ಕನ್ನಡ ಸುದ್ದಿ  /  ಮನರಂಜನೆ  /  Ranveer Singh Interrogated By Police: ಸತತ 2 ಗಂಟೆಗಳ ವಿಚಾರಣೆ ಎದುರಿಸಿದ ರಣವೀರ್‌...ಬೆತ್ತಲೆ ಫೋಟೋಗಳ ಬಗ್ಗೆ ನಟ ಹೇಳಿದ್ದೇನು...?

Ranveer Singh interrogated by police: ಸತತ 2 ಗಂಟೆಗಳ ವಿಚಾರಣೆ ಎದುರಿಸಿದ ರಣವೀರ್‌...ಬೆತ್ತಲೆ ಫೋಟೋಗಳ ಬಗ್ಗೆ ನಟ ಹೇಳಿದ್ದೇನು...?

HT Kannada Desk HT Kannada

Aug 30, 2022 04:55 PM IST

ಬಾಲಿವುಡ್‌ ನಟ ರಣವೀರ್‌ ಸಿಂಗ್

    • ಸುಮಾರು 2 ಗಂಟೆಗಳ ಕಾಲ ಪೊಲೀಸರು ರಣವೀರ್‌ ಸಿಂಗ್‌ ವಿಚಾರಣೆ ನಡೆಸಿದರು. ಈ ಸಮಯದಲ್ಲಿ ರಣವೀರ್‌ ಸಿಂಗ್‌ಗೆ ಪೊಲೀಸರಿಂದ ನಾನಾ ಪ್ರಶ್ನೆಗಳು ಎದುರಾದವು. ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿ ನಟನನ್ನು ಅಲ್ಲಿಂದ ಕಳಿಸಲಾಗಿದೆ.
ಬಾಲಿವುಡ್‌ ನಟ ರಣವೀರ್‌ ಸಿಂಗ್
ಬಾಲಿವುಡ್‌ ನಟ ರಣವೀರ್‌ ಸಿಂಗ್ (PC: Ranveer Singh Facebook)

ಸಿನಿಮಾಗಳಿಂದ ಅಷ್ಟು ಸುದ್ದಿ ಮಾಡದಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕೆಲವು ದಿನಗಳ ಹಿಂದಷ್ಟೇ ಬೆತ್ತಲೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಇದೇ ವಿಚಾರಕ್ಕೆ ಅವರು ಬಹಳ ಟ್ರೋಲ್‌ ಆಗಿದ್ದರು. ನಟನಾಗಿ ಇತರರಿಗೆ ಮಾದರಿಯಾಗುವ ಬದಲಿಗೆ ಇಂತಹ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವೇ..? ಎಂದು ಜನರು ನೇರವಾಗಿ ಪ್ರಶ್ನಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ, ಶರಣ ತತ್ತ್ವಕ್ಕೆ ಮನಸೋತ ಕಾಶ್ಮೀರದ ರಾಜನ ಕಥೆ

ರಣಬೀರ್‌ ಕಪೂರ್‌ ನಟನೆಯ ರಾಮಾಯಣದ ಬಜೆಟ್‌ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ

ಸಂಗೀತಾ ಶೃಂಗೇರಿಗೆ ಹುಟ್ಟುಹಬ್ಬದ ಸಂಭ್ರಮ; ಡ್ರೋನ್‌ ಪ್ರತಾಪ್‌ಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿದ 777 ಚಾರ್ಲಿ ಚೆಲುವೆ

ರಣವೀರ್‌ ಹೀಗೆ ಬೆತ್ತಲೆ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದಕ್ಕಾಗಿ ಅವರ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೂಡಾ ಜಾರಿ ಮಾಡಿದ್ದರು. ಆಗಸ್ಟ್​ 22ರಂದು ರಣವೀರ್ ಸಿಂಗ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಸಿನಿಮಾ ಚಿತ್ರೀಕರಣ ಹಾಗೂ ಇನ್ನಿತರ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದ ಕಾರಣ 10 ದಿನಗಳ ಹೆಚ್ಚಿನ ಕಾಲಾವಕಾಶ ಕೇಳಿದ್ದರು. ಅದರಂತೆ ಆಗಸ್ಟ್ 29, ಸೋಮವಾರ ರಣವೀರ್ ಸಿಂಗ್ ಚೆಂಬೂರ್‌ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ಸುಮಾರು 2 ಗಂಟೆಗಳ ಕಾಲ ಪೊಲೀಸರು ರಣವೀರ್‌ ಸಿಂಗ್‌ ವಿಚಾರಣೆ ನಡೆಸಿದರು. ಈ ಸಮಯದಲ್ಲಿ ರಣವೀರ್‌ ಸಿಂಗ್‌ಗೆ ಪೊಲೀಸರಿಂದ ನಾನಾ ಪ್ರಶ್ನೆಗಳು ಎದುರಾದವು. ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿ ನಟನನ್ನು ಅಲ್ಲಿಂದ ಕಳಿಸಲಾಗಿದೆ. 'ಇಂಗ್ಲೀಷ್‌ ಮ್ಯಾಗಜಿನ್‌ಗಾಗಿ ಮಾಡಿದ್ದ ಫೋಟೋಶೂಟ್‌ ಇಷ್ಟು ಸಮಸ್ಯೆ ತಂದೊಡ್ಡಬಹುದು ಎಂದು ನಾನು ಊಹಿಸಿರಲಿಲ್ಲ' ಎಂದು ರಣವೀರ್‌, ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

ಬೆತ್ತಲಾಗಲು ನನಗೆ ಅಂಜಿಕೆ ಇಲ್ಲ ಎಂದಿದ್ದ ರಣವೀರ್‌

ರಣವೀರ್‌ ಫೋಟೋಗಳು ವೈರಲ್‌ ಆಗುತ್ತಿದ್ದಂತೆ "ದೈಹಿಕವಾಗಿ ಬೆತ್ತಲಾಗುವುದು ನನಗೆ ತುಂಬ ಸರಳ. ಕೆಲವು ಪ್ರದರ್ಶನಗಳಲ್ಲಿ ನಾನು ಬೆತ್ತಲಾಗಿಯೇ ಇರುತ್ತೇನೆ. ನನ್ನೊಳಗಿನ ಆತ್ಮವೂ ಬೆತ್ತಲೆ. ಅಷ್ಟೇ ಅಲ್ಲ ನಾನು ಸಾವಿರ ಸಾವಿರ ಜನರ ಮುಂದೆ ಬೆತ್ತಲೆಯಾಗಿ ನಿಲ್ಲಬಲ್ಲೆ. ನನಗೆ ಅದು ಮುಜುಗರ ತರುವುದಿಲ್ಲ. ಎದುರಿಗಿದ್ದವರಿಗೆ ಮುಜುಗರವಾಗಬಹುದಷ್ಟೇ" ಎಂದು ಹೇಳಿಕೊಂಡಿದ್ದರು.

ಬಟ್ಟೆ ದಾನ ಅಭಿಯಾನ ಮಾಡಿದ್ದ ಎನ್‌ಜಿಒ

ರಣವೀರ್‌ ಬೆತ್ತಲೆ ಫೋಟೋಗೆ ಖಂಡನೆ ವ್ಯಕ್ತಪಡಿಸಿದ್ದ ಮಧ್ಯಪ್ರದೇಶದ 'ನೇಕ್ಕಿ ಕೀ ದೀವಾರ್‌' ಹೆಸರಿನ ಎನ್‌ಜಿಒ ಸಂಸ್ಥೆಯೊಂದು ದೊಡ್ಡದಾದ ಬಾಕ್ಸ್‌ವೊಂದಕ್ಕೆ ರಣವೀರ್‌ ಅವರ ಬೆತ್ತಲೆ ಫೋಟೋ ಅಂಟಿಸಿ, "ದೇಶದಿಂದ ಮಾನಸಿಕ ಕಸವನ್ನೂ ಕಿತ್ತೊಗೆಯಲು ಇಂದೋರ್‌ ನಿರ್ಧರಿಸಿದೆ" ಎಂಬ ಘೋಷ ವಾಕ್ಯ ಬರೆದುಕೊಂಡು, ಬಟ್ಟೆಗಳ ದೇಣಿಗೆಯ ಅಭಿಯಾನ ಆರಂಭಿಸಿತ್ತು.

ದೂರು ದಾಖಲಿಸಿದ್ದ ಎನ್‌ಜಿಒ ಸಂಸ್ಥೆ

ನಗ್ನ ಪೋಸ್‌ ನೀಡಿ ಚರ್ಚೆಗೆ ಕಾರಣವಾಗಿದ್ದ ರಣವೀರ್‌ ಸಿಂಗ್‌ ವಿರುದ್ಧ ಮುಂಬೈನ ಎನ್‌ಜಿಒ ಸಂಸ್ಥೆಯೊಂದರ ಕಾರ್ಯಕರ್ತರೊಬ್ಬರು, ಚೆಂಬೂರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. "ಬಾಲಿವುಡ್‌ ನಟನ ಬೆತ್ತಲೆ ಭಂಗಿಯಿಂದ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಈ ಕೂಡಲೇ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು" ಎಂದು ಆರೋಪಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ