ಕನ್ನಡ ಸುದ್ದಿ  /  ಜೀವನಶೈಲಿ  /  ಪುರುಷರ ತ್ವಚೆಯ ಆರೈಕೆಗಾಗಿ 5 ಉತ್ತಮ ಮಾರ್ಗಗಳು; ಈ ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್ ಮುಖ ಕಾಂತಿ ಕಳೆದುಕೊಳ್ಳದಿರಲಿ

ಪುರುಷರ ತ್ವಚೆಯ ಆರೈಕೆಗಾಗಿ 5 ಉತ್ತಮ ಮಾರ್ಗಗಳು; ಈ ಬೇಸಿಗೆಯಲ್ಲಿ ನಿಮ್ಮ ಸ್ಮಾರ್ಟ್ ಮುಖ ಕಾಂತಿ ಕಳೆದುಕೊಳ್ಳದಿರಲಿ

Jayaraj HT Kannada

Apr 29, 2024 07:25 AM IST

ಪುರುಷರ ತ್ವಚೆಯ ಆರೈಕೆಗಾಗಿ 6 ಉತ್ತಮ ಮಾರ್ಗಗಳು

    • Skincare tips for men: ಬೇಸಿಗೆಯ ಬಿರು ಬಿಸಿಲಿಗೆ ಪುರುಷರು ಕೂಡಾ ಮುಖದ ಸೌಂದರ್ಯ ಕಾಪಾಡಿಕೊಳ್ಳುವತ್ತ ಕಾಳಜಿ ವಹಿಸಬೇಕಾಗಿದೆ. ಗ್ರೂಮಿಂಗ್ ದಿನಚರಿಗಾಗಿ ಪುರುಷರಿಗೆ ಅಗತ್ಯವಾದ ತ್ವಚೆಯ ಆರೈಕೆ ಸಲಹೆಗಳು ಇಲ್ಲಿವೆ.
ಪುರುಷರ ತ್ವಚೆಯ ಆರೈಕೆಗಾಗಿ 6 ಉತ್ತಮ ಮಾರ್ಗಗಳು
ಪುರುಷರ ತ್ವಚೆಯ ಆರೈಕೆಗಾಗಿ 6 ಉತ್ತಮ ಮಾರ್ಗಗಳು (Freepik )

ಈ ಬೇಸಿಗೆ ಕಾಲದಲ್ಲಿ ಎಂಥ ದಪ್ಪ ಚರ್ಮವಾದರೂ ಕಾಂತಿ ಕಳೆದುಕೊಳ್ಳಬಹುದು. ಇನ್ನು, ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಸೌಂದರ್ಯ ಎಂಬುದು ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ. ಪುರುಷರು ಕೂಡಾ ಸಮನವಾಗಿ ದೇಹ ಹಾಗೂ ಮುಖದ ಗ್ರೂಮಿಂಗ್‌ಗೆ ಹೆಚ್ಚು ಗಮನ ಹರಿಸುತ್ತಾರೆ. ಬೇಸಿಗೆಯ ಖಾರ ಬಿಸಿಲಿನಲ್ಲಿ ಪುರುಷರು ತಮ್ಮ ಚರ್ಮದ ಆರೈಕೆಯತ್ತ ಹೆಚ್ಚು ಗಮನ ಹರಿಸಬೇಕಾಗುತ್ತದೆ. ತಮ್ಮ ದಿನಚರಿಯಲ್ಲಿ ತ್ವಚೆಯ ಕಾಳಜಿಗೆ ಆದ್ಯತೆ ನೀಡಬೇಕು. ಸೂರ್ಯನ ಶಾಖ ಮತ್ತು ಆರ್ದ್ರತೆಯು ಮೃದು ಚರ್ಮದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಪುರುಷರು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಚರ್ಮದ ಆರೈಕೆ ಮಾಡಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದಾ, ರಾಸಾಯನಿಕ ಸಿಂಪಡಿಸಿ ಹಣ್ಣು ಮಾಡಲಾಗಿದ್ಯಾ? ತಿಳಿಯೋದು ಹೇಗೆ ನೋಡಿ

ಕನಸಿಗೊಂದು ಅರ್ಥವಿದೆಯೇ? ಕಾಡುವ ಕನಸುಗಳ ಬಗ್ಗೆ ಮನಃಶಾಸ್ತ್ರ ಹೇಳುವುದೇನು? ನಿಮ್ಮ ಕನಸಿನ ಅರ್ಥ ತಿಳಿಯುವ ಆಸೆಯಿದ್ದರೆ ಈ ಬರಹ ಓದಿ -ಕಾಳಜಿ

Personality Test: ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು? ಪ್ರೀತಿ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗೆ ಎಂದು ತಿಳಿಸುತ್ತೆ ಈ ಚಿತ್ರ

Brain Teaser: ಈ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು, ಕ್ಯಾಲ್ಕುಲೆಟರ್‌ ಬಳಸದೇ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬೇಸಿಗೆಯಲ್ಲೂ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿ, ತಾಜಾತನದಿಂದ ಇರಿಸಬಹುದು. ಇದಕ್ಕಾಗಿ ಕೆಲವೊಂದು ಸರಳ ಸಲಹೆಗಳು ಇಲ್ಲಿವೆ.

ತ್ವಚೆಯನ್ನು ಸೂರ್ಯನಿಂದ ರಕ್ಷಿಸಿ

ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಆರೋಗ್ಯಕರ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್‌ ಬಳಸಿ. ಬ್ರಾಡ್‌ ಸ್ಪೆಕ್ಟ್ರಮ್ ಸನ್‌ಸ್ಕ್ರೀನ್‌ (SPF 30 ಅಥವಾ ಅದಕ್ಕಿಂತ ಹೆಚ್ಚಿರುವ) ಕ್ರೀಮ್‌ ಪುರುಷರಿಗೆ ಉತ್ತಮ. ಅದನ್ನು ಮುಖದ ತೆರೆದ ಪ್ರದೇಶಗಳಿಗೆ ಹಚ್ಚುವ ಮೂಲಕ ತ್ವಚೆಯನ್ನು ರಕ್ಷಿಸಬಹುದು. ಹೆಚ್ಚುವರಿಯಾಗಿ ಅಗಲವಾದ ಟೋಪಿ ಮತ್ತು ಸನ್‌ಗ್ಲಾಸ್ ಧರಿಸಿಕೊಂಡು ಹೊರಗಡೆ ಓಡಾಡಿ. ಅನಿವಾರ್ಯ ಹೊರತುಪಡಿಸಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವುದನ್ನು ನಿಲ್ಲಿಸಿ.

ಇದನ್ನೂ ಒದಿ | Parenting Tips: ಮಕ್ಕಳನ್ನು ಬೆಳೆಸುವಾಗ ಅಮ್ಮಂದಿರು ಎಂದಿಗೂ ಈ 9 ತಪ್ಪುಗಳನ್ನು ಮಾಡಲೇಬಾರದು; ತಾಯಂದಿರಿಗೆ ಇಲ್ಲಿದೆ ಮಹತ್ವದ ಸಲಹೆ

ಚರ್ಮವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ (ಕ್ಲೆನ್ಸ್‌ ಮಾಡಿ)

ಬಿಸಿಲಿಗೆ ಬೆವರು, ಕೊಳೆ ಹಾಗೂ ಎಣ್ಣೆಯ ಅಂಶಗಳು ಚರ್ಮದ ರಂಧ್ರಗಳನ್ನು ಮುಚ್ಚಬಹುದು. ಚರ್ಮದ ಕಲ್ಮಶಗಳನ್ನು ತೆಗೆದುಹಾಕಲು ಚರ್ಮವನ್ನು ಫೇಸ್ ಕ್ಲೆನ್ಸರ್ ಬಳಸಿ ಸ್ವಚ್ಛಗೊಳಿಸಿ. ಬೇಸಿಗೆಯಾದ ಕಾರಣದಿಂದ ಮುಖವನ್ನು ದಿನಕ್ಕೆ ಎರಡು ಬಾರಿ ಕ್ಲೀನ್‌ ಮಾಡಿ. ಪುರುಷರಿಗಾಗಿಯೇ ಫೇಸ್ ವಾಶ್ ಉತ್ಪನ್ನಗಳು ಲಭ್ಯವಿದೆ. ಅದನ್ನು ಬಳಸಿ.

ಯಥೇಚ್ಛವಾಗಿ ನೀರು ಕುಡಿಯಿರಿ, ದೇಹವನ್ನು ಹೈಡ್ರೇಟ್ ಮಾಡಿ

ದಿನವಿಡೀ ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ. ಸೂರ್ಯನ ಶಾಖ ಮತ್ತು ಆರ್ದ್ರತೆಯಿಂದ ನಿಮ್ಮ ಚರ್ಮದ ತೇವಾಂಶ ಕಡಿಮೆಯಾಗಬಹುದು. ಹೀಗಾಗಿ ತೇವಾಂಶವನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ಹೈಲುರೊನಿಕ್ ಆಮ್ಲದಂತಹ (hyaluronic acid) ಪದಾರ್ಥಗಳಿರುವ ಮಾಯಿಶ್ಚರೈಸರ್ ಬಳಸಿ.

ತುಟಿಗಳ ಬಗ್ಗೆ ಕಾಳಜಿ ವಹಿಸಿ

ತುಟಿಗಳನ್ನು ಕೂಡಾ ಸೂರ್ಯನ ಹಾನಿ ಮತ್ತು ಶುಷ್ಕತೆಯಿಂದ ರಕ್ಷಿಸುವುದನ್ನು ಮರೆಯಬೇಡಿ. ಸೂರ್ಯನ ಕಿರಣಗಳಿಂದ ತುಟಿಯನ್ನು ರಕ್ಷಿಸಲು ನಿಯಮಿತವಾಗಿ SPF ಇರುವ ಲಿಪ್ ಬಾಮ್ ಹಚ್ಚಿ. ಇದರ ಹೊರತಾಗಿ ತುಟಿಗಳನ್ನು ತೇವಗೊಳಿಸಲು ಹೈಡ್ರೇಟಿಂಗ್ ಲಿಪ್ ಬಾಮ್ ಹಚ್ಚಿ.

ಆರೋಗ್ಯಕರ ಜೀವನಶೈಲಿ ಅನುಸರಿಸಿ

ಚರ್ಮದ ಸರಿಯಾದ ಆರೈಕೆಗಾಗಿ ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮುಖ್ಯ. ರಕ್ತ ಪರಿಚಲನೆಯನ್ನು ಸುಧಾರಿಸಲು ನಿಯಮಿತ ವ್ಯಾಯಾಮ ಮಾಡಿ. ಹಣ್ಣು, ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಿ. ಅತಿಯಾದ ಆಲ್ಕೋಹಾಲ್ ಸೇವನೆ ಹಾಗೂ ಧೂಮಪಾನವನ್ನು ನಿಯಂತ್ರಿಸಿ.

    ಹಂಚಿಕೊಳ್ಳಲು ಲೇಖನಗಳು