ಕನ್ನಡ ಸುದ್ದಿ  /  ಮನರಂಜನೆ  /  Cirkus Box Office Day 1: ಬಾಲಿವುಡ್‌ನಲ್ಲಿ ಮುಂದುವರಿದ ಪ್ಲಾಪ್‌ ಶೋ..: ರಣವೀರ್‌ ಸಿಂಗ್‌ ಕೈ ಹಿಡಿಯದ ‘ಸರ್ಕಸ್‌’ ಮೊದಲ ದಿನವೇ ಠುಸ್....

Cirkus Box Office Day 1: ಬಾಲಿವುಡ್‌ನಲ್ಲಿ ಮುಂದುವರಿದ ಪ್ಲಾಪ್‌ ಶೋ..: ರಣವೀರ್‌ ಸಿಂಗ್‌ ಕೈ ಹಿಡಿಯದ ‘ಸರ್ಕಸ್‌’ ಮೊದಲ ದಿನವೇ ಠುಸ್....

HT Kannada Desk HT Kannada

Dec 24, 2022 12:55 PM IST

ಬಾಲಿವುಡ್‌ನಲ್ಲಿ ಮುಂದುವರಿದ ಪ್ಲಾಪ್‌ ಶೋ..: ರಣವೀರ್‌ ಸಿಂಗ್‌ ಕೈ ಹಿಡಿಯದ ‘ಸರ್ಕಸ್‌’ ಮೊದಲ ದಿನವೇ ಠುಸ್....

    • ಸರ್ಕಸ್‌ ಸಿನಿಮಾಕ್ಕೆ ನೋಡುನಿಂದ ಮೆಚ್ಚುಗೆ ಬದಲಿಗೆ ನೆಗೆಟಿವ್‌ ಕಮೆಂಟ್‌ಗಳೇ ಹೆಚ್ಚು ಸಂದಾಯವಾಗುತ್ತಿವೆ. ಬುಕ್‌ಮೈ ಶೋದಲ್ಲಿಯೂ 10ಕ್ಕೆ ಕೇವಲ 5.1 ರೇಟಿಂಗ್‌ ಸಿಕ್ಕಿದೆ.
ಬಾಲಿವುಡ್‌ನಲ್ಲಿ ಮುಂದುವರಿದ ಪ್ಲಾಪ್‌ ಶೋ..: ರಣವೀರ್‌ ಸಿಂಗ್‌ ಕೈ ಹಿಡಿಯದ ‘ಸರ್ಕಸ್‌’ ಮೊದಲ ದಿನವೇ ಠುಸ್....
ಬಾಲಿವುಡ್‌ನಲ್ಲಿ ಮುಂದುವರಿದ ಪ್ಲಾಪ್‌ ಶೋ..: ರಣವೀರ್‌ ಸಿಂಗ್‌ ಕೈ ಹಿಡಿಯದ ‘ಸರ್ಕಸ್‌’ ಮೊದಲ ದಿನವೇ ಠುಸ್....

Cirkus Box Office Day 1: ಬಾಲಿವುಡ್‌ನಲ್ಲಿ ಸೋಲಿನ ಸರಪಳಿ ಹಿರಿದಾಗುತ್ತಲೇ ಇದೆ. ಸ್ಟಾರ್‌ ಹೀರೋಗಳ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸೋಲಿನ ಮನೆ ತಲುಪುತ್ತಿವೆ. ಆಮೀರ್‌ ಖಾನ್‌ ಅವರಿಂದ ಹಿಡಿದು, ಅಕ್ಷಯ್‌ ಕುಮಾರ್‌, ಹೃತಿಕ್‌ ರೋಷನ್‌ ಸಹ ಸೋಲಿನ ರುಚಿ ಕಂಡಿದ್ದಾರೆ. ಇದೀಗ ಅದೇ ಸ್ಥಿತಿ ರಣವೀರ್‌ ಸಿಂಗ್‌ಗೂ ಬಂದೊದಗಿದೆ!

ಟ್ರೆಂಡಿಂಗ್​ ಸುದ್ದಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ಸಿಂಬಾ ಸಿನಿಮಾ ಖ್ಯಾತಿಯ ರೋಹಿತ್‌ ಶೆಟ್ಟಿ ಮತ್ತು ರಣವೀರ್‌ ಸಿಂಗ್‌ ಜೋಡಿಯ ‘ಸರ್ಕಸ್‌’ ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ಸಿನಿಮಾ ಹೇಳಿಕೊಳ್ಳುವಂತಹ ಕಲೆಕ್ಷನ್‌ ಮಾಡದೆ, ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಮುಗ್ಗರಿಸಿದೆ. ಈ ಮೂಲಕ ಕಲೆಕ್ಷನ್‌ನಲ್ಲಿ ಮತ್ತೊಂದು ಹೀನಾಯ ಸೋಲು ಬಾಲಿವುಡ್‌ಗೆ ಸಿಕ್ಕಿದೆ. ಹಾಗಂತ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯಿ ಸಿಕ್ಕಿದೆಯೇ? ಇಲ್ಲ! ನೋಡುಗ ಈ ಚಿತ್ರಕ್ಕೆ ಒಳ್ಳೆಯ ಅಂಕ ನೀಡಿಲ್ಲ.

ಸರ್ಕಸ್‌ ಸಿನಿಮಾಕ್ಕೆ ನೋಡುಗನಿಂದ ಮೆಚ್ಚುಗೆ ಬದಲಿಗೆ ನೆಗೆಟಿವ್‌ ಕಮೆಂಟ್‌ಗಳೇ ಹೆಚ್ಚು ಸಂದಾಯವಾಗುತ್ತಿವೆ. ಬುಕ್‌ಮೈ ಶೋದಲ್ಲಿಯೂ 10ಕ್ಕೆ ಕೇವಲ 5.1 ರೇಟಿಂಗ್‌ ಸಿಕ್ಕಿದೆ. ಈ ಮೂಲಕ ಈ ವರ್ಷ ಗೆಲುವಿನ ಹಳಿ ಏರದೆ, ವರ್ಷ ಮುಗಿಸುತ್ತಿದ್ದಾರೆ ರಣವೀರ್.‌ ಈ ಹಿಂದೆ ಜಯೇಶ್‌ ಭಾಯ್‌ ಜೋರ್ದಾರ್‌ ಸಿನಿಮಾ ಬಿಡುಗಡೆ ಆಗಿತ್ತಾದರೂ, ಅದೂ ಕೂಡ ಸೋಲನುಭವಿಸಿತ್ತು.

ಹಾಗಾದರೆ ‘ಸರ್ಕಸ್‌’ ಸಿನಿಮಾ ಗಳಿಕೆ ಎಷ್ಟು? ‘ಸರ್ಕಸ್‌’ ಚಿತ್ರದ ಮೊದಲ ದಿನದ ಗಳಿಕೆಯನ್ನು ನೋಡಿದರೆ, ಕೇವಲ 7ರಿಂದ 7.5 ಕೋಟಿ ಮಾತ್ರ ಗಳಿಸಿ ತೃಪ್ತಿಪಟ್ಟಿದೆ. ಕಳೆದ ವರ್ಷ ರೋಹಿತ್‌ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ಮೊದಲ ದಿನವೇ 26 ಕೋಟಿ ಗಳಿಕೆ ಕಂಡಿತ್ತು. ಇದೀಗ ‘ಸರ್ಕಸ್‌’ ಸಿನಿಮಾ ಒಂದಂಕಿಗೆ ಆಟ ನಿಲ್ಲಿಸಿದೆ.

ಮುಂಬೈನಲ್ಲಿಯೇ ‘ಸರ್ಕಸ್‌’ ಸಿನಿಮಾ ಮೊದಲ ದಿನ ಕೇವಲ 3 ಕೋಟಿ ಮಾತ್ರ ಗಳಿಕೆ ಮಾಡಿದೆ. ಇಲ್ಲಿನ ಮಲ್ಟಿಫ್ಲೆಕ್ಸ್‌ಗಳಾದ ಪಿವಿಆರ್‌ನಲ್ಲಿ 1.47 ಕೋಟಿ, ಐನಾಕ್ಸ್‌ ಮತ್ತು ಸಿನಿಪೊಲಿಸ್‌ನಲ್ಲಿ 1.70 ಕೋಟಿ ಮಾತ್ರ ಕಲೆಕ್ಷನ್‌ ಮಾಡಿದೆ.

ರೋಹಿತ್‌ ಶೆಟ್ಟಿಗೂ ಈ ಸಿನಿಮಾ ಕೆರಿಯರ್‌ನ ದೊಡ್ಡ ಸೋಲಾಗಿದೆ. 2018ರಲ್ಲಿ ಬಂದ ಸಿಂಬಾ ಸಿನಿಮಾ ಮೊದಲ ದಿನವೇ 20.72 ಕೋಟಿ ಗಳಿಸಿತ್ತು. ಗೋಲ್‌ಮಾಲ್‌ ಅಗೇನ್‌ ಸಿನಿಮಾ 30.14 ಕೋಟಿ ಕಲೆಕ್ಷನ್‌ ಮಾಡಿದರೆ, ದಿಲ್ವಾಲೆ 21 ಕೋಟಿ, ಸಿಂಗಂ ರಿಟರ್ನ್ಸ್‌ 32 ಕೋಟಿ ಮತ್ತು ಚೆನ್ನೈ ಎಕ್ಸ್‌ಪ್ರೆಸ್‌ 33.12 ಕೋಟಿ ಬಾಚಿಕೊಂಡಿತ್ತು. ಈ ಎಲ್ಲ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ರಣವೀರ್‌ ಸಿಂಗ್‌ ಜತೆಗಿನ ಸರ್ಕಸ್‌ ಕೇವಲ 7 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ