ಕನ್ನಡ ಸುದ್ದಿ  /  ಮನರಂಜನೆ  /  O Movie Ready To Release: ‘ಓ’ ಮೂಲಕ ಹೆದರಿಸಲು ಬರ್ತಿದ್ದಾರೆ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌

O Movie ready to Release: ‘ಓ’ ಮೂಲಕ ಹೆದರಿಸಲು ಬರ್ತಿದ್ದಾರೆ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌

HT Kannada Desk HT Kannada

Nov 10, 2022 01:16 PM IST

‘ಓ’ ಮೂಲಕ ಹೆದರಿಸಲು ಬರ್ತಿದ್ದಾರೆ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌

    • ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡ ‘ಓ’ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಸಿದ್ದು ಮೂಲಿಮನಿ ಅಭಿನಯಿಸಿದ್ದಾರೆ.
‘ಓ’ ಮೂಲಕ ಹೆದರಿಸಲು ಬರ್ತಿದ್ದಾರೆ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌
‘ಓ’ ಮೂಲಕ ಹೆದರಿಸಲು ಬರ್ತಿದ್ದಾರೆ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌

ಇದುವರೆಗೆ ಬಂದಿರುವ ಎಲ್ಲಾ ಹಾರರ್ ಸಿನಿಮಾಗಳಿಗಿಂತ ನಮ್ಮದು ಬೇರೆ ಥರದ ಚಿತ್ರ. ಆರಂಭದ 20 ನಿಮಿಷ ಪಾತ್ರಗಳ ಪರಿಚಯ ಮಾಡಿ. ಅಲ್ಲಿಂದ ಕೊನೆಯ ಸೀನ್‌ವರೆಗೆ ಹಾರರ್ ಕಥೆ ಸಾಗುತ್ತದೆ ಎಂದು ‘ಓ’ ಚಿತ್ರದ ನಿರ್ದೇಶಕ ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಈಚೆಗೆ ನಡೆದ ಚಿತ್ರದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು. ಈ ಚಿತ್ರ ಇದೇ ಶುಕ್ರವಾರ (ನ. 11) ಬಿಡುಗಡೆ ಆಗಲಿದೆ.

ಟ್ರೆಂಡಿಂಗ್​ ಸುದ್ದಿ

ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ; A ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ ಚಾಂದನಿ

Max Movie: ಮ್ಯಾಕ್ಸ್‌ ಸಿನಿಮಾ ರಿಲೀಸ್‌ ಯಾವಾಗ? ಇನ್‌ಸ್ಪೆಕ್ಟರ್‌ ಅರ್ಜುನ್‌ ಮಹಾಕ್ಷಯ್‌ ಸಾಹಸ ನೋಡಲು ಕಾತರಗೊಂಡ ಕಿಚ್ಚ ಸುದೀಪ್‌ ಫ್ಯಾನ್ಸ್‌

Brundavana Serial: ಆಕಾಶ್‌ ಬಳಿ ಪ್ರಮಾಣ ಮಾಡಿಸಿಕೊಂಡೇ ಬಿಟ್ಲು ಭಾರ್ಗವಿ, ಅಜ್ಜಮ್ಮನನ್ನು ಬಿಡದೇ ಕಾಡುತ್ತಿದೆ ಆತಂಕ

ಲಕ್ಷ್ಮೀ ಮದುವೆಯಲ್ಲಿ ಭಾಗ್ಯಾ ಹಣ ಕದ್ದಿದ್ದು ಯಾರು? ಫ್ಲಾಶ್‌ಬ್ಯಾಕ್‌ಗೆ ಹೋದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

ವಾಮಾಚಾರದ ಜೊತೆಗೆ ಹಾರರ್ ಕಂಟೆಂಟ್ ಒಳಗೊಂಡ ‘ಓ’ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಸಹೋದರಿಯರಾಗಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಸಿದ್ದು ಮೂಲಿಮನಿ ಅಭಿನಯಿಸಿದ್ದಾರೆ. ಹಾರರ್, ಥ್ರಿಲ್ಲರ್ ಕಥೆಯಿರುವ ಈ ಚಿತ್ರಕ್ಕೆ ಮಹೇಶ್ ಸಿ. ಅಮ್ಮಲ್ಲಿದೊಡ್ಡಿ ಅವರು ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್‌ಕಟ್ ಹೇಳಿದ್ದಾರೆ. ಈ ಚಿತ್ರದ ಹಾಡೊಂದಕ್ಕೆ ಪುನೀತ್‌ರಾಜ್‌ಕುಮಾರ್ ಅವರು ದನಿ ನೀಡಿದ್ದಾರೆ. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

“ಒಂದು ಮನೆಯಲ್ಲಿ ಅಕ್ಕ ತಂಗಿಯರ ನಡುವೆ ನಡೆಯುವ ಕಥಾಹಂದರ ಇದಾಗಿದ್ದು, ಚಿತ್ರದಲ್ಲಿ ವಾಮಾಚಾರ ಮಾಡುವುದು ತಪ್ಪು ಎಂದು ತೋರಿಸಿದ್ದೇವೆ. ಒಂದೊಳ್ಳೇ ಸಿನಿಮಾ ಮಾಡಬೇಕೆಂದು ನಾವೆಲ್ಲ ಟೀಮ್ ಕೂತು ಈ ಸ್ಕ್ರಿಪ್ಟ್ ರೆಡಿ ಮಾಡಿದೆವು. ಆದರೆ ಇಲ್ಲಿ ಹೊಸಬರಿಗೆ ಯಾರೂ ಬೆಂಬಲ ನೀಡುತ್ತಿಲ್ಲ” ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಿರ್ಮಾಪಕ ಕಿರಣ್ ತಲಕಾಡು, ಚಿತ್ರವನ್ನು ಯುಎಫ್‌ಓನಲ್ಲಿ ನೋಡಿದಾಗ ಎಫೆಕ್ಟ್ ಅದ್ಭುತವಾಗಿತ್ತು. ಚಿತ್ರ ನೋಡುವಾಗ ಎಲ್ಲರೂ ಎಂಜಾಯ್ ಮಾಡುತ್ತಾರೆ. ಈ ವರ್ಷದ ಉತ್ತಮ ಹಾರರ್ ಚಿತ್ರ ಇದಾಗಲಿದೆ ಎಂಬ ನಂಬಿಕೆಯಿದೆ" ಎಂದು ಹೇಳಿದರು.

ನಾಯಕಿ ಮಿಲನಾ ನಾಗರಾಜ್ ಚಿತ್ರದ ಬಗ್ಗೆ ಹೇಳಿಕೊಂಡರು. “ಈ ಜಾನರ್ ಸಿನಿಮಾ ನೋಡಲೆಂದೇ ಒಂದಷ್ಟು ಜನ ಇರುತ್ತಾರೆ. ಅಂಥವರಿಗೆ ಈ ಚಿತ್ರ ತುಂಬಾನೇ ಇಷ್ಟವಾಗುತ್ತದೆ. ಅದ್ಭುತ ಅನಿಸುತ್ತೆ, ಒಂದೊಳ್ಳೇ ಉದ್ದೇಶ ಇಟ್ಟುಕೊಂಡು ಮಾಡಿದಂಥ ಚಿತ್ರ. ಹಾರರ್ ಸಿನಿಮಾದಲ್ಲಿ ಮಾಡೋದು ತುಂಬಾ ಕಷ್ಟ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಮಾತನಾಡಿ, ಎಲ್ಲಾ ಎಮೋಷನ್ಸ್ ಕ್ಯಾರಿ ಮಾಡುವಂಥ ಪಾತ್ರ ನನ್ನದು. ಬ್ಲಾಕ್‌ಮ್ಯಾಜಿಕ್, ಹಾರರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂಥ ಚಿತ್ರಗಳನ್ನು ಥೇಟರ್‌ನಲ್ಲೇ ಕೂತು ನೋಡಬೇಕು” ಎಂದು ಹೇಳಿದರು.

ನಂತರ ತಾಯಿಯ ಪಾತ್ರ ಮಾಡಿರುವ ಹಿರಿಯ ನಟಿ ಸಂಗೀತಾ ಮಾತನಾಡಿ, “ಈ ಚಿತ್ರದಲ್ಲಿ ಇಬ್ಬರು ಬ್ಯೂಟಿ ಸ್ಟಾರ್‌ಗಳಿದ್ದಾರೆ. ಶೂಟಿಂಗ್ ಮಾಡುವಾಗ ಇಷ್ಟೊಂದು ಹಾರರ್ ಇದೆ ಅಂತ ಗೊತ್ತಾಗಲೇ ಇಲ್ಲ. ಟ್ರೈಲರ್ ನೋಡಿದಾಗ ನನಗೇ ಭಯವಾಯಿತು” ಎಂದರು.

ದಿಲೀಪ್ ಚಕ್ರವರ್ತಿ ಅವರ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದ್ದು, ರಮೇಶ್ ಪಂಡಿತ್, ಸುಚೇಂದ್ರಪ್ರಸಾದ್, ಶ್ರಾವ್ಯ ಗಣಪತಿ. ದಶಾವರ ಚಂದ್ರು ಮಾಸ್ಟರ್ ಅಲಾಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ