logo
ಕನ್ನಡ ಸುದ್ದಿ  /  ಜೀವನಶೈಲಿ  /  ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಪ್ಲಾನ್ ಇದೆಯಾ; ಈ 5 ಸಿಂಪಲ್ ಟಿಪ್ಸ್ ಅನುಸರಿಸಿ

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಪ್ಲಾನ್ ಇದೆಯಾ; ಈ 5 ಸಿಂಪಲ್ ಟಿಪ್ಸ್ ಅನುಸರಿಸಿ

Raghavendra M Y HT Kannada

Jan 26, 2024 11:54 AM IST

google News

ಹಳೆ ಕಾರು ಖರೀದಿಸಲು 5 ಸಿಂಪಲ್ ಟಿಪ್ಸ್ ಇಲ್ಲಿವೆ.

  • ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಸ್ವಲ್ಪ ನಿರ್ಲಕ್ಷಿಸಿದರೂ ಮೋಸ ಹೋಗುವ ಸಾಧ್ಯತೆಗಳಿರುತ್ತದೆ. ಹಳೆ ಕಾರು ಖರೀದಿಸಲು 5 ಸಿಂಪಲ್ ಟಿಪ್ಸ್ ಇಲ್ಲಿವೆ.

ಹಳೆ ಕಾರು ಖರೀದಿಸಲು 5 ಸಿಂಪಲ್ ಟಿಪ್ಸ್ ಇಲ್ಲಿವೆ.
ಹಳೆ ಕಾರು ಖರೀದಿಸಲು 5 ಸಿಂಪಲ್ ಟಿಪ್ಸ್ ಇಲ್ಲಿವೆ.

ಬೆಂಗಳೂರು: ಹೊಸ ಕಾರಿಗಿಂತ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಕೆಲವರು ಆಸಕ್ತಿ ತೋರುತ್ತಾರೆ. ತಮ್ಮ ಬಜೆಟ್‌ಗೆ ತಕ್ಕಂತೆ ಇಂತಹ ಕಾರು ಖರೀದಿಸುವಾಗ ಒಂದಷ್ಟು ವಿಚಾರಗಳನ್ನು ತಿಳಿದಿರಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆಗಳಿರುತ್ತವೆ.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ವೈಯಕ್ತಿಕ ಹಣಕಾಸಿನ ಸಮಸ್ಯೆಗಳಿಂದಾಗಿ ಕಾರು ಪ್ರಿಯಕರು ಹೆಚ್ಚಾಗಿ ಬಳಸಿದ ಕಾರುಗಳ ಖರೀದಿಗೆ ಆಸಕ್ತಿ ತೋರುತ್ತಾರೆ. ಹಿಂದೂಸ್ತಾನ್ ಟೈಮ್ಸ್ ಆಟೋ ಪ್ರಕಾರ, ಬಳಸಿದ ಕಾರನ್ನು ಖರೀದಿಸುವ ಮುನ್ನ ಗಮನಿಸಬೇಕಾದ 5 ಪ್ರಮುಖ ಹಂತಗಳಿವೆ.

ನೋಡಿದ ತಕ್ಷಣ ಖರೀದಿಯ ನಿರ್ಧಾರ ಬೇಡ

ಮಾರುಕಟ್ಟೆಯಲ್ಲಿ ಕಾರನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ತಕ್ಷಣದ ನಿರ್ಧಾರ ಕೈಗೊಳ್ಳಬೇಡಿ. ಸಾಕಷ್ಟು ಸಮಯ ತೆಗೆದುಕೊಂಡ ನಂತರ ಕಾರಿನ ಬಗ್ಗೆ ಅಂತಿಮಗೊಳಿಸುವುದು ಯಾವಾಗಲೂ ಉತ್ತಮ. ಕಾರುಗಳು ಉತ್ತಮ ಸ್ಥಿತಿಯಲ್ಲಿ ಕಾಣಿಸಿಕೊಳ್ಳಬಹುದು, ಆದರೂ ವಿವಿಧ ಹಂತಗಳಲ್ಲಿ ಕಾರನ್ನ ಪರಿಶೀಲಿಸಬೇಕಾಗುತ್ತದೆ.

ಒಟ್ಟಾರೆ ಕಾರಿನ ಸ್ಥಿತಿ

ವಾಹನವನ್ನು ಆಯ್ಕೆ ಮಾಡಿದ ನಂತರದ ಮುಂದಿನ ಹಂತವೆಂದರೆ ಸಣ್ಣ ಮತ್ತು ತಾಂತ್ರಿಕ ಗುಣಗಳು ಸೇರಿದಂತೆ ಕಾರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು. ಕಾರು ಖರೀದಿಸುವ ಜ್ಞಾನದ ಬಗ್ಗೆ ನಿಮಗೆ ವಿಶ್ವಾಸವಿಲ್ಲದಿದ್ದರೆ ತಜ್ಞರ ಸಹಾಯವನ್ನು ಪಡೆಯಿರಿ. ನುರಿತ ವ್ಯಕ್ತಿಯು ಮೊದಲ ನೋಟದಲ್ಲಿ ಕಾಣಿಸಿಕೊಳ್ಳದ ಯಾವುದೇ ಗುಪ್ತ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಲು ಮತ್ತು ಅದಕ್ಕೆ ಅನುಗುಣವಾಗಿ ಅದರ ನಿಜವಾದ ವೆಚ್ಚವನ್ನು ಅಂದಾಜು ಮಾಡಲು ಸಾಧ್ಯವಾಗುತ್ತದೆ.

ಕಾರಿನ ಹೊರಗಡೆ ಹಾಗೂ ಒಳಗಡೆ ಏನಾದರೂ ಡ್ಯಾಮೇಜ್ ಆಗಿದೆಯೇ ಅನ್ನೋದನ್ನು ಗಮನಿಸಬೇಕು. ಸಾಮಾನ್ಯವಾಗಿ ಡ್ಯಾಮೇಜ್ ಆಗಿರುವ ಜಾಗದಲ್ಲಿ ಬಣ್ಣಹಚ್ಚಲಾಗಿರುತ್ತದೆ. ತುಕ್ಕು ಹಿಡಿದಿರುವುದು, ಆಸನಗಳ ಸ್ಥಿತಿ, ಮ್ಯೂಸಿಕ್ ಸಿಸ್ಟಮ್ ಹಾಗೂ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪರಿಶೀಲಿಸಬೇಕು. ಟೈರ್‌ಗಳ ಸವೆತ ಮತ್ತು ಚಕ್ರ ಜೋಡಣೆಯನ್ನ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಇಂಜಿನ್ ಕಂಡಿಷನ್, ಸೋರಿಕೆ ಬಗ್ಗೆ ಪರಿಶೀಲಿಸಬೇಕು.

ಟೆಸ್ಟ್ ಡ್ರೈವ್ ಮಾಡಬೇಕು

ರಸ್ತೆಯಲ್ಲಿ ಕಾರು ನಿಮ್ಮ ಆದ್ಯತೆಗಳಿಗೆ ಸರಿಹೊಂದುತ್ತದೆಯೇ ಎಂದು ಸಂಪೂರ್ಣವಾಗಿ ಅರಿತುಕೊಳ್ಳಲು ಟೆಸ್ಟ್ ಡ್ರೈವ್ ಮಾಡಬೇಕು. ಕಾರು ಹೊಸದಾಗಿರಲಿ ಅಥವಾ ಹಳೆಯದಿರಲಿ, ಟೆಸ್ಟ್ ಡ್ರೈವ್ ವಿವಿಧ ಘಟಕಗಳ ಕಾರ್ಯಕ್ಷಮತೆ ಮತ್ತು ಚಾಲನಾ ಕಾರ್ಯಕ್ಷಮತೆಯ ಬಗ್ಗೆ ನಿಖರವಾದ ತಿಳಿಯಲು ನೆರವಾಗುತ್ತದೆ. ಹಲವಾರು ಬಾರಿ ಟೆಸ್ಟ್ ಡೈವ್ ಅಗತ್ಯವಾಗಿರುತ್ತದೆ. ಪ್ರಮುಖವಾಗಿ ಹಳೆಯ ಕಾರು ಖರೀದಿಸುವ ಮುನ್ನ ನಿಮಗೆ ಕಾರಿನ ಬಗ್ಗೆ ಗೊತ್ತಿಲ್ಲದಿದ್ದರೆ ಗ್ಯಾರೇಜ್ ತಜ್ಞರ ಸಲಹೆ ಪಡೆಯಿರಿ.

ಕಾರು ನಿರ್ವಣೆಯ ಇತಿಹಾಸ

ಕಾರಿನಲ್ಲಿ ಈ ಹಿಂದಿನ ಸಮಸ್ಯೆಗಳು ತಿಳಿಯಲು ಕಾರಿನ ನಿರ್ವಹಣಾ ಇತಿಹಾಸವನ್ನು ಪರಿಶೀಲಿಸಬೇಕು. ಕೆಲವು ವಾಹನಗಳ ಮಾಲೀಕರು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಿರುತ್ತಾರೆ. ಆದರೆ ಕೆಲವರು ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ. ಅದೇನೇ ಇದ್ದರೂ, ಖರೀದಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾರಿನ ಹಿಸ್ಟರಿಯನ್ನ ಅರ್ಥಮಾಡಿಕೊಳ್ಳುವುದು ಮುಖ್ಯ.

ನೋಂದಣಿ ಪ್ರಮಾಣಪತ್ರ

ಕಾರು ಖರೀದಿಸುವ ಮೊದಲು ವಾಹನದ ನೋಂದಣಿ ಪ್ರಮಾಣಪತ್ರವನ್ನು (ಆರ್ ಸಿ) ಯಾವಾಗಲೂ ಪರಿಶೀಲಿಸಬೇಕು. ಪ್ರಮಾಣಪತ್ರವು ಮಾಲೀಕರ ಹೆಸರು ಮತ್ತು ಎಂಜಿನ್ ಮತ್ತು ಚಾಸಿಸ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ಹೊಂದಿರುತ್ತದೆ. ಡಿಆರ್ ಸಿಯು ಮೂಲವಲ್ಲದಿದ್ದರೆ ಅದನ್ನು ಪ್ರಮಾಣಪತ್ರದಲ್ಲಿ ಗುರುತಿಸಲಾಗುತ್ತದೆ. ನಕಲಿ ಆರ್ ಸಿ ಸಂದರ್ಭದಲ್ಲಿ, ಖರೀದಿದಾರನು ಡಿಆರ್ ಸಿಯ ಸ್ಥಿತಿ ಮತ್ತು ನೋಂದಣಿ ಸ್ಥಳದ ಬಗ್ಗೆ ಮಾರಾಟಗಾರರೊಂದಿಗೆ ಚರ್ಚಿಸಬೇಕು. ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು, ಆರ್ಸಿ ಖರೀದಿದಾರರ ಹೆಸರನ್ನು ದಾಖಲಿಸಬೇಕು.

ಮೂಲ ಖರೀದಿದಾರರ ಇನ್ವಾಯ್ಸ್, ವಿಮೆ, ರಸ್ತೆ ತೆರಿಗೆ ರಸೀದಿ ಮತ್ತು ಮಾಲಿನ್ಯ ಪ್ರಮಾಣಪತ್ರಗಳನ್ನ ಪರಿಶೀಲಿಸಬೇಕು. ಫಾರ್ಮ್ 35 ಮತ್ತು ಹಣಕಾಸು ಕಂಪನಿಯ ಎನ್ಒಸಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಬಳಸಿದ ಕಾರು ಖರೀದಿಸುವ ಪ್ಲಾನ್ ಮಾಡಿದ್ದರೆ ಈ ಮಾಹಿತಿ ನಿಮ್ಮಗೆ ಗೊತ್ತಿದ್ದರೆ ಮೋಸ ಹೋಗುವುದನ್ನ ತಪ್ಪಿಸಬಹುದು. (This copy first appeared in Hindustan Times Kannada website. To read more like this please logon to kannada.hindustantime.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ