ಕನ್ನಡ ಸುದ್ದಿ  /  ಮನರಂಜನೆ  /  Deepika And Ranveer: ಬೇರೆಯಾಗ್ತಿದ್ದಾರಾ ರಣವೀರ್‌ ಹಾಗೂ ದೀಪಿಕಾ..ವೈರಲ್‌ ಟ್ವೀಟ್‌ ನೋಡಿ ಅಭಿಮಾನಿಗಳಿಗೆ ಗಾಬರಿ..!

Deepika and Ranveer: ಬೇರೆಯಾಗ್ತಿದ್ದಾರಾ ರಣವೀರ್‌ ಹಾಗೂ ದೀಪಿಕಾ..ವೈರಲ್‌ ಟ್ವೀಟ್‌ ನೋಡಿ ಅಭಿಮಾನಿಗಳಿಗೆ ಗಾಬರಿ..!

HT Kannada Desk HT Kannada

Oct 04, 2022 04:39 PM IST

ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌

    • ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ನಡುವೆ ಏನೂ ಸರಿ ಇಲ್ಲ ಎಂಬ ಟ್ವೀಟ್‌ ಹರಿದಾಡುತ್ತಿದೆ. ಈ ಟ್ವೀಟ್‌ ನೋಡಿ ಇಬ್ಬರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಟ್ವೀಟ್‌ ಯಾರು ಮಾಡಿದ್ದು ಎಂದು ಪರಿಶೀಲಿಸಿದಾಗ ಉಮೈರ್‌ ಸಂಧು ಎಂಬ ಹೆಸರು ಕೇಳಿಬಂದಿದೆ.
ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌
ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ (PC: Deepika Padukone & Ranveer Singh Fans page)

ಬಾಲಿವುಡ್‌ ಕ್ಯೂಟ್‌ ಜೋಡಿಗಳಲ್ಲಿ ರಣವೀರ್‌ ಹಾಗೂ ದೀಪಿಕಾ ಕೂಡಾ ಒಬ್ಬರು. ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ರಣವೀರ್‌ ಸಿಂಗ್‌ ಬೆಂಗಳೂರಿನ ಅಳಿಯ ಆದ ಖುಷಿಯಲ್ಲಿ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಇದೀಗ ಈ ಜೋಡಿ ದೂರಾಗುತ್ತಿರುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ನಡುವೆ ಏನೂ ಸರಿ ಇಲ್ಲ ಎಂಬ ಟ್ವೀಟ್‌ ಹರಿದಾಡುತ್ತಿದೆ. ಈ ಟ್ವೀಟ್‌ ನೋಡಿ ಇಬ್ಬರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಟ್ವೀಟ್‌ ಯಾರು ಮಾಡಿದ್ದು ಎಂದು ಪರಿಶೀಲಿಸಿದಾಗ ಉಮೈರ್‌ ಸಂಧು ಎಂಬ ಹೆಸರು ಕೇಳಿಬಂದಿದೆ. ಉಮೈರ್‌ ಸಂಧು ಮಾಡಿದ ಟ್ವೀಟ್‌ ನೋಡಿ, ಆ ಸುದ್ದಿಯನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ಆದರೆ ಅದು ಫೇಕ್‌ ಸುದ್ದಿ ಎಂದು ತಿಳಿದಾಗ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೇ ದೀಪಿಕಾ ಹಾಗೂ ರಣವೀರ್‌, ಅಭಿಮಾನಿಗಳು ಈ ಟ್ವಿಟ್ಟರ್‌ ಯೂಸರ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಉಮೈರ್‌ ಸಂಧು ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಣವೀರ್ ಸಿಂಗ್, ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗಿನ ತಮ್ಮ ಸಂಬಂಧ ಬಹಳ ಸುಂದರವಾಗಿದೆ ಎಂದು ಹೇಳುವ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದರು. ''ಟಚ್‌ವುಡ್, ನಾನು ಮತ್ತು ದೀಪಿಕಾ 2012 ರಲ್ಲಿ ಭೇಟಿಯಾದೆವು, ಆಕೆ ನನಗೆ ಪರಿಚಯವಾಗಿ 10 ವರ್ಷಗಳು ತುಂಬಿವೆ. ನನಗೆ ದೀಪಿಕಾ ಬಗ್ಗೆ ಬಹಳ ಗೌರವ ಇದೆ. ನನಗೆ ದೀಪಿಕಾ ಬಹಳ ಇಷ್ಟ. ಅವಳಿಂದ ಸಾಕಷ್ಟು ಕಲಿತಿದ್ದೇನೆ'' ಎಂದು, ಪತ್ನಿ ಬಗ್ಗೆ ತಮ್ಮಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಪ್ರೂವ್‌ ಮಾಡಿದ್ದರು.

2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ 2012 ರಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ಅವರ 'ರಾಮ್ ಲೀಲಾ' ಚಿತ್ರೀಕರಣದ ಸಮಯದಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು. ದೀಪಿಕಾ ಹಾಗೂ ರಣವೀರ್‌ ಕರಿಯರ್‌ ವಿಚಾರಕ್ಕೆ ಬರುವುದಾದರೆ ದೀಪಿಕಾ ಕೊನೆಯದಾಗಿ 'ಗೆಹ್ರಾಯನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಶಾರುಖ್ ಖಾನ್ ಜೊತೆ 'ಪಠಾನ್' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಮತ್ತೊಂದೆಡೆ ರಣವೀರ್‌ 'ಸರ್ಕಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ದೇಶನದ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.

ಫೋಟೋ ವಿಚಾರದಲ್ಲಿ ಪತಿ ರಣವೀರ್‌ ಪರ ವಹಿಸಿದ್ದ ದೀಪಿಕಾ

ಕೆಲವು ದಿನಗಳ ಹಿಂದಷ್ಟೇ ರಣವೀರ್‌ ಸಿಂಗ್‌ ಹಾಲಿವುಡ್‌ ಮ್ಯಾಗಜಿನ್‌ವೊಂದಕ್ಕೆ ಮೈ ಮೇಲೆ ಒಂದೆಳೆ ಬಟ್ಟೆ ಇಲ್ಲದೆ ಫೊಟೋಶೂಟ್‌ ಮಾಡಿಸಿದ್ದರು. ಈ ಫೋಟೋಗಳ ಬಹಳ ವೈರಲ್‌ ಆಗಿತ್ತು. ಅನೇಕ ಜನರು ರಣವೀರ್‌ ವಿರುದ್ಧ ಹರಿಹಾಯ್ದಿದ್ದರು. ಆಗ ದೀಪಿಕಾ ಪಡುಕೋಣೆ, ರಣವೀರ್‌ ಪರ ವಹಿಸಿಕೊಂಡು ಮಾತನಾಡಿದ್ದರು. ಫೋಟೋಶೂಟ್‌ ಮಾಡಿಸುವಾಗ ನಾನು ಕೂಡಾ ಅಲ್ಲೇ ಇದ್ದೆ, ಎಂದಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪತಿ ರಣವೀರ್‌ ಸಿಂಗ್‌ ಜತೆಗಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದ ದೀಪಿಕಾ ಪಡುಕೋಣೆ, "ಇನ್ನಾದರೂ ಬೆತ್ತಲೆ ಗುಂಗಿನಿಂದ ಹೊರಬನ್ನಿ" ಎಂಬರ್ಥದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ