ಕನ್ನಡ ಸುದ್ದಿ  /  ಕರ್ನಾಟಕ  /  Earthquake In Karnataka: ಹಾಸನ ಜಿಲ್ಲೆಯಲ್ಲಿ ಭೂಕಂಪನದ ಅನುಭವ, ಆತಂಕಿತರಾದ ಜನ

Earthquake In Karnataka: ಹಾಸನ ಜಿಲ್ಲೆಯಲ್ಲಿ ಭೂಕಂಪನದ ಅನುಭವ, ಆತಂಕಿತರಾದ ಜನ

HT Kannada Desk HT Kannada

Jun 23, 2022 10:45 AM IST

ಭೂಕಂಪಕ್ಕೆ ಬಿರುಕುಬಿಟ್ಟ ಗೋಡೆ (ಸಾಂಕೇತಿಕ ಚಿತ್ರ)

    • ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನರಿಗೆ ಭೂಕಂಪಿಸಿದ ಅನುಭವವಾಗಿದೆ. ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ಇತ್ತು ಎಂದು ಮೂಲಗಳು ತಿಳಿಸಿವೆ.  ಅಫ್ಘಾನಿಸ್ತಾನ, ಪಾಕಿಸ್ತಾನದ ಭಾಗದಲ್ಲಿ ಭೂಕಂಪ ಸೃಷ್ಟಿಸಿದ ತಲ್ಲಣದ ದೃಶ್ಯಗಳು ಕಣ್ಣ ಮುಂದೆ ಇರುವಾಗಲೇ ಇದು ಸಂಭವಿಸಿರುವ ಕಾರಣ ಜನ ಆತಂಕಕ್ಕೆ ಒಳಗಾಗಿದ್ದಾರೆ. 
ಭೂಕಂಪಕ್ಕೆ ಬಿರುಕುಬಿಟ್ಟ ಗೋಡೆ (ಸಾಂಕೇತಿಕ ಚಿತ್ರ)
ಭೂಕಂಪಕ್ಕೆ ಬಿರುಕುಬಿಟ್ಟ ಗೋಡೆ (ಸಾಂಕೇತಿಕ ಚಿತ್ರ) (AFP)

ಬೆಂಗಳೂರು: ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಕರ್ನಾಟಕದ ನೆರೆಯ ಕೆಲವು ಪ್ರದೇಶಗಳಲ್ಲಿ ಗುರುವಾರ ಮುಂಜಾನೆ 4.37ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂಬುದನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 15; ಬಾಗಲಕೋಟೆ, ಬೀದರ್ ಸೇರಿ 6 ಜಿಲ್ಲೆ ಬಿಟ್ಟು ಉಳಿದ ಜಿಲ್ಲೆಗಳ ಕೆಲವೆಡೆ ಮಳೆ ನಿರೀಕ್ಷೆ, ಉಳಿದಂತೆ ಒಣಹವೆ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

ರಿಕ್ಟರ್ ಮಾಪಕದಲ್ಲಿ 3.4 ಅಳತೆಯ ಭೂಕಂಪನ ದಾಖಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಗರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಗನಹಳ್ಳಿ ಗ್ರಾಮದಲ್ಲಿ ಈ ಕಂಪನದ ಕೇಂದ್ರಬಿಂದು ಇತ್ತು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.

ಭೂಕಂಪನದ ತೀವ್ರತೆಯ ನಕ್ಷೆಯ ಪ್ರಕಾರ, ಭೂಕಂಪನದ ತೀವ್ರತೆಯು ಸಾಧಾರಣವಾಗಿದೆ ಮತ್ತು ಭೂಕಂಪನವು ಭೂಕಂಪನವು ಗರಿಷ್ಠ 40-50 ಕಿ.ಮೀ. ದೂರದವರೆಗೆ ಸಂಭವಿಸಿರಬಹುದು. ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಹಲವು ಗ್ರಾಮಗಳಲ್ಲೂ ಭೂಕಂಪನದ ಅನುಭವವಾಗಿದೆ. ಕಂಪನದ ತೀವ್ರತೆಗೆ ಜನರು ಮನೆಯಿಂದ ಹೊರಗೆ ಓಡಿ ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ, ಆದರೂ ಸ್ಥಳೀಯವಾಗಿ ಸ್ವಲ್ಪ ಕಂಪನ ಉಂಟಾಬಹುದು. ಭೂಕಂಪನ ವಲಯ-II ರಲ್ಲಿ ಕೇಂದ್ರಬಿಂದು ಬೀಳುವುದರಿಂದ, ಭೂಕಂಪ ಸಂಭವಿಸುವ ಸಾಧ್ಯತೆಗಳು ತುಂಬಾ ಕಡಿಮೆ ಮತ್ತು ಹಾನಿಯ ಸಾಧ್ಯತೆಯೂ ಕಡಿಮೆ.

ಟೆಕ್ಟೋನಿಕ್ ನಕ್ಷೆಯ ಪ್ರಕಾರ, ಈ ಪ್ರದೇಶವು ಯಾವುದೇ ರಚನಾತ್ಮಕ ಸ್ಥಗಿತಗಳಿಂದ ಅನೂರ್ಜಿತವಾಗಿರುವುದರಿಂದ, ಗಮನಿಸಿದ ತೀವ್ರತೆಯು ಮಧ್ಯಮವಾಗಿದೆ ಮತ್ತು ವಿನಾಶಕಾರಿಯಲ್ಲ ಎಂದು ಸಮುದಾಯವು ಭಯಪಡುವ ಅಗತ್ಯವಿಲ್ಲ ಎಂದು ಆಯುಕ್ತ ಮನೋಜ್ ರಾಜನ್ ವಿವರಿಸಿದರು.

ಆತಂಕಕ್ಕೆ ಒಳಗಾದ ಜನ

ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣ ಮತ್ತು ಸುತ್ತಮುತ್ತಲಿನ 17 ಗ್ರಾಮಗಳಲ್ಲಿ ಆರಂಭದಲ್ಲಿ ಭೂಕಂಪನದ ಅನುಭವ ಆಗಿದೆ. ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮತ್ತೆ ಮನೆಗೆ ಹೋಗದೆ ಹೊರಗೇ ಇದ್ದರು. ಬೆಳಗ್ಗೆ ಪೊಲೀಸರು ಗ್ರಾಮಗಳಿಗೆ ತೆರಳಿ ಮನೆ ಒಳಗೆ ಹೋಗಬಹುದು. ಇನ್ನೇನು ಅಪಾಯ ಇಲ್ಲ ಎಂಬುದನ್ನು ಮನವರಿಕೆ ಮಾಡಿದರು ಎಂದು ಸ್ಥಳೀಯರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ನೆರೆಯ ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕಂಪಸಿದ ಅನುಭವ ಅನೇಕರಿಗೆ ಆಗಿದೆ. ಕಿಕ್ಕೇರಿ ಹೋಬಳಿಯ ಮಾದಾಪುರ, ಗೊಂಡಿಹಳ್ಳಿ, ಚಿನ್ನೇನಹಳ್ಳಿ ಗ್ರಾಮಗಳಲ್ಲಿ ಭೂಕಂಪಿಸಿದ ಅನುಭವ ಗ್ರಾಮಸ್ಥರಿಗೆ ಆಗಿದೆ. ಈ ಪ್ರದೇಶಗಳಲ್ಲಿ ಮುಂಜಾನೆ 4.30ರಿಂದ 4.45ರ ಅವಧಿಯಲ್ಲಿ ಭೂಕಂಪಿಸಿದೆ. ಸದ್ದು ಕೂಡ ಕೇಳಿಸಿದೆ ಎಂಬುದನ್ನು ಜಿಲ್ಲಾಡಳಿತದ ಮೂಲಗಳು ಖಾತರಿಪಡಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ