ಕನ್ನಡ ಸುದ್ದಿ  /  ಕರ್ನಾಟಕ  /  Mysore Jamboo Savari: ಇಂದು ಜಂಬೂ ಸವಾರಿ ಎಷ್ಟು ಹೊತ್ತಿಗೆ? ಏನೇನು ತಯಾರಿ, ವರ್ಚುಯಲ್‌ ವೀಕ್ಷಣೆ ಹೇಗೆ?

Mysore Jamboo Savari: ಇಂದು ಜಂಬೂ ಸವಾರಿ ಎಷ್ಟು ಹೊತ್ತಿಗೆ? ಏನೇನು ತಯಾರಿ, ವರ್ಚುಯಲ್‌ ವೀಕ್ಷಣೆ ಹೇಗೆ?

Umesha Bhatta P H HT Kannada

Oct 24, 2023 06:37 AM IST

ಮೈಸೂರಿನಲ್ಲಿ ದಸರಾ ಆನೆಗಳು (ಸಂಗ್ರಹ ಚಿತ್ರ)

    • Mysore Dasara Jamboo Savari:ಈ ಬಾರಿಯ ಮೈಸೂರು ದಸರಾ (Mysore Dasara) ಜಂಬೂ ಸವಾರಿಗೆ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಮಂಗಳವಾರ (ಅ 24) ಮೈಸೂರು ಅರಮನೆ ಅಂಗಳದಲ್ಲಿ (Mysore Palace) ಜಂಬೂ ಸವಾರಿ ಹೇಗಿರಲಿದೆ. ಸಂಜೆಯ ಪಂಜಿನ ಕವಾಯತಿನ ವಿವರ ಇಲ್ಲಿದೆ.
ಮೈಸೂರಿನಲ್ಲಿ ದಸರಾ ಆನೆಗಳು (ಸಂಗ್ರಹ ಚಿತ್ರ)
ಮೈಸೂರಿನಲ್ಲಿ ದಸರಾ ಆನೆಗಳು (ಸಂಗ್ರಹ ಚಿತ್ರ) (PTI)

ಮೈಸೂರು: ವಿಶ್ವಪ್ರಸಿದ್ದ ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ದತೆಗಳು ಭರದಿಂದ ಸಾಗಿವೆ. ಮೈಸೂರು ಅರಮನೆ ಅಂಗಳದಲ್ಲಿ ಜಂಬೂ ಸವಾರಿಗೆ ಅಂತಿಮ ಹಂತದ ಸಿದ್ದತೆಗಳು ಸೋಮವಾರ ಆರಂಭಗೊಂಡವು. ಮಧ್ಯಾಹ್ನದವರೆಗೂ ಅರಮನೆಯ ಆಯುಧಪೂಜೆ ಸೇರಿ ನಾನಾ ಧಾರ್ಮಿಕ ಚಟುವಟಿಕೆಗಳು ಇದ್ದುದರಿಂದ ಇದಾದ ಬಳಿಕ ಸಿದ್ದತೆಗಳು ನಡೆದವು. ರಾತ್ರಿ ಹೊತ್ತಿಗೆ ಬಹುತೇಕ ಪೂರ್ಣಗೊಳ್ಳಲಿದ್ದು. ಮಂಗಳವಾರ ಬೆಳಿಗ್ಗೆ ಜಂಬೂ ಸವಾರಿಗೆ ಅರಮನೆ ಅಂಗಳ ಅಣಿಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ಉದ್ಯಮಿ ಪುತ್ರಿ ಪ್ರೇಮಕಥನ; ಮನೆಯಲ್ಲಿದ್ದ1 ಕೋಟಿ ರೂ. ಜತೆ ಪರಾರಿ

Bangalore rains: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಇನ್ನೂ ಎರಡು ದಿನ ಮಳೆ ಮುನ್ಸೂಚನೆ

Hassan Scandal: ಹಾಸನ ಸಂತ್ರಸ್ತೆ ಅಪಹರಣ ಪ್ರಕರಣ, ಮಾಜಿ ಸಚಿವ ರೇವಣ್ಣಗೆ ಜಾಮೀನು ಮಂಜೂರು, ಬಿಡುಗಡೆ ಯಾವಾಗ?

Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಸಿಎಂ ಪುಷ್ಪಾರ್ಚನೆ

ಮೈಸೂರಿನ ಜಂಬೂಸವಾರಿಗೂ ಮುನ್ನ ನಡೆಯುವ ನಂದಿಧ್ವಜ ಪೂಜೆ ಅರಮನೆ ಬಲರಾಮ ದ್ವಾರದಲ್ಲಿ ನಡೆಯಲಿದೆ. ಆಂಜನೇಯದೇವಸ್ಥಾನ ಎದುರಿನಲ್ಲಿ ಮೈಸೂರಿನ ಗೌರಿಶಂಕರನಗರದ ಮಹದೇವಪ್ಪ ಹಾಗೂ ತಂಡದವರು ಸಿದ್ದಪಡಿಸಿಕೊಂಡು ಬರುವ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ1.46 ರಿಂದ 2.08 ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಅಲ್ಲಿ ದಸರಾ ಸಂದೇಶವನ್ನು ಸಿಎಂ ನೀಡುವರು.

ವಿಜಯದಶಮಿ ಪೂಜೆ

ಬಳಿಕ ಅರಮನೆ ಆವರಣದಲ್ಲಿ ಸಂಜೆ 4.40 ರಿಂದ 5.00ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಹೊತ್ತು ತರುವ ಗಜ ಪಡೆಯ ವಿಜಯದಶಮಿ ಮೆರವಣಿಗೆಗೆ ಪೂಜೆ ಸಲ್ಲಿಸುವರು. ಈ ವೇಳೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ವಿಜಯದಶಮಿ ಮೆರವಣಿಗೆಗೆ ಪುಷ್ಪಾರ್ಚನೆ ಸಲ್ಲಿಸುವರು. ಶಾಸಕ ಟಿ.ಎಸ್‌.ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಶಿವರಾಜ ತಂಗಡಗಿ, ಮೈಸೂರು ಮೇಯರ್‌ ಶಿವಕುಮಾರ್‌ ಹಾಜರಿರುವವರು. ಈ ವೇಳೆ ಮೇಯರ್‌ ಶಿವಕುಮಾರ್‌ ಅವರು ಕುದುರೆ ಸವಾರಿ ಮಾಡಿಕೊಂಡು ಹೋಗುವರು.

ಸಂಜೆ ಪಂಜಿನ ಕವಾಯತು

ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು( ಟಾರ್ಚ್‌ ಲೈಟ್‌ ಪೆರೇಡ್‌) ಸಂಜೆ 7.30ಕ್ಕೆ ನಡೆಯಲಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಕುಮಾರ್‌, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪ್ರಲ್ಹಾದ ಜೋಶಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ. ಭಗವಂತಖೂಬಾ ಸಹಿತ ಹಲವರು ಪಾಲ್ಗೊಳ್ಳುವರು.

ಸ್ಥಬ್ಧಚಿತ್ರ ಹಾಗೂ ಕಲಾತಂಡ

ಜಂಬೂಸವಾರಿ ಮಧ್ಯಾಹ್ನ 2 ಕ್ಕೆ ಅರಮನೆ ಆವರಣದಲ್ಲಿ ಶುರುವಾಗಲಿದೆ. ಆನೆಗಳ ತಂಡದೊಂದಿಗೆ ಸುಮಾರು 100ಕ್ಕೂ ಅಧಿಕ ಕಲಾ ತಂಡಗಳು, 49 ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ. ಆಯಾ ಜಿಲ್ಲೆಯ ಸ್ಥಬ್ದಚಿತ್ರದ ಜತೆಗೆ ನಾಡಿನ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದೊಂದಿಗೆ ಹೆಜ್ಜೆ ಹಾಕಲಿವೆ. ಸುಮಾರು 4.5ಕಿ.ಮೀ ಉದ್ದದ ಮಾರ್ಗವನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ತಂಡಗಳು ಕ್ರಮಿಸಲಿವೆ.

ಆಸನಗಳ ವ್ಯವಸ್ಥೆ

ಅರಮನೆ ಆವರಣದಲ್ಲಿ ಗಣ್ಯರು, ಅತಿಗಣ್ಯರು, ಗೋಲ್ಡ್‌ ಕಾರ್ಡ್‌ ಹೊಂದಿದವರು ಹಾಗೂ ವಿವಿಧ ಪಾಸ್‌ ಪಡೆದವರಿಗೆ 25 ಸಾವಿರಕ್ಕೂ ಹೆಚ್ಚು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಂಬೂ ಸವಾರಿ ಇಕ್ಕೆಲಗಳಲ್ಲೂ ಆಸನದ ವ್ಯವಸ್ಥೆಯಿದೆ. ಇದಲ್ಲದೇ ಚಾಮರಾಜವೃತ್ತದಿಂದ ಕೆಆರ್‌ ವೃತ್ತ ಹಾಗೂ ಬನ್ನಿಮಂಟಪದ ಮಾರ್ಗದವರೆಗೂ ಎರಡೂ ಕಡೆಗಳಲ್ಲಿ ಜನ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವರ್ಚುಯಲ್‌ ವೀಕ್ಷಣೆ

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನೂ ನೀವು ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು. ಮೈಸೂರು ದಸರಾ ಮಹೋತ್ಸವ 2023ರ ಅಕ್ಟೋಬರ್‌ 24ರಂದು ಮಂಗಳವಾರ ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಇದೂ ಕೂಡ ವರ್ಚುಯಲ್‌ ರೂಪದಲ್ಲಿ ವೀಕ್ಷಿಸಲು ಸಿಗಲಿದೆ.

ಇದಾದ ನಂತರ ಸಂಜೆ 7ರಿಂದ ಪಂಜಿತ ಕವಾಯತು ಕೂಡ ಇರಲಿದೆ. ಕರ್ನಾಟಕ ಪೊಲೀಸ್‌ ಪಡೆಯ ವಿಶೇಷ ಪ್ರದರ್ಶನ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಂದ ಗೌರವ ವಂದನೆ, ಸೇನಾ ಪಡೆಯ ಸಾಹನ ಪ್ರದರ್ಶನ, ಕೊನೆಯಲ್ಲಿ ಬಾಣ ಬಿರುಸುಗಳ ಪ್ರದರ್ಶನ ಪಂಜಿನ ಕವಾಯಿತಿನ ಆಕರ್ಷಣೆ. ಇದರ ನೇರ ಪ್ರಸಾರವೂ ಲಭ್ಯವಿರಲಿದೆ.

ಈ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಗಳನ್ನು ಬಳಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ