ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara Elephants: ಮಹಾರಾಜರ ಪ್ರೀತಿಯ ಜಯಮಾರ್ತಾಂಡದಿಂದ ಆನೆ ಹಿಮ್ಮೆಟ್ಟಿಸುವ ಅಭಿಮನ್ಯುವರೆಗೆ

Mysuru dasara elephants: ಮಹಾರಾಜರ ಪ್ರೀತಿಯ ಜಯಮಾರ್ತಾಂಡದಿಂದ ಆನೆ ಹಿಮ್ಮೆಟ್ಟಿಸುವ ಅಭಿಮನ್ಯುವರೆಗೆ

Umesha Bhatta P H HT Kannada

Oct 24, 2023 03:12 PM IST

ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸವೇ ವಿಭಿನ್ನ

    • Mysuru Dasara Elephants ಮೈಸೂರು ದಸರಾದೊಂದಿಗೆ ಬೆಸೆದಿರುವ ಆನೆಗಳು. ಅದರಲ್ಲೂ ಅಂಬಾರಿ ಹೊತ್ತ ಆನೆಗಳ ಇತಿಹಾಸ ರೋಚಕವಾಗಿದೆ. ಇಲ್ಲಿದೆ ಆ ಇತಿಹಾಸದ ಹಾದಿ..
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸವೇ ವಿಭಿನ್ನ
ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸವೇ ವಿಭಿನ್ನ

ಮೈಸೂರು ದಸರಾ ಅಂದರೆ ಅಲ್ಲಿ ಆನೆಗಳಿಗೆ ಇನ್ನಿಲ್ಲದ ಮಹತ್ವ. ಶತಮಾನದಿಂದಲೂ ಆನೆಗಳು ಜಂಬೂಸವಾರಿ ಹೊತ್ತು ಸಾಗುವ ಆ ಭಕ್ತಿ, ಭಾವ, ವೈಭವಕ್ಕೆ ಸಾಕ್ಷಿಯಾಗಿವೆ. ಈಗಲೂ ಆ ಪರಂಪರೆ ಮುಂದುವರಿದಿದೆ. ಆನೆಗಳು ಅಂಬಾರಿ ಹೊತ್ತು ವೈಭವ ಸಾಗಿದ ನೋಟ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

ಮಹಾರಾಜರ ಪ್ರೀತಿಯ ಜಯ ಮಾರ್ತಾಂಡ

ದಸರಾದಲ್ಲಿ ಹಲವು ಆನೆಗಳು ಅಂಬಾರಿ ಹೊತ್ತಿವೆ. 1860 ರ ವೇಳೆಗೆ ಅಂಬಾರಿ ಹೊರಲು ಶುರು ಮಾಡಿದ್ದು ಜಯಮಾರ್ತಾಂಡ ಆನೆ. ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಹಿರಿಮೆ ಜಯಮಾರ್ತಾಂಡ ಆನೆಗೆ. ಈಗಲೂ ಈ ಆನೆಯ ದಾಖಲೆ ಇತಿಹಾಸವಾಗಿದೆ.

ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿತ್ತು. ಒಡೆಯರ್ ಕಾಲದಲ್ಲಿ ಆರಂಭವಾದ ವಿಜಯದಶಮಿಯಿಂದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. 45 ವರ್ಷ ಇದು ಮಹಾರಾಜರು ಕೂರುತ್ತಿದ್ದ ಅಂಬಾರಿ ಹೊತ್ತು ನಡೆದಿದೆ. ಮೈಸೂರು ಮಹಾರಾಜರಿಗೆ ಪ್ರೀತಿ ಪಾತ್ರವಾಗಿದ್ದ ಈ ಆನೆ ಹೆಸರು ಶಾಶ್ವತವಾಗಿಯೂ ಉಳಿದಿದೆ. ಮೈಸೂರು ವಸ್ತು ಪ್ರದರ್ಶನ ಎದುರಿನ ಅರಮನೆ ಮಹಾದ್ವಾರಕ್ಕೆ ಜಯಮಾರ್ತಾಂಡ ಹೆಸರನ್ನೇ ಇಡಲಾಗಿದೆ. ಈ ರೀತಿ ಆನೆಯೊಂದಕ್ಕೆ ಗೌರವ ಸಿಕ್ಕಿದ್ದು ದಸರಾದ ವಿಶೇಷವೂ ಹೌದು.

ಇದಾದ ನಂತರ 1902ರಿಂದ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಗಜೇಂದ್ರ, ಬಿಳಿಗಿರಿ, ದ್ರೋಣ, ಸುಂದರ್​ರಾಜ್ ಹಾಗೂ ಐರಾವತ ಆನೆಗಳು ಅಂಬಾರಿ ಹೊತ್ತಿವೆ. 1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್ ಚಿತ್ರ ದಿ ಎಲಿಫೆಂಟ್ ಬಾಯ್ ನಲ್ಲಿ ಬಳಸಿಕೊಳ್ಳಲಾಗಿದೆ. ಆನೆಯ ಮಾವುತನ 7 ವರ್ಷದ ಮಗ ಸಾಬು ದಸ್ತಗೀರ್ ಎಂಬಾತ ಈ ಚಿತ್ರದಲ್ಲಿ ನಟಿಸಿ, ಬಳಿಕ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದು ದೊಡ್ಡ ಇತಿಹಾಸ.

ಅಂಬಾರಿ ಹೊತ್ತ ಆನೆಗಳಲ್ಲಿ ಅತ್ಯಂತ ದೈತ್ಯ ಎನ್ನುವ ಕೀರ್ತಿಗೆ ಪಾತ್ರವಾಗಿದ್ದ ಬಿಳಿಗಿರಿ, 10.5 ಅಡಿ ಎತ್ತರವಿತ್ತು. ಸುಮಾರು 7 ಸಾವಿರ ಕೆ.ಜಿ. ತೂಕವಿದ್ದ ಈ ಆನೆ ಅಂಬಾರಿಯಲ್ಲಿ ಕೂತ ರಾಜರನ್ನು ಹೊತ್ತು ಸಾಗಿದ ಕೊನೆ ಆನೆಯಾಗಿದೆ. ಬಳಿಕ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ವಿಗ್ರಹ ಇಟ್ಟು ಮೆರವಣಿಗೆ ಮಾಡುವ ಪದ್ಧತಿ ನಡೆದು ಬಂದಿದೆ. ರಾಜೇಂದ್ರ ಆನೆ ಒಂದು ವರ್ಷ ಅಂಬಾರಿ ಹೊತ್ತಿತ್ತು. ಇದೇ ಆನೆ ಗಂಧದಗುಡಿ ಚಿತ್ರದ ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನಲ್ಲಿ ಡಾ.ರಾಜ್​ಕುಮಾರ್ ಅವರನ್ನು ದಂತದ ಮೇಲೆ ಕೂರಿಸಿಕೊಂಡು ಸಾಗುವ ಚಿತ್ರಣ ನೆನಪಿನಲ್ಲಿದೆ.

ಆನಂತರದಲ್ಲಿ ಅಂಬಾರಿ ಹೊತ್ತ ಆನೆಗಳ ಸಾಲಿನಲ್ಲಿ ದ್ರೋಣನಿಗೆ ಪ್ರಮುಖ ಸ್ಥಾನ. ಭಾರೀ ಎತ್ತರದ ಆನೆ ದ್ರೋಣ. ಅದು ಸುಮಾರು 6,400 ಕೆ.ಜಿ ತೂಗುತ್ತಿತ್ತು. ದ್ರೋಣ 18 ವರ್ಷ ನಿರಂತರ ಅಂಬಾರಿ ಹೊತ್ತು ಸಾಗಿದ ಖ್ಯಾತಿ ಹೊಂದಿದೆ. ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್'ನ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದಆನೆ ದ್ರೋಣ. ಕಾಡಿನಲ್ಲಿದಾಗ1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ ದ್ರೋಣ ಸಾವನ್ನಪ್ಪಿತು.

ಅರ್ಜುನ ಮರುಪ್ರವೇಶ

ಈಗಿರುವ ಗಜಪಡೆ ತಂಡದಲ್ಲಿರುವ ನಿವೃತ್ತ ಕ್ಯಾಪ್ಟನ್‌ ಅರ್ಜುನನ ಇತಿಹಾಸ ವಿಭಿನ್ನವಾಗಿಯೇ ಇದೆ. ದ್ರೋಣನ ನಂತರ ಅರ್ಜುನ ಒಮ್ಮೆ ಅಂಬಾರಿ ಹೊತ್ತಿದ್ದ. ಮೂರು ದಶಕದ ಹಿಂದೆ ಮೈಸೂರು ದಸರಾಗೆ ಬಂದಾಗ ಆಗ ದೊಡ್ಡಕೆರೆ ಮೈದಾನದಲ್ಲಿ ವಾಸ್ತವ್ತ. ಆನೆ ನೋಡಿಕೊಳ್ಳುತ್ತಿದ್ದ ಮಾವುತನನ್ನೇ ಅರ್ಜುನ ಸಾಯಿಸಿದ್ದ. ಇದರಿಂದ ಒಂದೂವರೆ ದಶಕ ಕಾಲ ಅರ್ಜುನ ಕಾಡಿನಲ್ಲಿಯೇ ಕೊಳೆಯಬೇಕಾಯಿತು. ದಶಕದ ಹಿಂದೆ ಬಲರಾಮನ ನಿವೃತ್ತಿಯಾದಾಗ ಅರ್ಜುನನಿಗೆ ಹೊಣೆ ನೀಡಬಹುದು ಎಂದು ಆಗಿನ ವೈದ್ಯಾಧಿಕಾರಿ ಡಾ.ನಾಗರಾಜು, ಡಾ.ಉಮಾಶಂಕರ್‌ ಸಹಿತ ಹಲವರು ಸಲಹೆ ನೀಡಿದಾಗ ಆತ್ಮವಿಶ್ವಾಸ ತುಂಬಿದ್ದು ಆನೆ ಮಾವುತ ದೊಡ್ಡಮಾಸ್ತಿ. ಪುಟ್ಟದೇಹದ ಮಾಸ್ತಿ ಅರ್ಜುನನ ಮಾಸ್ಟರ್‌. ಆತನನ್ನು ಹೇಗೆ ನಿಗ್ರಹಿಸಬೇಕು ಎನ್ನುವುದು ಮಾಸ್ತಿಗೆ ಗೊತ್ತಿತ್ತು. ಇದೆಲ್ಲ ಕಾರಣಕ್ಕೆ ಅರ್ಜುನನಿಗೆ ಅವಕಾಶ ಸಿಕ್ಕು ಅಂಬಾರಿ ಹೊರುವ ಕಾಯಕವನ್ನು ಕೆಲ ವರ್ಷ ಯಶಸ್ವಿಯಾಗಿಯೇ ಮಾಡಿದ. ಈಗಲೂ ತಂಡದೊಂದಿಗೆ ದಸರಾಕ್ಕೆ ಬಂದಿದ್ದಾನೆ.

ಬಲರಾಮನಿಲ್ಲದ ದಸರಾ

ಕೆಲವು ಗಜಗಾತ್ರದ ಆನೆಗಳನ್ನು ನೋಡಿದಾಗ ಬಲರಾಮ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಸ್ವಭಾವದವನು. ಬಲರಾಮ ಶಾಂತ ಸ್ವಭಾವದ ಆನೆ. 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ ಎಂಬ ಆನೆಗಳನ್ನು ಹಿಡಿದಿದ್ದರು. ಅರ್ಜುನ ನಡವಳಿಕೆಯಿಂದ ದಸರಾದಿಂದಲೇ ಹಿಂದೆ ಸರಿಯಬೇಕಾದಾಗ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು. ಹನ್ನೊಂದು ವರ್ಷ ಅಂಬಾರಿ ಹೊತ್ತ ಬಲರಾಮ ಎರಡು ದಶಕಕ್ಕೂ ಹೆಚ್ಚು ಕಾಲ ದಸರಾದಲ್ಲಿ ಪಾಲ್ಗೊಂಡ ಹಿರಿಮೆ ಹೊಂದಿದೆ. ಕಳೆದ ವರ್ಷ ಬಲರಾಮ ಆನೆಗೆ ಗುಂಡೇಟು ಬಿದ್ದು ಗಾಯಗೊಂಡಿತ್ತು. ಆನಂತರ ಆನೆಯೊಂದಿಗೆ ಕಾದಾಟದಲ್ಲೂ ಸಿಲುಕಿತ್ತು. ಇದಾದ ನಂತರ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಲರಾಮ ತೀರಿಕೊಂಡ. ಇದರಿಂದ ಈ ಬಾರಿ ದಸರಾದಲ್ಲಿ ಬಲರಾಮನಿಲ್ಲ.

ಅಭಿಮನ್ಯು ಮತ್ತು ಕಾರ್ಯಾಚರಣೆ

ಇದಾದ ಬಳಿಕ ಅರ್ಜುನನಿಗೆ ಅಂಬಾರಿ ಜವಾಬ್ದಾರಿ ನೀಡಿದರೂ ಮಾವುತನನ್ನು ಕೊಂದ ಕುಖ್ಯಾತಿಯಿಂದ ಹಿಂದೆ ಸರಿಯಿತು. ಆಗ ಬಲರಾಮನಿಗೆ ಅವಕಾಶ ದೊರೆತು ಸತತ ಹನ್ನೊಂದು ವರ್ಷ ಅಂಬಾರಿ ಹೊತ್ತರೆ, ಮತ್ತೆ ಅರ್ಜುನನಿಗೆ ಅವಕಾಶ ದೊರೆತಿದೆ. ಅರ್ಜುನನ ಬಳಿಕ ಅಭಿಮನ್ಯುವಿಗೆ ಸ್ಥಾನ. ಹುಲಿ, ಆನೆ ಆಪರೇಷನ್‌ನಲ್ಲಿ ಸಿದ್ದಹಸ್ತ ಅಭಿಮನ್ಯು ಕೂಡ ಸರ್ಗೂಜ ಎನ್ನುವ ಸಾಕ್ಷ್ಯಚಿತ್ರದ ಹೀರೋ. ಮಧ್ಯಪ್ರದೇಶದಲ್ಲಿ ಆನೆ ಸೆರೆ ಕಾರ್ಯಾಚರಣೆ ಮುಂಚೂಣಿಯಲ್ಲಿದ್ದ ಅಭಿಮನ್ಯುವಿಗೆ ಈಗ ಅಂಬಾರಿ ಹೊರುವ ಕ್ಯಾಪ್ಟನ್‌ ಜವಾಬ್ದಾರಿ. ಮೂರನೇ ವರ್ಷದ ತಾಯಿ ಚಾಮುಂಡೇಶ್ವರಿಯೊಂದಿಗೆ ಅಂಬಾರಿ ಹೊತ್ತು ಸಾಗಲಿದ್ದಾನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ