರಕಟಿಸಿದರು. ನಂತರದ ವರ್ಷದಲ್ಲಿ ಇವರು ಪೈಜಾಮಾಸ್ ಆರ್ ಫಾರ್ಗಿವಿಂಗ್ ಎಂಬ ಕಾದಂಬರಿ ಪ್ರಕಟಿಸಿದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ