ಕನ್ನಡ ಸುದ್ದಿ  /  ಕರ್ನಾಟಕ  /  Rahul Gandhi: ಸಾಲಮನ್ನಾ, 1ಲಕ್ಷ ರೂ. ನೆರವು, ಪಕ್ಕಾ ಉದ್ಯೋಗ: ರೈತರು, ಮಹಿಳೆಯರು, ಯುವಕರಿಗೆ ರಾಹುಲ್‌ ಗಾಂಧಿ ಹಲವು ಯೋಜನೆ ಘೋಷಣೆ

Rahul Gandhi: ಸಾಲಮನ್ನಾ, 1ಲಕ್ಷ ರೂ. ನೆರವು, ಪಕ್ಕಾ ಉದ್ಯೋಗ: ರೈತರು, ಮಹಿಳೆಯರು, ಯುವಕರಿಗೆ ರಾಹುಲ್‌ ಗಾಂಧಿ ಹಲವು ಯೋಜನೆ ಘೋಷಣೆ

Umesha Bhatta P H HT Kannada

Apr 17, 2024 03:26 PM IST

ಮಂಡ್ಯದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ

    • ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು.
ಮಂಡ್ಯದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ
ಮಂಡ್ಯದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ

ಮಂಡ್ಯ: ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಭಾರತದ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆಯೇ ವರ್ಷಕ್ಕೆ 1ಲಕ್ಷ ರೂ ನೆರವು, ನಿರುದ್ಯೋಗಿಗಳಿಗೆ ಪಕ್ಕಾ ಉದ್ಯೋಗ ಕಾರ್ಯಕ್ರಮದಡಿ ಒಂದು ವರ್ಷ ತರಬೇತಿ ಆಧರಿತ ಉದ್ಯೋನ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಬಡವರು, ಯುವಕರು, ಮಹಿಳೆಯರು, ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲುವ ಬದ್ದತೆ ತೋರಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru News: ಬೆಂಗಳೂರಿನ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್; ಪರಿಶೀಲನೆ ಬಳಿಕ ಹುಸಿ ಬಾಂಬ್ ಎಂದ ಪೊಲೀಸರು

ಕರ್ನಾಟಕ ಹವಾಮಾನ ಮೇ 13: ಬೆಂಗಳೂರಿನಲ್ಲಿ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆ; ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಇಂದು ವರುಣನ ಕೃಪೆ ಸಾಧ್ಯತೆ

Chikkamagaluru News: ಚಿಕ್ಕಮಗಳೂರಿನಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಶಾಕ್‌ ಗೆ ಬಲಿ

Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮಂಡ್ಯದಲ್ಲಿ ಆಯೋಜಿಸಲಾಗಿದ್ದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಮುಖ ಯೋಜನೆಗಳನ್ನು ಘೋಷಿಸಿದರು.

ರಾಹುಲ್‌ ಗಾಂಧಿ ಭಾಷಣದ ಪ್ರಮುಖಾಂಶಗಳು

  • ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ. ತಿಂಗಳೊಳಗೆ ಬಾಕಿ ಇರುವ ರೈತ ಬೆಳೆ ವಿಮೆಯನ್ನು ಪಾವತಿ ಮಾಡುತ್ತೇವೆ
  • ಇಂಡಿಯಾ ಒಕ್ಕೂಟದಿಂದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷರೂ ವರೆಗೂ ನೆರವು ನೀಡುವ ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿಈಗಾಗಲೇ ನೀಡುತ್ತಿರುವ ಗೃಹಲಕ್ಷ್ಮಿಯ ಯೋಜನೆಯ 24 ಸಾವಿರ ರೂ. ಕೂಡ ಮಹಿಳೆಯರಿಗೆ ಸಿಗಲಿದೆ. ಅಂದರೆ ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ 1.24ಲಕ್ಷ ರೂ. ಆರ್ಥಿಕ ನೆರವು ಕರ್ನಾಟಕದಲ್ಲಿ ಸಿಗಲಿದೆ. ಪ್ರತಿ ತಿಂಗಳು10500 ರೂ, ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುತ್ತೇವೆ. ಈ ಮೂಲಕ ಕೋಟ್ಯಂತರ ಕುಟುಂಬಗಳ ಬದಲಾವಣೆಗೆ ಇದು ನಾಂದಿ ಹಾಡಲಿದೆ.
  • ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಯುವಕರು ಶಿಕ್ಷಣ ಪಡದರೂ ಉದ್ಯೋಗ ಸಿಗುತ್ತಿಲ್ಲ. ಈ ಕಾರಣದಿಂದ ಶಿಕ್ಷಣ ಮುಗಿಸಿದ ಯುವಕರಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಪಕ್ಕಾ ಉದ್ಯೋಗವನ್ನು ಕೇಂದ್ರದಲ್ಲಿ ಇಂಡಿಯಾ ಸರ್ಕಾರ ಆರಂಭಿಸಲಿದೆ. ಈ ಮೂಲಕ ಒಂದು ವರ್ಷ ಅವರಿಗೆ ಸಂಪೂರ್ಣ ತರಬೇತಿ ಆಧರಿತ ಉದ್ಯೋಗ ಸಿಗಲಿದೆ. ಆ ಅವಧಿಯಲ್ಲಿ ಅವರು ಚೆನ್ನಾಗಿ ಕೆಲಸ ಮಾಡಿದರೆ ಉದ್ಯೋಗ ಪಕ್ಕಾ ಆಗಲಿದೆ. ಇದು ದೇಶಾದ್ಯಂತ ಜಾರಿಯಾಗಲಿದ್ದು, ನಿರುದ್ಯೋಗಿಗಳಲ್ಲಿ ವಿಶ್ವಾಸ ತುಂಬಲಿದೆ. ಯುವಕರು ಕನಸು ನನಸಿನಲ್ಲೂ ಯೋಜನೆ ಇದಾಗಲಿದೆ. ಯಾವುದೇ ದೇಶದಲ್ಲೂ ಜಾರಿಗೊಳಿಸದ ಯೋಜನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಡಲಿದೆ. ಉದ್ಯೋಗ ಪಡೆದವರಿಗೆ ಮೊದಲು ಗೌರವ ಸಿಗುವ ಕೆಲಸ ಆಗಬೇಕು. ಅದನ್ನು ನಮ್ಮ ಸರ್ಕಾರ ಮಾಡಲು ಬದ್ದವಾಗಿದೆ.
  • ಕರ್ನಾಟಕದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಐದು ಗ್ಯಾರಂಟಿಗಳನ್ನು ಜನರಿಗೆ ಘೋಷಿಸಿತು. ಜನರು ಕಾಂಗ್ರೆಸ್‌ ಅನ್ನು ಕೈ ಹಿಡಿದು ಅಧಿಕಾರಕ್ಕೆ ತಂದರು. ಅದರಂತೆಯೇ ಗೃಹಲಕ್ಷ್ಮಿ, ಗೃಹಜ್ಯೋತಿ. ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆ ಜಾರಿಯಾದವು. ಒಂದೂವರೆ ಕೋಟಿ ಕುಟುಂಬಗಳು ಉಚಿತ ಉದ್ಯೋಗ ಪಡೆಯುತ್ತಿವೆ. ಒಂದು ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಜಾರಿಯಾಗಿದೆ. ಗೃಹಲಕ್ಷ್ಮಿ ಅಡಿ ನೆರವು ಸಿಗುತ್ತಿದೆ. ಉಚಿತವಾಗಿ ಬಸ್‌ ನಲ್ಲಿ ಪ್ರಯಾಣಿಸಿ ಅವರ ಬದುಕಿಗೆ ನೆರವಾಗುತ್ತಿದೆ. ಒಂದೂವರೆ ಲಕ್ಷ ಪದವೀಧರರಿಗೆ ತಲಾ ಮೂರು ಸಾವಿರ ರೂ.ಯುವನಿಧಿ ಸಿಗುತ್ತಿದೆ. ಇದೇ ಮಾದರಿಯಲ್ಲಿಯೇ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಕಷ್ಟದಲ್ಲಿರುವ ಬಡ ಮಹಿಳೆಯರು, ರೈತರು ಹಾಗೂ ನಿರುದ್ಯೋಗಿ ಯುವಕರ ಕೈ ಹಿಡಿಯಲಿದೆ.
  • ಒಂದು ವರ್ಷದಿಂದ ನಾನು ಭಾರತ್‌ ಜೋಡೊ ಯಾತ್ರೆ ಕೈಗೊಂಡು ನಾಲ್ಕು ಸಾವಿರ ಕಿ.ಮಿ. ಪ್ರಯಾಣ ಮಾಡಿದೆ. ಅವರೊಂದಿಗೆ ನಾನು ಮಾತನಾಡಿ ಅವರ ಕಷ್ಟಗಳನ್ನು ಅರಿತಿದ್ದೇನೆ. ಹೋದಲ್ಲೆಲ್ಲಾ ರೈತರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಮುಖ್ಯವಾಗಿ ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ ಎನ್ನುವುದೇ ರೈತರ ಅಭಿಪ್ರಾಯವಾಗಿತ್ತು. ಈ ಕಾರಣದಿಂದಲೇ ರೈತರ ಸಾಲ ಮನ್ನಾ ಹಾಗೂ ಬೆಂಬಲ ಬೆಲೆ ವಿಚಾರದಲ್ಲಿ ನಮ್ಮ ಸರ್ಕಾರ ಬಂದರೆ ಗಟ್ಟಿಯಾಗಿ ನಿಲ್ಲಲಿದೆ.
  • ಭಾರತದಲ್ಲಿ ಲೋಕಸಭೆ ಚುನಾವಣೆ ವಿಚಾರಗಳ ಮೇಲೆ ನಡೆಯುತ್ತಿದೆ. ಬಿಜೆಪಿ ಹಾಗೂ ಮಿತ್ರ ಪಕ್ಷದವರು ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡಿ ಅಧಿಕಾರ ನಡೆಸಲು ಹೊರಟಿದ್ದಾರೆ. ನಾವು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ದೇಶದ ಜನರ ಪರವಾಗಿ ಇರುವ ನೀತಿಗಳೊಂದಿಗೆ ಚುನಾವಣೆಗೆ ಹೊರಟಿದ್ದೇವೆ. ಜನರಿಗೋಸ್ಕರ ಹೊರಟಿರುವ ನಮ್ಮ ಬೆಂಬಲಕ್ಕೆ ನೀವೆಲ್ಲರೂ ನಿಲ್ಲಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ