ಕನ್ನಡ ಸುದ್ದಿ  /  ಕರ್ನಾಟಕ  /  Engineer’s Day 2022: ಪ್ರಧಾನಿ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಏನು ಟ್ವೀಟ್‌ ಮಾಡಿದ್ದಾರೆ?

Engineer’s Day 2022: ಪ್ರಧಾನಿ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಏನು ಟ್ವೀಟ್‌ ಮಾಡಿದ್ದಾರೆ?

HT Kannada Desk HT Kannada

Sep 15, 2022 09:42 AM IST

ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ

    • Sir M. Visvesvaraya Birth Anniversary: ಇಂದು ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯನವರ 161ನೇ ಜಯಂತಿ. ಈ ದಿನವನ್ನು ದೇಶದ ಇಂಜಿನಿಯರ್‌ ದಿನ ಎಂದು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏನ್‌ ಟ್ವೀಟ್‌ ಮಾಡಿದ್ದಾರೆ? ಇಲ್ಲಿದೆ ವಿವರ. 
ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ
ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯ (HT)

ಇಂದು ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯನವರ 161ನೇ ಜಯಂತಿ. ಇಂದೇ ಅಭಿಯಂತರರ ದಿನ ಅಥವಾ ಎಂಜಿನಿಯರ್ಸ್‌ ಡೇ. ಸರ್​ ಎಂ ವಿ ಅವರು ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಲು ಪ್ರತಿ ವರ್ಷ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ‘ಎಂಜಿನಿಯರ್ಸ್​ ಡೇ’ ಎಂದು ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರೆ ಗಣ್ಯರು ಎಂಜಿನಿಯರ್ಸ್‌ ಡೇ ನಿಮಿತ್ತ ದೇಶವಾಸಿಗಳಿಗೆ ವಿಶೇಷವಾಗಿ ಇಂಜಿನಿಯರ್ಸ್‌ಗೆ ಮತ್ತು ಉದಯೋನ್ಮುಖ ಇಂಜಿನಿಯರ್‌ಗಳಿಗೆ ಶುಭ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಯಾವ ರೀತಿ ಶುಭ ಕೋರಿದ್ದಾರೆ? ಇಲ್ಲಿವೆ ನೋಡಿ ಅವರ ಟ್ವೀಟ್‌ಗಳು

ಮೊದಲ ಟ್ವೀಟ್‌ನಲ್ಲಿ ಅವರು, ಇಂಜಿನಿಯರ್ಸ್‌ ಡೇ ನಿಮಿತ್ತ ಎಲ್ಲ ಇಂಜಿನಿಯರ್‌ಗಳಿಗೂ ಶುಭಹಾರೈಕೆಗಳು. ನಮ್ಮ ದೇಶದಲ್ಲಿ ಕೌಶಲಯುತ ಮತ್ತು ಪ್ರತಿಭಾವತಂ ಇಂಜಿನಿಯರ್‌ಗಳಿರುವುದು ಬಹುದೊಡ್ಡ ವರದಾನವೇ ಸರಿ. ಇವರೆಲ್ಲರೂ ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ನಮ್ಮ ಸರ್ಕಾರವೂ ಇನ್ನಷ್ಟು ಇಂಜಿನಿಯರಿಂಗ್‌ ಕಾಲೇಜು ನಿರ್ಮಿಸುವಲ್ಲಿ ಮತ್ತು ಇಂಜಿನಿಯರಿಂಗ್‌ ಶಿಕ್ಷಣಕ್ಕೆ ಮೂಲಸೌಕರ್ಯ ಒದಗಿಸುವುದಕ್ಕೆ ಬದ್ಧತೆಯನ್ನು ಹೊಂದಿದೆ ಎಂದು ಹೇಳಿದ್ಧಾರೆ.

ಇದಾಗಿ ಸ್ವಲ್ಪ ಹೊತ್ತಿನ ಬಳಿಕ ಮತ್ತೊಂದು ಟ್ವೀಟ್‌ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದು, ಅದರಲ್ಲಿ ಮನ್‌ಕೀ ಬಾತ್‌ನ ಆಡಿಯೋ ಕ್ಲಿಪ್‌ ಶೇರ್‌ ಮಾಡಿದ್ದಾರೆ. ಅದು 5.24 ನಿಮಿಷ ಅವಧಿಯದ್ದಾಗಿದೆ. ಈ ಇಂಜಿನಿಯರಿಂಗ್‌ ಡೇ ಸಂದರ್ಭದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯನವರ ಮಹತ್ತಾದ ಕೊಡುಗೆಗಳನ್ನು ನಾವು ಸ್ಮರಿಸುತ್ತಿದ್ದೇವೆ. ಅವರು ತಲೆಮಾರುಗಳಿಂದ ಭವಿಷ್ಯದ ಇಂಜಿನಿಯರ್‌ಗಳಿಗೆ ಒಂದು ಪ್ರೇರಣೆಯಾಗಿ, ಆದರ್ಶವಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆ ಮನ್‌ಕೀ ಬಾತ್‌ನಲ್ಲಿ ನಾನಾಡಿದ ಮಾತುಗಳ ತುಣುಕನ್ನುಇದರೊಂದಿಗೆ ಶೇರ್‌ ಮಾಡುತ್ತಿದ್ದೇನೆ ಆಲಿಸಿ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಇಂಜಿನಿಯರ್ಸ್‌ ಡೇಗೆ ಟ್ವೀಟ್‌ ಮಾಡಿ ಶುಭ ಕೋರಿದ್ದಾರೆ. - ʻನಾಡಿನ ಸರ್ವತೋಮುಖ ಪ್ರಗತಿಗೆ, ತಮ್ಮ ಬುದ್ಧಿಶಕ್ತಿ, ಕೌಶಲ್ಯ, ಸಾಮರ್ಥ್ಯಗಳೆಲ್ಲವನ್ನೂ ಧಾರೆ ಎರೆಯುವ ಸಮಸ್ತ ಇಂಜಿನಿಯರ್ ಗಳಿಗೆ, ಇಂಜಿನಿಯರ್ಸ್ ದಿನದ ಹಾರ್ದಿಕ ಶುಭಾಶಯಗಳುʼ ಎಂಬ ಚುಟುಕು ಸಂದೇಶ ಅವರ ಟ್ವೀಟ್‌ನಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ