ಕನ್ನಡ ಸುದ್ದಿ  /  ಕರ್ನಾಟಕ  /  Mangaluru: ಧರ್ಮಸ್ಥಳ ಲಕ್ಷದೀಪೋತ್ಸವಕ್ಕೂ ಬರಬೇಕು ಬೀಚ್​​ಗೂ ಹೋಗಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್

Mangaluru: ಧರ್ಮಸ್ಥಳ ಲಕ್ಷದೀಪೋತ್ಸವಕ್ಕೂ ಬರಬೇಕು ಬೀಚ್​​ಗೂ ಹೋಗಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್

HT Kannada Desk HT Kannada

Dec 07, 2023 02:45 PM IST

ಧರ್ಮಸ್ಥಳ (ಎಡಚಿತ್ರ), ತಣ್ಣೀರುಬಾವಿ ಬೀಚ್​ (ಬಲಚಿತ್ರ)

    • Managaluru Beaches: ಇದೀಗ ಹಬ್ಬ, ಉತ್ಸವಗಳ ಸೀಸನ್.. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಧರ್ಮಸ್ಥಳಕ್ಕೆ ನೇರವಾಗಿ ಬಂದು ಅಲ್ಲಿಯೇ ವಸತಿ ಮಾಡುವವರೂ ಅಥವಾ ಮಂಗಳೂರಿನಲ್ಲಿ ವಸತಿ ಮಾಡಿಕೊಂಡು ಧರ್ಮಸ್ಥಳಕ್ಕೆ ಉತ್ಸವಕ್ಕೆಂದಷ್ಟೇ ಬರುವವರಿಗೆ ಕಡಲ ಕಿನಾರೆಯ ಸುತ್ತಾಟ ಲಾಯಕ್ಕು.
ಧರ್ಮಸ್ಥಳ (ಎಡಚಿತ್ರ), ತಣ್ಣೀರುಬಾವಿ ಬೀಚ್​ (ಬಲಚಿತ್ರ)
ಧರ್ಮಸ್ಥಳ (ಎಡಚಿತ್ರ), ತಣ್ಣೀರುಬಾವಿ ಬೀಚ್​ (ಬಲಚಿತ್ರ)

ಮಂಗಳೂರು: ಸಾಮಾನ್ಯವಾಗಿ ಕರಾವಳಿಯ ಅವಳಿ ಜಿಲ್ಲೆಗಳಿಗೆ ಪ್ರವಾಸಕ್ಕೆಂದು ಬರುವವರು ಕಡಲ ಕಿನಾರೆಯನ್ನು ಮರೆಯುವುದಿಲ್ಲ. ತನ್ನ ಟೂರ್ ಪ್ಲಾನ್ ಅನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅತ್ಲಾಗೆ ಧಾರ್ಮಿಕವೂ ಇತ್ಲಾಗೆ ಗಮ್ಮತ್ತೂ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅತ್ಯುತ್ಸಾಹದಲ್ಲಿ ಕಡಲೆಂಬ ಕಡಲು ಸ್ವಲ್ಪ ಎಚ್ಚರ ತಪ್ಪಿದರೂ ನುಂಗಿ ಜೀವ ತೆಗೆದು ದಡಕ್ಕೆ ದೇಹವನ್ನಷ್ಟೇ ಕಳುಹಿಸುತ್ತದೆ ಎಂಬುದನ್ನು ಮರೆಯುತ್ತಾರೆ. ಹಾಗಾಗದಿರಲೆಂದು ಲೈಫ್ ಗಾರ್ಡ್ ಗಳು ಎಚ್ಚರಿಸುತ್ತಲೇ ಇರುತ್ತಾರೆ.

ಟ್ರೆಂಡಿಂಗ್​ ಸುದ್ದಿ

Bangalore News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ: ಬೆಂಗಳೂರಿನ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ಅಧಿವೇಶನದಲ್ಲಿ ಸಲಹೆ

Bangalore News: ಪೂರ್ವ ಮುಂಗಾರು ಚುರುಕು; ಬೆಂಗಳೂರಿನಲ್ಲಿ ನೀರಿನ ಸ್ಥಿತಿ ಈಗ ಹೇಗಿದೆ?

Mysore News: ಮೈಸೂರಿನ ಫೋಟೋ, ವಿಡಿಯೋ ತೆಗೆದಿದ್ದೀರಾ, ಸ್ಪರ್ಧೆಗೆ ಕಳುಹಿಸಿ 25 ಸಾವಿರ ರೂ. ಬಹುಮಾನ ಗೆಲ್ಲಿ

ದಾಮೋದರಾಚಾರ್ಯ, ಮಧ್ವೇಶ, ಸತ್ಯಬೋಧಾಚಾರ್ಯರಿಗೆ ಭಂಡಾರಕೇರಿ ಮಠದ ಪ್ರಶಸ್ತಿ, ಬೆಂಗಳೂರಿನಲ್ಲಿ 20 ರಂದು ಪ್ರದಾನ

ಇದೀಗ ಹಬ್ಬ, ಉತ್ಸವಗಳ ಸೀಸನ್.. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಧರ್ಮಸ್ಥಳಕ್ಕೆ ನೇರವಾಗಿ ಬಂದು ಅಲ್ಲಿಯೇ ವಸತಿ ಮಾಡುವವರೂ ಅಥವಾ ಮಂಗಳೂರಿನಲ್ಲಿ ವಸತಿ ಮಾಡಿಕೊಂಡು ಧರ್ಮಸ್ಥಳಕ್ಕೆ ಉತ್ಸವಕ್ಕೆಂದಷ್ಟೇ ಬರುವವರಿಗೆ ಕಡಲ ಕಿನಾರೆಯ ಸುತ್ತಾಟ ಲಾಯಕ್ಕು.

ಧರ್ಮಸ್ಥಳಕ್ಕೂ ಬರಬೇಕು, ಬೀಚ್​​ಗೂ ಹೋಗಬೇಕು ಎನ್ನುವವರಿಗೆ ಬಂಟ್ವಾಳ ಬೆಸ್ಟ್

ಸ್ವಂತ ವಾಹನದಲ್ಲಿ ಬರುವವರು ಧರ್ಮಸ್ಥಳಕ್ಕೂ ಹೋಗಬೇಕು, ಮಂಗಳೂರ ಸುತ್ತಾಟವೂ ಮಾಡಬೇಕು, ಕಡಲ ಕಿನಾರೆಯಲ್ಲಿ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ನೋಡಿ ಸಂಭ್ರಮಿಸಬೇಕು ಎಂದೆಲ್ಲಾ ಹಂಬಲಿಸುವವರು ಬಂಟ್ವಾಳದಂಥ ಮಂಗಳೂರು ಮತ್ತು ಧರ್ಮಸ್ಥಳದ ಮಧ್ಯ ಭಾಗದಲ್ಲಿ ವಸತಿ ಮಾಡಿಕೊಳ್ಳುವುದು ಬೆಸ್ಟ್. ಬಂಟ್ವಾಳ, ಬಿ.ಸಿ.ರೋಡ್ ಮತ್ತು ಮೆಲ್ಕಾರ್ ಗಳಲ್ಲಿ ಹೋಟೆಲ್ ವಸತಿಗೃಹವನ್ನು ಮುಂಚಿತವಾಗಿಯೇ ಬುಕ್ ಮಾಡಿದರೆ, ಮಂಗಳೂರು ಮತ್ತು ಧರ್ಮಸ್ಥಳ ಎರಡನ್ನೂ ಒಂದು ರಾತ್ರಿಯಷ್ಟೇ ತಂಗುವುದರ ಮೂಲಕ ಕವರ್ ಮಾಡಬಹುದು.

ಬಸ್​​​ನಲ್ಲಿ ತೆಳುವವರು ಬಸ್ಸಿನಲ್ಲಿ ಬಿ.ಸಿ.ರೋಡ್​​ನಲ್ಲಿಳಿದು (ಬಂಟ್ವಾಳ) ಬಿ.ಸಿ.ರೋಡ್, ಬಂಟ್ವಾಳದ ವಸತಿಗೃಹಕ್ಕೆ ಬೆಳಗಿನ ಜಾವ ತಲುಪಿದರೆ, ಫ್ರೆಶ್ ಆಗಿ ಧರ್ಮಸ್ಥಳಕ್ಕೆ ತೆರಳಬಹುದು. ಅಲ್ಲಿ, ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಿ, ಸುತ್ತಮುತ್ತಲಿರುವ ಮಂಜೂಷಾ ಮ್ಯೂಸಿಯಂ, ಬೆಟ್ಟವನ್ನು ನೋಡಿಕೊಂಡು, ಪ್ರಸಾದ ಭೋಜನ ಸ್ವೀಕರಿಸಿ, ನೇರವಾಗಿ ಮಂಗಳೂರಿಗೆ ತೆರಳುವ ಬಸ್ಸಿನಲ್ಲಿ ಮಂಗಳೂರಿಗೆ ತೆರಳಬಹುದು.

ಕೆಎಸ್​ಆರ್​​ಟಿಸಿ ಬಸ್ ನಿಲ್ದಾಣದಿಂದ ಅಲ್ಲಿಯೇ ಕೆಲವು ಹೆಜ್ಜೆ ಹಾಕಿದರೆ, ಲಾಲ್ ಬಾಗ್ ಎಂಬ ಜಾಗ ಸಿಗುತ್ತದೆ. ಪಕ್ಕದಲ್ಲೇ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ ಇದೆ. ಅಲ್ಲಿ ಹೊಟ್ಟೆ ತಂಪಾಗಿಸಿ, ತಣ್ಣೀರುಬಾವಿ ಬೀಚ್ ಅಥವಾ ಪಣಂಬೂರು ಬೀಚ್ ಗಳಿಗೆ ತೆರಳುವ ಬಸ್ ಹಿಡಿಯಬಹುದು. ಪಣಂಬೂರು ಬೀಚ್ ಆದರೆ ಬಸ್ ಸೌಕರ್ಯ ಜಾಸ್ತಿ. ಅಲ್ಲಿಂದ ಮರಳಿ ಬಿ.ಸಿ.ರೋಡ್, ಬಂಟ್ವಾಳಕ್ಕೆ ಬರಲು ಬೇಕಾದಷ್ಟು ಬಸ್ ಗಳಿವೆ. ಸ್ವಂತ ವಾಹನದಲ್ಲಿ ಆಗಮಿಸುವವರು ಇದೇ ಮಾರ್ಗದ ಜೊತೆಗೆ ತಣ್ಣೀರುಬಾವಿ, ಪಣಂಬೂರು ಅಷ್ಟೇ ಅಲ್ಲ, ಪಡುಬಿದ್ರಿಯಬ್ಲೂ ಫ್ಲ್ಯಾಗ್ ಬೀಚ್ ಗೂ ತೆರಳಬಹುದು.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ