ಕನ್ನಡ ಸುದ್ದಿ  /  ಮನರಂಜನೆ  /  Deepika Padukone Buys Mercedes: ದೀಪಿಕಾ ಮನೆಗೆ ಬಂತು ಐಶಾರಾಮಿ ಕಾರು; ಏನಿದರ ವಿಶೇಷತೆ, ಫೀಚರ್ಸ್‌ ಏನು, ಬೆಲೆ ಎಷ್ಟು? ಮಾಹಿತಿ ಇಲ್ಲಿದೆ.

Deepika Padukone buys Mercedes: ದೀಪಿಕಾ ಮನೆಗೆ ಬಂತು ಐಶಾರಾಮಿ ಕಾರು; ಏನಿದರ ವಿಶೇಷತೆ, ಫೀಚರ್ಸ್‌ ಏನು, ಬೆಲೆ ಎಷ್ಟು? ಮಾಹಿತಿ ಇಲ್ಲಿದೆ.

HT Kannada Desk HT Kannada

Sep 06, 2022 02:59 PM IST

ದೀಪಿಕಾ ಪಡುಕೋಣೆ ಮನೆಗೆ ಬಂತು ಐಶಾರಾಮಿ ಕಾರು; ಏನಿದರ ವಿಶೇಷತೆ, ಫೀಚರ್ಸ್‌ ಏನು, ಬೆಲೆ ಎಷ್ಟು? ಮಾಹಿತಿ ಇಲ್ಲಿದೆ...

    • ಇತ್ತೀಚೆಗಷ್ಟೇ ಹೊಸ ಮನೆ ಪ್ರವೇಶ ಮಾಡಿದ್ದ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಇದೀಗ ಹೊಸ ಕಾರ್‌ ಖರೀದಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಈ ಸಲ ಐಶಾರಾಮಿ ಕಾರ್‌ ಖರೀದಿ ಮಾಡಿದ್ದು, ದೀಪಿಕಾ.
ದೀಪಿಕಾ ಪಡುಕೋಣೆ ಮನೆಗೆ ಬಂತು ಐಶಾರಾಮಿ ಕಾರು; ಏನಿದರ ವಿಶೇಷತೆ, ಫೀಚರ್ಸ್‌ ಏನು, ಬೆಲೆ ಎಷ್ಟು? ಮಾಹಿತಿ ಇಲ್ಲಿದೆ...
ದೀಪಿಕಾ ಪಡುಕೋಣೆ ಮನೆಗೆ ಬಂತು ಐಶಾರಾಮಿ ಕಾರು; ಏನಿದರ ವಿಶೇಷತೆ, ಫೀಚರ್ಸ್‌ ಏನು, ಬೆಲೆ ಎಷ್ಟು? ಮಾಹಿತಿ ಇಲ್ಲಿದೆ... (Youtube/ hoxen)

ಮುಂಬೈ: ಇತ್ತೀಚೆಗಷ್ಟೇ ಹೊಸ ಮನೆ ಪ್ರವೇಶ ಮಾಡಿದ್ದ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಇದೀಗ ಹೊಸ ಕಾರ್‌ ಖರೀದಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಈ ಸಲ ಐಶಾರಾಮಿ ಕಾರ್‌ ಖರೀದಿ ಮಾಡಿದ್ದು, ದೀಪಿಕಾ. ಏಕೆಂದರೆ, ಈಗಾಗಲೇ ಈ ಕಾರ್‌ ರಣವೀರ್‌ ಬಳಿ ಇದೆ. ಹಾಗಾದರೆ ದೀಪಿಕಾ ಖರೀದಿಸಿದ ಕಾರ್‌ ಯಾವುದು? ಏನಿದರ ವೈಶಿಷ್ಟತೆ ಇಲ್ಲಿದೆ ಮಾಹಿತಿ..

ಟ್ರೆಂಡಿಂಗ್​ ಸುದ್ದಿ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಜತೆ ಕಿಶನ್‌ ಬಿಳಗಲಿ ನೀರಾಟ; ಯಾಕೆ ಗುರು ನಮ್‌ ಹೊಟ್ಟೆ ಉರಿಸ್ತಿಯಾ ಅಂದ್ರು ಫ್ಯಾನ್ಸ್‌

ರೌಡಿಗಳಿಂದ ಪಾರ್ಥನಿಗೆ ಪೆಟ್ಟು, ಜೈದೇವ್‌ ಮೇಲೆ ಶಕುಂತಲಾಗೆ ಸಿಟ್ಟು; ಗೌತಮ್‌-ಭೂಮಿಕಾರಿಗೆ ಚಿಕ್ಕಮಗಳೂರಿನಲ್ಲಿ ಹನಿಮೂನ್‌, ಅಮೃತಧಾರೆ ಸ್ಟೋರಿ

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

Mercedes-Maybach GLS600 4Matic SUV ಕಾರ್‌ ಖರೀದಿ..

Mercedes-Maybach GLS600 4Matic SUV ಸದ್ಯ ಭಾರತದಲ್ಲಿ ಮರ್ಸಿಡಿಸ್‌ನ ಅತ್ಯಂತ ದುಬಾರಿ ಕಾರು ಇದಾಗಿದೆ. ಇದೇ ಇದೇ ಕಾರನ್ನು ದೀಪಿಕಾ ಪಡುಕೋಣೆ ಖರೀದಿಸಿದ್ದಾರೆ. ಬರೋಬ್ಬರಿ 2.8 ಕೋಟಿ ರೂಪಾಯಿ (ಎಕ್ಸ್ ಶೋ ರೂಂ) ಈ ಕಾರಿನ ಬೆಲೆಯಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ರಣವೀರ್ ಸಿಂಗ್ ತಮ್ಮ 36 ನೇ ಬರ್ತ್‌ಡೇಗೆ ಇದೇ ರೀತಿಯ ಡಾರ್ಕ್‌ ನೀಲಿ ಬಣ್ಣದ ಕಾರ್‌ ಖರೀದಿಸಿದ್ದರು. ಇದೀಗ ದೀಪಿಕಾ ಸಹ ಅದೇ ಬಣ್ಣದ ಕಾರ್‌ ಮನೆಗೆ ತಂದಿದ್ದಾರೆ.

ಹೊಸ Mercedes SUV ದೀಪಿಕಾ ಪ್ರಕಾಶ್ ಪಡುಕೋಣೆ ಹೆಸರಿನಲ್ಲಿ ನೋಂದಣಿಯಾಗಿದೆ. ಇದನ್ನು ಸೆಪ್ಟೆಂಬರ್ 2ರಂದು ಮುಂಬೈ RTO ನಲ್ಲಿ ನೋಂದಾಯಿಸಲಾಗಿದೆ. ಈ ವಾಹನದ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಲೆದರ್ ಅಪ್ಹೋಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ವೆಂಟಿಲೇಟೆಡ್ ಮಸಾಜ್ ಸೀಟ್‌ಗಳಂತಹ ವೈಶಿಷ್ಟ್ಯ ಈ ಕಾರ್‌ನಲ್ಲಿದೆ.

ಫೀಚರ್ಸ್‌ ಏನಿದೆ?

GLS600 4.0-ಲೀಟರ್ V8 ಎಂಜಿನ್‌ನೊಂದಿಗೆ 48V ಹೈಬ್ರಿಡ್ ಫೆಸಿಲಿಟಿ ಈ ಕಾರ್‌ನಲ್ಲಿದೆ. ಈ ಕಾರ್‌ನ ಎಂಜಿನ್ 557 PS ಹೊಂದಿದ್ದು, ಎಂಜಿನ್ಅನ್ನು 9- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇನ್ನುಳಿದಂತೆ ಕಾರ್‌ನಲ್ಲಿ ಟಚ್ ಸ್ಕ್ರೀನ್‌, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಇಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಅಲೊಯ್ ಚಕ್ರಗಳು, fog lights-front, ಪವರ್ ವಿಂಡೋಸ್ ರಿಯರ್, ಮುಂಭಾಗದ ಪವರ್ ವಿಂಡೋಸ್ , ಪ್ಯಾಸೆಂಜರ್ ಏರ್‌ಬ್ಯಾಗ್‌, ಡ್ರೈವರ್ ಏರ್‌ಬ್ಯಾಗ್‌ ಪವರ್‌ ಸ್ಟೀರಿಂಗ್, ಏರ್ ಕಂಡೀಷನರ್ ಸೇರಿ ಹತ್ತು ಹಲವು ವಿಶೇಷತೆಗಳು ಈ ಕಾರ್‌ನಲ್ಲಿವೆ.

ರಣವೀರ್‌ ಕಾರ್‌ ಕಲೆಕ್ಷನ್ಸ್..‌

ಮರ್ಸಿಡಿಸ್ ಜತೆಗೆ ಲಂಬೋರ್ಗಿನಿ ಉರಸ್ ಸಹ ರಣವೀರ್‌ ಬಳಿ ಇವೆ. ಇನ್ನುಳಿದಂತೆ ಆಸ್ಟನ್ ಮಾರ್ಟಿನ್ ರಾಪಿಡ್ ಎಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಆಡಿ ಕ್ಯೂ5, ಜಾಗ್ವಾರ್ ಎಕ್ಸ್‌ಜೆ ಎಲ್ ಸಹ ರಣವೀರ್‌ ಬಳಿ ಇವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ